ಮಂಡಿ, ಅ.18: ಸೀಮಿತ ದಾಳಿ ಬಳಿಕ ಭಾರತೀಯ ಸೈನಿಕರನ್ನು ವಿಶ್ವ ನೋಡುವ ದೃಷ್ಠಿ ಬದಲಾಗಿದ್ದು, ಇಸ್ರೇಲ್ ಸೈನ್ಯದ ಬಗ್ಗೆ ಮಾತನಾಡುತ್ತಿದ್ದವರು ಇಂದು ಭಾರತೀಯ ಯೋಧರ ಕುರಿತಾಗಿ ಮಾತನಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹಿಮಾಚಲ ಪ್ರದೇಶಧ ಮಂಡಿಯಲ್ಲಿ ಹೈಡ್ರೋ ಎಲೆಕ್ಟ್ರಿಕ್ ಯೋಜನೆಗಳನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೊದಲೆಲ್ಲಾ ಇಸ್ರೇಲ್‌ನಂತಹ ದೇಶದ ಸೈನಿಕರ ಕುರಿತಾಗಿ ಮಾತನಾಡುತ್ತಿದ್ದರು. ಅಂತಹ ದಾಳಿಗಳನ್ನು ಇಸ್ರೇಲ್ ಮಾಡತ್ತಿತ್ತು. ಈಗ ಭಾರತ ಮಾಡಿ ನಾವು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. ಈಗ ಇಡೀ ವಿಶ್ವವೇ ನಮ್ಮ ಸೈನಿಕರ ಬಗ್ಗೆ ಮಾತನಾಡುತ್ತಿದೆ. ನಮ್ಮ ಸೈನಿಕರು ಯಾರಿಗೂ ಕಮ್ಮಿ ಇಲ್ಲ ಎನ್ನುವುದು ಈಗ ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ.
ಹಿಮಾಚಲ ಪ್ರದೇಶವೊಂದು ದೈವಭೂಮಿ ಹಾಗೂ ವೀರಭೂಮಿಯಾಗಿದೆ. ಇಲ್ಲಿರುವ ಪ್ರತೀಯೊಂದು ಜಿಲ್ಲೆಯ ಕುಟುಂಬ ಸೇನೆಯ ಸದಸ್ಯನಾಗಿದೆ. ಹಿಮಾಚಲ ಪ್ರದೇಶದಲ್ಲಿ ನಾವು ಚಿಕ್ಕ ಕಾಶಿಯನ್ನು ನೋಡಬಹುದು. ಇಂತಹ ದೈವಭೂಮಿಯಲ್ಲಿ ತಲೆಭಾಗುತ್ತಿರುವುದಕ್ಕೆ ನನಗೆ ಸಂತೋಷವಾಗುತ್ತಿದೆ ಎಂದಿದ್ದಾರೆ.
ನಾನು ಈ ಹಿಂದೆ ಇಲ್ಲಿ ಮಾತನಾಡುವ ವೇಳೆ ಒನ್ ರಾಂಕ್ ಒನ್ ಪೆನ್ಷನ್ ಬಗ್ಗೆ ಭರವಸೆ ನೀಡಿದ್ದೆ . ಇಂದು ನಿಮ್ಮ ಹಕ್ಕಾದ ಅದನ್ನು ಈಡೇರಿಸಿ ನಿಮ್ಮ ಮುಂದೆ ಬಂದಿದ್ದೇನೆ. ಸೈನಿಕರು ಮಾತ್ರವಲ್ಲದೆ ಅವರ ಕುಟುಂಬ ಸದಸ್ಯರು ನನ್ನನ್ನು ಹರಸುತ್ತಾರೆ ಎಂದರು.
Discussion about this post