ಸೀಟ್: ಹೈಜಾಕ್ ಆಗಿದ್ದ ಅಲಾಸ್ಕಾ ಏರ್ ಲೈನ್ಸ್ ಗೆ ಸೇರಿದ ವಿಮಾನವೊಂದು ಸೀಟ್ನ ಸೀ-ಟಾಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪತನಗೊಂಡಿದೆ.
ಸಿ-ಟಾಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕೃತ ಪ್ರಕಟಣೆಯಂತೆ, ಹೋರಿರೆನ್ ಏರ್ ಕ್ಯೂ 400 ವಿಮಾನವನ್ನು ಏರ್ ಲೈನ್ಸ್ ಗೆ ಸೇರಿದ ಸಿಬ್ಬಂದಿಯೊಬ್ಬರೇ ಅಪಹರಿಸಿ, ಪತನಗೊಳಿಸಿದ್ದಾರೆ.
We are aware of an incident involving an unauthorized take-off of a Horizon Air Q400. We believe there are no passengers on board. More information as we learn more.
— Alaska Airlines (@AlaskaAir) August 11, 2018
ಅಲಾಸ್ಕಾ ನಿಲ್ದಾಣದ ಸನಿಹವೇ ಈ ಘಟನೆ ನಡೆದಿದ್ದು, ಬೇರೆ ವಿಮಾನ ಹಾರಾಟಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.
ಪತನಗೊಂಡ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇಲ್ಲದೇ ಇದ್ದುದರಿಂದ ಸಾವು ಸಂಭವಿಸಿಲ್ಲ ಎಂದು ವರದಿಯಾಗಿದೆ.
We've confirmed a Horizon Air Q400 that had an unauthorized takeoff from SeaTac around 8pm has gone down near Ketron Island in Pierce County, WA. We're working to confirm who was on board, we believe there were no guests or crew on board other than the person operating the plane.
— Alaska Airlines (@AlaskaAir) August 11, 2018
ಇನ್ನು, ವಿಮಾನ ಅಪಹರಣವಾದ ನಂತರ ಮಿಲಿಟರಿ ಜೆಟ್ ವಿಮಾನಗಳು ಇವನ್ನು ಹಿಂಬಾಲಿಸಿದ್ದವು. ಆದರೆ, ಆ ವೇಳೆ ವಿಮಾನ ಪತನಗೊಂಡಿದೆ.
Discussion about this post