ಬೆಂಗಳೂರು: ಮೆಡಿಕಲ್ ಸೀಟ್ ಕೊಡಿಸುವುದಾಗಿ ಕೋಟಿ ಕೋಟಿ ಹಣವನ್ನು ಡೊನೇಷನ್ ರೂಪದಲ್ಲಿ ಪಡೆಯುತ್ತಿದ್ದ ಆದಿಕೇಶ್ವರಲು ಗ್ರೂಫ್ ಆಫ್ ಕಂಪನಿಯ ವೈದೇಹಿ ಕಾಲೇಜಿನ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿ ಪಡೆದು ಮಂಗಳವಾರ ದಾಳಿ ನಡೆಸಿದ ಆದಾಯ ತೆರಿಗೆ ಅಧಿಕಾರಿಗಳಿಗೆ ಸುಮಾರು 50 ಕೋಟಿ ರೂ. ಹಣ ಸಿಕ್ಕಿದ್ದು, ಈ ಹಣ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಬಂದಿದ್ದ ವಿದ್ಯಾಥರ್ಿಗಳಿಂದ ಡೋನೆಷನ್ ವೇಳೆ ಪಡೆದ ಹಣ ಎನ್ನುವುದು ತನಿಖೆ ವೇಳೆ ಪತ್ತೆಯಾಗಿದೆ.
ಇದೇ ರೀತಿಯಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಬೆಂಗಳೂರು ಕೇರಳ ಎಲ್ಲಾ ಕಡೆಯಲ್ಲೂ ಆದಿಕೇಶ್ವರಲು ಗ್ರೂಪ್ನ ಕಂಪೆನಿಗಳಿದ್ದು, ಎಲ್ಲಾ ಕಂಪನಿಗಳು ಅಕ್ರಮವಾಗಿ 265 ಕೋಟಿಗೂ ಹೆಚ್ಚು ಹಣವನ್ನು ವಹಿವಾಟು ಮಾಡಿರುವುದು ಗೊತ್ತಾಗಿದೆ.
ಕಂಪೆನಿಯ ಜೊತೆಗೆ ಸುಳ್ಳು ಆದಾಯ ತೆರಿಗೆ ಪ್ರಮಾಣಪತ್ರ ನೀಡಿ ಒಂದು ಸೀಟಿಗೆ 3 ಕೋಟಿಯಷ್ಟು ಹಣವನ್ನು ನೀಡುತ್ತಿದ್ದ ಪೋಷಕರ ವಿರುದ್ಧವೂ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಮುಂದುವರೆಸುತ್ತೇವೆ ಎಂದು ಪ್ರಧಾನ ಆದಾಯ ತೆರೆಗೆ ಆಯುಕ್ತ ನೂತನ್ ಒಡೆಯರ್ ತಿಳಿಸಿದ್ದಾರೆ.
ಐಟಿ ದಾಳಿ ವೇಳೆ ಕನರ್ಾಟಕದಲ್ಲಿ ಪತ್ತೆಯಾದ ಅತಿ ಹೆಚ್ಚಿನ ಹಣ ಇದಾಗಿದೆ. ಭಾರತಕ್ಕೆ ಹೋಲಿಸಿದರೆ ಪಾಂಡಿಚೇರಿಯ ಖಾಸಗಿ ಮೆಡಿಕಲ್ ಕಾಲೇಜಿನ ಮೇಲೆ ಈ ಹಿಂದೆ ನಡೆಸಿದ ದಾಳಿ ವೇಳೆ 82 ಕೋಟಿ ರೂಸಿಕ್ಕಿತ್ತು.
Discussion about this post