ನವದೆಹಲಿ, ಸೆ.20: ಕಳೆದ ಲೋಕಸಭಾ ಚುನಾವಣೆಯಲ್ಲಿ ಅಬ್ಬರಿಸಿದ ಮೋದಿ ಹವಾ ನರೇಂದ್ರ ಮೋದಿಯನ್ನು ನಂ.7, ರೇಸ್ಕೋರ್ಸ್ ಗೆ ಕರೆದುಕೊಂಡು ಬಂದಿದೆ. ಆ ಹವಾವನ್ನು ಇಂದಿಗೂ ಮೋದಿ ಉಳಿಸಿಕೊಂಡಿದ್ದರೆ, ಕಾಂಗ್ರೆಸ್ ಮಾತ್ರ ಯಥಾರೀತಿ ಕಳಪೆಯನ್ನೇ ಹೊಂದಿದೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರುಗಳನ್ನು ಪ್ರಮುಖವಾಗಿಟ್ಟುಕೊಂಡು ಸಂಸ್ಥೆಯೊಂದ ಸಮೀಕ್ಷೆ ನಡೆಸಿದೆ. ಅದರ ವಿವರಗಳು ಇಂತಿವೆ.
ನರೇಂದ್ರ ಮೋದಿ:
*ಶೇ.81ರಷ್ಟು ಮಂದಿ ಭಾರತೀಯರು ಇಂದಿಗೂ ಇಷ್ಟಪಡುತ್ತಾರೆ.
*2015ರಲ್ಲಿ ಶೇ.87 ರಷ್ಟು ಒಲವನ್ನು ಹೊಂದಿದ್ದ ಮಂದಿಯ ಒಟ್ಟಾರೆ ಸಂಖ್ಯೆಯಲ್ಲಿ ಶೇ.57ರಷ್ಟು ಇಂದಿಗೂ ಮೋದಿ ಪರ ಇದ್ದಾರೆ.
*ಮೋದಿ ಅವರ ಕಾರ್ಯಶೈಲಿ ಕುರಿತಾಗಿ ಶೇ.65ರಷ್ಟು ಮಂದಿ ತೃಪ್ತಿ ಹೊಂದಿದ್ದರೆ, ದೇಶದ ಆರ್ಥಿಕ ವ್ಯವಸ್ಥೆ ಮೋದಿಯಿಂದಾಗಿ ಗಟ್ಟಿಗೊಳ್ಳುತ್ತಿದೆ ಎಂದು ಶೇ.80ರಷ್ಟು ಮಂದಿ ಹೇಳಿದ್ದಾರೆ. ಈ ಪ್ರಮಾಣ 2014ರಲ್ಲಿ ಶೇ.55ರಷ್ಟಿತ್ತು.
*ಅತ್ಯಂತ ಪ್ರಮುಖವಾದ ಅಂಶವೆಂದರೆ, ಕಾಂಗ್ರೆಸ್ನ್ನು ಬೆಂಬಲಿಸುವ ಶೇ.24ರಷ್ಟು ಮಂದಿಯೂ ಸಹ ಮೋದಿ ಅವರನ್ನು ಬೆಂಬಲಿಸಿದ್ದಾರೆ.
*ಮೋದಿ ವ್ಯಕ್ತಿಗತವಾಗಿಯೂ ಸಹ ಅತ್ಯಂತ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದು, ಗ್ರಾಮೀಣ ಭಾಗದಲ್ಲೂ ಸಹ ಭಾರೀ ಬೆಂಬಲ ವ್ಯಕ್ತವಾಗಿದೆ.
*ಮೋದಿ ದೇಶ ಹಾಗೂ ದೇಶವಾಸಿಗಳ ಕುರಿತಾಗಿ ಕಾಳಜಿ ವಹಿಸುತ್ತಾರೆ ಎಂದು ಶೇ.೫೬ರಷ್ಟಿ ಮಂದಿ ಅಭಿಪ್ರಾಯಪಟ್ಟಿದ್ದಾರೆ.
*ಮೋದಿ ಕೆಲಸ ಮಾಡಿ ತೋರಿಸುತ್ತಾರೆ ಎಂದು ಶೇ.51ರಷ್ಟು ಮಂದಿ ಹೇಳಿದ್ದಾರೆ.
*ಪ್ರಸ್ತುತ ಸಂದರ್ಭದಲ್ಲಿ ಪ್ರಪಂಚದ ಆರ್ಥಿಕತೆಯಲ್ಲಿ ಭಾರತ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಶೇ.68 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
*ಇದೇ ವೇಳೆ, ಪಾಕ್ ಕುರಿತು ಮೋದಿ ನಡೆಗಳು ಸರಿಯಾಗಿವೆ ಎಂದು ಶೇ.22 ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಒಟ್ಟಾರೆಯಾಗಿ ಬಿಜೆಪಿ ಜನಪ್ರಿಯತೆ 2015ರಲ್ಲಿ ಶೇ.87 ರಷ್ಟಿತ್ತು. ಆದರೆ, 2015ರಲ್ಲಿ ಇದರ ಪ್ರಮಾಣ ಶೇ.80ರಷ್ಟಕ್ಕೆ ಇಳಿದಿದೆ.
ರಾಹುಲ್ ಗಾಂಧಿ:
*2013ರಲ್ಲಿ ಶೇ.50ರಷ್ಟು ಜನಪ್ರಿಯತೆ ಹೊಂದಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ, ಪ್ರಸ್ತುತ ಶೇ.63ರಷ್ಟು ಜನಪ್ರಿಯತೆಯನ್ನು ಹೊಂದಿದ್ದಾರೆ.
*ಸೋನಿಯಾಗಾಂಧಿ ಶೇ.65ರಷ್ಟು ಮಂದಿಯ ಪ್ರಿಯತೆ ಹೊಂದಿದ್ದಾರೆ.
*ಆದರೆ, ಒಟ್ಟಾರೆಯಾಗಿ ಕಾಂಗ್ರೆಸ್ನ ಜನಪ್ರಿಯತೆ 2015ರಲ್ಲಿ ಶೇ.58 ಇದ್ದರೆ, 2013ರಲ್ಲಿ ಶೇ.49 ಇತ್ತು.
ಅರವಿಂದ ಕೇಜ್ರಿವಾಲ್:
*2015ರಲ್ಲಿ ಶೇ.60ರಷ್ಟು ಜನಪ್ರಿಯತೆಯನ್ನು ಹೊಂದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪ್ರಸ್ತುತ ಶೇ.50ರಷ್ಟು ಪಡೆಯುವ ಮೂಲಕ ಜನಪ್ರಿಯತೆಯನ್ನು ಕುಗ್ಗಿಸಿಕೊಂಡಿದ್ದಾರೆ.
*ಒಟ್ಟಾರೆ ಅಮ್ ಆದ್ಮಿ ಪಕ್ಷದ ಜನಪ್ರಿಯತೆಯೂ ಸಹ ಕುಸಿದಿದೆ.
*2015ರಲ್ಲಿ ಶೇ.58ರಷ್ಟು ಜನಪ್ರಿಯತೆ ಹೊಂದಿದ್ದ ಎಎಪಿ, ಪ್ರಸ್ತುತ ಶೇ.47ಕ್ಕೆ ಕುಸಿದಿದೆ.
Discussion about this post