ನವದೆಹಲಿ:ಆ: 30: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರಪ್ರದೇಶದಲ್ಲಿ ಒಂದು ತಿಂಗಳುಗಳ ಕಾಲ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಕುರಿತು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ ಆಜಾದ್ ಮಾಹಿತಿ ನೀಡಿದ್ದು, ಡಿಯೋರಿಯಾದಲ್ಲಿ ಸೆ.6ರಂದು ರಾಹುಲ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಈ ವೆಳೆ 2,500 ಕಿ.ಮೀ ಕ್ರಮಿಸಲಿ ದ್ದಾರೆ.
ಉತ್ತರಪ್ರದೇಶದ 403 ವಿಧಾನಸಭಾ ಕ್ಷೇತ್ರದಲ್ಲಿ 223 ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಈ ವೇಳೆ ಯಾವುದೇ ದೊಡ್ಡ ರ್ಯಾಲಿಗಳನ್ನು ಹಮ್ಮಿಕೊಳ್ಳುವುದಿಲ್ಲ, ಬದಲಾಗಿ ರೈತರು, ಮಹಿಳೆಯರು ಹಾಗೂ ಯುವಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಯಸಿರುವ ಕಾಂಗ್ರೆಸ್ಗೆ ರಾಹುಲ್ ಈ ಯಾತ್ರೆ ಮಹತ್ವದ್ದಾಗಿದೆ. ಉತ್ತರ ಪ್ರದೇಶದಲ್ಲಿ ಗದ್ದುಗೆ ಏರಬೇಕು ಎಂಬ ಕಾಂಗ್ರೆಸ್ನ ಆಸೆ ಕಳೆದ ಮೂರು ದಶಕಗಳಿಂದ ಕೈಗೂಡಿಲ್ಲ.
Discussion about this post