Read - < 1 minute
ರಾಯಚೂರು, ಸೆ.30: ಡಿಸೆಂಬರ್ 2ರಿಂದ 4ರವರೆಗೆ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರೂ ಆದ ಉಸ್ತುವಾರಿ ಮಂತ್ರಿ ತನ್ವೀರ್ ಸೇಠ್ ಬಿಡುಗಡೆ ಮಾಡಿದರು.
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಲಾಂಛನ ಬಿಡುಗಡೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು, ಮುಂದಿನ ವಾರದಲ್ಲಿ ಸಮ್ಮೇಳನದ ಅಧ್ಯಕ್ಷರನ್ನು ಘೋಷಣೆ ಮಾಡಲು ತೀರ್ಮಾನ ಮಾಡಲಾಗಿದೆ. ಸಮ್ಮೇಳನಕ್ಕೆ ಇದೆ ಮೊದಲ ಭಾರಿಗೆ ಸರ್ಕಾರ 4ಕೋಟಿ ಅನುದಾನ ನೀಡಿದೆಂದರು.
ಈ ಸಂದರ್ಭದಲ್ಲಿ ಸಂಸದ ಬಿ.ವಿ. ನಾಯಕ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಹಾಗೂ ಶಾಸಕರಾದ ಡಾ.ಶಿವರಾಜ ಪಾಟೀಲ್, ಹಂಪನಗೌಡ, ಪ್ರತಾಪಗೌಡ ಪಾಟೀಲ್ ಮಸ್ಕಿ, ಕಾಡಾಧ್ಯಕ್ಷ ಎ. ವಸಂತಕುಮಾರ್, ಎಂಎಲ್ ಸಿ ಬಸವರಾಜ ಪಾಟೀಲ್ ಇಟಗಿ, ಶರಣಪ್ಪ ಮಟ್ಟೂರ, ಜಿ.ಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ, ನಗರಸಭೆ ಅಧ್ಯಕ್ಷೆ ಹೇಮಲತಾ ಪಿ. ಬೂದೆಪ್ಪ, ಮಾಜಿ ಶಾಸಕ ಸೈಯಾದ್ ಯಾಸೀನ್, ಕಸಾಪ ಅಧ್ಯಕ್ಷ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ಜಿಲ್ಲಾಧಿಕಾರಿ ಸಸಿಕಾಂತ ಎಸ್. ಸೆಂಥಿಲ್, ಭೀಮನಗೌಡ ಇಟಗಿ, ತಿಮ್ಮಣ್ಣ, ಜೆ.ಎಲ್. ಈರಣ್ಣ ಇನ್ನಿತರ ಕಸಾಪ ಪದಾಧಿಕಾರಿಗಳು, ಸಾರ್ವಜನಿಕರು ಸಾಹಿತಿಗಳು ಉಪಸ್ಥಿತರಿದ್ದರು.
Discussion about this post