ನವದೆಹಲಿ: ಭಾರತದ ಯೋಗ ಗುರು ರಾಮ್ ದೇವ್ ಮುಂದೊಂದು ದಿನ ಭಾರತದ ಪ್ರಧಾನಿಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ: ಹೀಗೆಂದು ಹೇಳಿರುವುದು ಜಗತ್ತಿನ ಅತ್ಯಂತ ಪ್ರಭಾವಿ ದಿನಪತ್ರಿಕೆ ನ್ಯೂಯಾರ್ಕ್ ಟೈಮ್ಸ್.
ಹೌದು.. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಯೋಗ ಗುರು ರಾಮ್ ದೇವ್ ಅವರ ನಡುವಿನ ಸಾಮ್ಯತೆಯನ್ನು ಕುರಿತಾಗಿ ಲೇಖನವೊಂದನ್ನು ಪತ್ರಿಕೆ ಪ್ರಕಟಿಸಿದ್ದು, ಅಮೆರಿಕಾಕ್ಕೆ ಟ್ರಂಪ್ ರೀತಿಯಲ್ಲಿ ಭಾರತಕ್ಕೆ ರಾಮ್ ದೇವ್. ಇಬ್ಬರ ಸಾಮ್ಯತೆಯನ್ನು ಗಮನಿಸಿದರೆ ರಾಮ್ ದೇವ್ ಮುಂದೊಂದು ದಿನ ಭಾರತದ ಪ್ರಧಾನಿಯಾಗುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.
The Billionaire Yogi Behind Modi’s Rise ಎನ್ನುವ ಲೇಖನದಲ್ಲಿ ಈ ವಿಚಾರನ್ನು ಪ್ರಸ್ತಾಪ ಮಾಡಿರುವ ನ್ಯೂಯಾರ್ಕ್ ಟೈಮ್ಸ್, ಟ್ರಂಪ್ ಮತ್ತು ರಾಮದೇವ್ ನಡುವಿನ ಸಾಮ್ಯತೆಯಿದೆ. ಟ್ರಂಪ್ ರೀತಿ ರಾಮದೇವ್ ಕೂಡ ಬಿಲಿಯನ್ ಡಾಲರ್ ಸಾಮ್ರಾಜ್ಯದ ನೇತೃತ್ವ ವಹಿಸಿದ್ದಾರೆ. ಅಲ್ಲದೆ ಅವರು ಟಿವಿಗೆ ಹೊಂದುವ ಮತ್ತು ಸತ್ಯವನ್ನು ಎಲಾಸ್ಟಿಕ್ ನಂತೆ ಎಳೆಯುವ ವ್ಯಕ್ತಿತ್ವವಿದೆ ಮತ್ತು ಅವರ ಬ್ರ್ಯಾಂಡ್ ನ್ನು ಯಾರಿಗೂ ಕೂಡ ತಡೆಯಲು ಸಾಧ್ಯವಿಲ್ಲ ಅವರ ಹೆಸರು ಮತ್ತು ಮುಖ ಪರಿಚಯ ಇಡೀ ಭಾರತದಾದ್ಯಂತ ಚಿರಪಚಿತ ಎಂದು ಅಭಿಪ್ರಾಯಪಟ್ಟಿದೆ.