ಕಲ್ಪ ಮೀಡಿಯಾ ಹೌಸ್ | ಸಾಗರ |
ಆವಿಗೆ ಗ್ರಾಮದ ಮಳೂರು ರಾಮೇಶ್ವರ ದೇವಾಲಯ ಜೀರ್ಣೋದ್ಧಾರಕ್ಕೆ 2 ಲಕ್ಷ ರೂ. ಅನುದಾನ ಮಂಜೂರು ಮಾಡಿಸಿರುವ ಶಾಸಕ ಎಚ್. ಹಾಲಪ್ಪನವರಿಗೆ ದೇಗುಲ ಸಮಿತಿಯಿಂದ ಅಭಿನಂದಿಸಲಾಯಿತು.
ಮಳೂರು ಎಸ್.ಎಸ್. ಭೋಗ್ ಶಕ್ತಿಕೇಂದ್ರ ಅಧ್ಯಕ್ಷರಾದ ಚಂದ್ರರಾಜ್ ಅವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರ ಸಹಕಾರವನ್ನು ಸ್ಮರಿಸಿ, ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ಆವಿನಹಳ್ಳಿ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ತುಮರಿ-ಬ್ಯಾಕೋಡು ಭಾಗದ ಸಭೆ ನೆಡೆಸಿ, ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಿ, ಕಾರ್ಯಕರ್ತರ ಕುಂದುಕೊರತೆಗಳು, ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸಿದರು.
Also read: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಯತ್ನ: ಓರ್ವ ಮಹಿಳೆ ಸಾವು
ಬಿಜೆಪಿ ಜಿಲ್ಲಾಧ್ಯಕ್ಷರು, ಮಂಡಲ ಪ್ರಧಾನ ಕಾರ್ಯದರ್ಶಿಗಳು, ಪ್ರಭಾರಿಗಳು, ಮಹಾಶಕ್ತಿ ಕೇಂದ್ರ, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಭಾರಂಗಿ ಮಹಾಶಕ್ತಿ ಕೇಂದ್ರದ ಸಭೆ
ಇನ್ನು, ಭಾನುಕುಳಿ ಮರಿಯಪ್ಪ ಜೈನ್ ಅವರ ಮನೆಯಲ್ಲಿ, ಭಾರಂಗಿ ಮಹಾಶಕ್ತಿ ಕೇಂದ್ರದ ಸಭೆ ನೆಡೆಸಿ, ಸಂಘಟನಾತ್ಮಕ ವಿಚಾರಗಳ ಬಗ್ಗೆ, ಕಾರ್ಯಕರ್ತರ ಕುಂದುಕೊರತೆಗಳು ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಶಾಸಕರು ಚರ್ಚಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷರು, ಮಂಡಲ ಪ್ರ.ಕಾರ್ಯದರ್ಶಿಗಳು, ಪ್ರಭಾರಿಗಳು, ಮಹಾಶಕ್ತಿ ಕೇಂದ್ರ, ಬೂತ್ ಅಧ್ಯಕ್ಷರು, ಪದಾಧಿಕಾರಿಗಳು, ಪಕ್ಷದ ಮುಖಂಡರು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post