Read - < 1 minute
ನವದೆಹಲಿ, ಅ.19: ಕೃಷ್ಣಾ ನದಿ ನೀರು ಹಂಚಿಕೆ ಸಂಬಂಧ ಕೃಷ್ಣ ನ್ಯಾಯಾಧೀಕರಣ ಇಂದ ತೀರ್ಪು ಪ್ರಕಟಿಸಿದ್ದು, ಆಂಧ್ರಪ್ರದೇಶದ ನೀರನ್ನೇ ತೆಲಂಗಾಣವೂ ಸಹ ಹಂಚಿಕೆ ಮಾಡಿಕೊಳ್ಳಬೇಕು ಎಂದು ಹೇಳುವ ಮೂಲಕ ಕರ್ನಾಟಕಕ್ಕೆ ರಿಲೀಫ್ ನೀಡಿದೆ.
ಕೃಷ್ಣಾ ನದಿ ನೀರನ್ನು ಮರು ಹಂಚಿಕೆ ಮಾಡಬೇಕು ಎಂದು ತೆಲಂಗಾಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಕೃಷ್ಣ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ. ಬ್ರಿಜೇಶ್ ಕುಮಾರ್ ಇಂದು ಈ ಮಹತ್ವದ ತೀರ್ಪು ಪ್ರಕಟಿಸಿದ್ದು, ಆಂಧ್ರಪ್ರದೇಶ, ತೆಲಂಗಾಣ ನಡುವೆ ಮಾತ್ರ ನೀರು ಹಂಚಿಕೆ ಮಾಡಿಕೊಳ್ಳುವಂತೆ ತಿಳಿಸಿದೆ.
ತೆಲಂಗಾಣಕ್ಕಾಗಿ ಐ ತೀರ್ಪನ್ನು ಮರು ಪರಿಶೀಲಿಸುವ ಅಗತ್ಯವಿಲ್ಲ. ಹೀಗಾಗಿ ಈ ಹಿಂದೆ ಆಂಧ್ರ ಪ್ರದೇಶಕ್ಕೆ ಹಂಚಿಕೆ ಮಾಡಲಾಗಿರುವ ನೀರಲ್ಲೇ ತೆಲಂಗಾಣಕ್ಕೂ ನೀರು ಬಿಡುಗಡೆ ಮಾಡಬೇಕು ಎಂದು ಹೇಳಿರುವ ಪೀಠ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿದೆ.
ಕೃಷ್ಣಾ ನ್ಯಾಯಾಧಿಕರಣವು ಈಗಾಗಲೇ ಕೃಷ್ಣ ಕೊಳ್ಳದ ನೀರಿನಲ್ಲಿ ಮಹಾರಾಷ್ಟ್ರಕ್ಕೆ 666ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಹಾಗೂ ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರನ್ನು ಹಂಚಿತ್ತು.
ಆದರೆ ತೆಲಂಗಾಣ ರಾಜ್ಯ ರಚನೆಯಾಗಿರುವುದರಿಂದ ನದಿ ನೀರು ಮರು ಹಂಚಿಕೆ ಮಾಡುವಂತೆ ಕೋರಿ ತೆಲಂಗಾಣ ಕೃಷ್ಣಾ ನ್ಯಾಯಾಧಿಕರಣಕ್ಕೆ ಮೇಲ್ಮನವಿ ಸಲ್ಲಿಸಿತ್ತು.
ಈಗ ನ್ಯಾಯಾಧೀಕರಣದ ತೀರ್ಪಿನಿಂದ ಕರ್ನಾಟಕ ಹಾಗೂ ಮಹಾರಾಷ್ಟ್ರಕ್ಕೆ ದೊಡ್ಡ ರಿಲೀಫ್ ದೊರೆತಿದೆ.
Discussion about this post