ಹಾವೇರಿ: ಸಂತ್ರಸ್ಥ ಮಗುವಿನ ಹೆಸರು, ವಿಳಾಸ, ಭಾವಚಿತ್ರ, ಕೌಟುಂಬಿಕ ವಿವರಗಳು, ಶಾಲೆ, ನೆರೆಹೊರೆ ಅಥವಾ ಮಗುವಿನ ಗುರುತನ್ನು ಬಹಿರಂಗ ಪಡಿಸಬಹುದಾದಂಥ ಯಾವುದೇ ಇತರೆ ವಿವರಗಳನ್ನೊಳಗೊಂಡ ಯಾವ ವರದಿಗಳನ್ನು ಯಾವುದೇ ವ್ಯಕ್ತಿ ಮುದ್ರಣ ಅಥವಾ ವಿದ್ಯುನ್ಮಾನ, ಸಾಮಾಜಿಕ ಮಾಧ್ಯಮ, ಇತರೆ ಮಾಧ್ಯಮಗಳಲ್ಲಿ ಬಹಿರಂಗ ಪಡಿಸತಕ್ಕದ್ದಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಆದೇಶ ಹೊರಡಿಸಿದೆ.
ಸಂತ್ರಸ್ಥ ಮಗು ಮರಣ ಹೊಂದಿದ್ದರೂ ಮತ್ತು ಮಾನಸಿಕವಾಗಿ ಅಸ್ವಸ್ತವಾಗಿದ್ದರೂ ಅಂತಹ ಮಗುವಿನ ಮೇಲೆ ಅತ್ಯಾಚಾರ ಆಗಿದ್ದಲ್ಲಿ ಅಂತಹ ಮಕ್ಕಳ ಗುರುತನ್ನು ಬಹಿರಂಗಪಡಿಸಲು ಅವರ ಸಂಬಂಧಿಗಳು ಅಧಿಕಾರ ನೀಡಿದರೂ ಕೂಡ ಬಹಿರಂಗಪಡಿಸುವಂತಿಲ್ಲ. ಪರಂತು ಗುರುತನ್ನು ಬಹಿರಂಗಪಡಿಸುವಿಕೆಯನ್ನು ಸಮರ್ಥಿಸುವ ಸಂದರ್ಭದಲ್ಲಿ ಅದನ್ನು ಅರ್ಹ ಅಧಿಕಾರಿಯಿಂದ ನಿರ್ಧರಿಸುವುದು, ಪ್ರಸ್ತುತ ಅಂತಹ ಅಧಿಕಾರಿ ಸೆಷನ್ ಜಡ್ಜ್ಗೆ ಇದೆ.(ಅಂದರೆ ಸೆಷನ್ ಜಡ್ಜ್’ರವರು ಮಗುವಿನ ಗುರುತನ್ನು ಬಹಿರಂಗಪಡಿಸಬಹುದೋ ಇಲ್ಲವೋ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಹೊಂದಿದ್ದಾರೆ).
ಒಂದು ವೇಳೆ ಪೊಕ್ಸೋ ಅಡಿಯಲ್ಲಿರುವ ಅಪ್ರಾಪ್ತ ಸಂತ್ರಸ್ಥರ ಗುರುತನ್ನು ಬಹಿರಂಗಪಡಿಸಬೇಕಾದಲ್ಲಿ ಅದೂ ಮಗುವಿನ ಹಿತಾಸಕ್ತಿಗೆ ಅನುಗುಣವಾಗಿದ್ದಲ್ಲಿ, ವಿಶೇಷ ನ್ಯಾಯಾಲಯದ ಅನುಮತಿ ಪಡೆದು ಬಹಿರಂಗಪಡಿಸುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ: 08375-233062ನ್ನು ಸಂಪರ್ಕಿಸಬಹುದು.
Discussion about this post