ಶ್ರೀನಗರ, ಅ.26: ಮೂರೂವವರೆ ತಿಂಗಳಿನಿಂದ ನಡೆಯುತ್ತಿರುವ ಗಲಭೆಯಿಂದ ಪ್ರಕ್ಷುಬ್ದಗೊಂಡಿರುವ ಕಣಿವೆ ರಾಜ್ಯದಲ್ಲಿ ಈಗ ಶೀಕ್ಷಣ ಕ್ಷೇತ್ರಕ್ಕೆ ಮಹತ್ವದ ಸವಾಲು ಎದುರಾಗಿದೆ. ಗಲಭೆಯ ಪರಿಣಾಮದಿಂದ ಶಿಕ್ಷಣವು ನಲುಗಿಹೋಗಿದೆ.
ರಾಜ್ಯದ 10 ಜಿಲ್ಲೆಗಳಲ್ಲಿ ಸುಮಾರು 17 ಶಾಲೆಗಳು ಗಲಭೆಗೆ ಆಹುತಿಯಾಗಿವೆ. ಕೆಲವು ಶಾಲೆಗಳು ಭಸ್ಮವಾಗಿದ್ದರೆ, ಮತ್ತೆ ಕೆಲವು ಹಾನಿಗೊಳಗಾಗಿವೆ ಎನ್ನುವ ಇಲ್ಲಿನ ಶೀಕ್ಷಣ ಇಲಾಖೆ, ಇದರಲ್ಲಿ ಸುಮಾರು 10 ಶಾಲೆಗಳು ಬಹುತೇಕ ಹಾನಿಗೊಳಗಾಗಿದ್ದರೆ, 7 ಶಾಲೆಗಳು ಸುಟ್ಟುಭಸ್ಮವಾಗಿವೆ. ಇದರಲ್ಲಿ 2 ಪ್ರತಿಷ್ಠಿತ ಖಾಸಗಿ ಶಾಲೆಗಳೂ ಸಹಾ ಸೇರಿವೆ ಎನ್ನುತ್ತದೆ.
ಬಹುತೇಕ ಶಾಲೆಗಳು ತಡರಾತ್ರಿಯಲ್ಲಿ ಅಗ್ನಿಗೆ ಸಿಲುಕಿವೆ. ಅಪರಿಚಿತ ದುಷ್ಕರ್ಮಿಗಳು ಈ ಕೃತ್ಯ ಎಸೆಗಿದ್ದಾರೆ. ಇಲ್ಲಿನ ರಕ್ಷಣಾ ಇಲಾಖಾ ತಂಡ, ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಇನ್ನಿತರ ಪ್ರಯೋಗ ನಡೆಸಿದ ನಂತರ ಇಂತಹ ಕೃತ್ಯ ಎಸಗಲಾಗಿದೆ. 10 ಜಿಲ್ಲೆಗಳ ಪೈಕಿ ದಕ್ಷಿಣ ಕಾಶ್ಮೀರದ ಕುಲ್‌ಗಾಮ್ ಜಿಲ್ಲೆ ದೊಡ್ಡಮಟ್ಟದ ಹಾಣಿ ಎದುರಿಸಿದೆ. ಇದೊಂದೇ ಜಿಲ್ಲೆಯಲ್ಲಿ ೫ ಶಾಲೆಗಳು ಬಾಧೆಗೊಳಗಾಗಿವೆ. ಮಧ್ಯ ಕಾಶ್ಮೀರದ ಬುದಗಮ್ ಜಿಲ್ಲೆಯಲ್ಲಿ ೩ ಶಾಲೆಗಳು ಶಿಥಿಲವಾಗಿವೆ. ಈಗ ಇಲ್ಲಿಯ ಶಾಲೆಗಳ ಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಮ್ಮ ಶಾಲೆಗಳಿಗೆ ರಾತ್ರಿ ಸಮಯದಲ್ಲಿ ಸಹಾ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಕೊಳ್ಳಲು ಚಿಂತನೆ ನಡೆಸಿವೆ.
ಕುಲ್‌ಗಾಮ್ ನ ಶಿಕ್ಷಣಾಧಿಕಾರಿ ಅಬ್ದುಲ್ ರೂಫ್ ಶಹಃಮರಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಇಲ್ಲಿ ನಡೆದಿರುವ ಅಗ್ನಿ ಅಪಘಾತಗಳಿಗೆ ಸಂಬಂಧಿಸಿದಂತೆ ನಾವು ಜಿಲ್ಲಾಡಳಿತದೊಂದಿಗೆ ಹಾಗೂ ಶೀಕ್ಷರೊಂದಿಗೆ ಚರ್ಚೆ ನಡೆಸಿದ್ದೇವೆ. ಕೆಲವು ಶಿಕ್ಷಕರು ಶಾಲೆಯಲ್ಲಿ ರಾತ್ರಿ ಸಮಯದಲ್ಲಿ ತಂಗಲು ಸ್ವಪ್ರೇರಣೆಯಿಮದ ಮುಂದೆ ಬಂದಿದ್ದಾರೆ. ಇದು ಶಾಲೆಯ ಸುರಕ್ಷತೆ ದೃಷ್ಟಿಯಿಮದ ಉತ್ತಮ ಬೆಳವಣಿಗೆಯಾಗಿದೆ ಎಂದಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಕೆ. ರಾಜೇಂದ್ರಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಾವು ಸಹಾ ದುಷ್ಕರ್ಮಿಗಳ ಪತ್ತೆಗೆ ಬಲೆಬೀಸಿದ್ದೇವೆ. ಎಲ್ಲಾ ಪ್ರದೇಶಗಳನ್ನು ನಮ್ಮ ಹತೋಟಿಯಲ್ಲಿವೆ. ಸಾವಿರಾಋಉ ಶಾಲೆಗಳಿವೆ. ಹೀಗಾಗಿ ನಾಗರಿಕರು ಶಾಲೆಯ ರಕ್ಷಣೆಗೆ ಕೈಜೋಡಿಸಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಉಗ್ರನಾಯಕ ಅಬ್ದುಲ್ ವನಿಯನ್ನು ಭಾರತೀಯ ಸೇನೆ ಹೊಡೆದುರುಳಿಸಿತು. ಇದರಿಂದ ರೊಚ್ಚಿಗೆದ್ದ ಪ್ರತ್ಯೇಕತಾವಾದಿಗಳು ಹಾಗೂ ಉಗ್ರಗಾಮಿಗಳು ಪ್ರತಿಭಟನೆಯ ನೆಪದಲ್ಲಿ ಗಲಭೆ ಸೃಷ್ಟಿ ಮಾಡಿದ್ದವು. ಆ ಗಲಭೆ ಇಂದಿಗೂ ಮುಂದುವರೆದಿದೆ. ಸುಮಾರು ೧೦೯ ದಿನಗಳಿಂದ ಇಲ್ಲಿನ ಜನಜೀವನ ಅಸ್ತವ್ಯಸ್ತಗೊಂಡಿದೆ. ರಾಜ್ಯದ ಜನಜೀವನ ಸಹಜಸ್ಥಿತಿಗೆ ಮರಳಿಸಲು ಕೇಂದ್ರ ಸರ್ಕಾರ ಕಠಿಣ ಪ್ರಯತ್ನ ನಡೆಸಿದ್ದು, ಕೆಲವೇ ದಿನಗಳಲ್ಲಿ ಸಂಪೂರ್ಣ ಹತೋಟಿಗೆ ಸಿಗುವ ಲಕ್ಷಣಗೋಚರಿಸುತ್ತಿದೆ.
ಶಿಕ್ಷಣಸಂಸ್ಥೆಗಳನ್ನು ಸುಟ್ಟುಹಾಕಲಾಗಿದೆ ಎಂಬುದು ಕೇವಲ ಕಟ್ಟಡಕ್ಕೆ ಆದ ಹಾನಿಯಲ್ಲ. ಅದು ನಾಗರಿಕ ಸಮಾಜಕ್ಕೆ ಆದ ಬಹುದೊಡ್ಡ ನಷ್ಟ. ಕೆಲವು ತಿಂಗಳಿನಿಂದ ಇಲ್ಲಿ ನಡೆಯುತ್ತಿರುವ ಘಟನೆಗಳು ಎಲ್ಲರಿಗೂ ನೋವು ನೀಡುತ್ತಿದೆ.
– ಜಮ್ಮು ಕಾಶ್ಮೀರ ಸರ್ಕಾರ
3 ತಿಂಗಳಿಗೂ ಹೆಚ್ಚುಕಾಲ ಶಾಲೆಗಳು ಕಾರ್ಯನಿರ್ವಹಿಸಿಲ್ಲ. ಹೀಗಾಘಿ ಎಷ್ಟೋ ಶಾಲೆಗಳಲ್ಲಿ ಶೇ.50ರಷ್ಟೂ ಸಹಾ ನಿಗದಿತ ಪಾಠಗಳು ನಡೆದಿಲ್ಲ. ಆದರೂ, ನವೆಂಬರ್‌ನಲ್ಲಿ ಮಧ್ಯವಾರ್ಷಿಕ ಪರೀಕ್ಷೆ ನಡೆಸಲು ರಾಜ್ಯ ಶಿಕ್ಷಣ ಇಲಾಖೆ ಚಿಂತಿಸಿದೆ. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಪಾಲಕರು ಪ್ರತಿರೋಧ ತೋರಿದ್ದು, ನೇರವಾಗಿ ಮಾರ್ಚ್‌ನಲ್ಲಿ ವಾರ್ಷಿಕ ಪರೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ. ಇಲಾಖೆ ಇದರ ಬದಲಾಗಿ ಪಠ್ಯಪ್ರಮಾಣ ಕಡಿತ, ಬಹುಆಯ್ಕೆ ಪ್ರಶ್ನೆಗಳ ಹೆಚ್ಚಳ ಹೀಗೆ ಕಸರತ್ತು ನಡೆಸಿ ಪರೀಕ್ಷೆ ನಡೆಸುವ ಕುರಿತು ಗಂಭೀರವಾಗಿ ಯೋಚಿಸುತ್ತಿದೆ.
ಸವಾಲುಗಳು:
*ಹಾನಿಗೊಳಗಾದ ಶಾಲೆಗಳ ದುರಸ್ತಿ, ಇಲ್ವೇ ಮರು ನಿರ್ಮಾಣ
*ನಿರ್ಭೀತಿಯಿಂದ ಮಕ್ಕಳು ಶಾಲೆಗೆ ಬರುವ ವಾತಾವರಣ
*ನವೆಂಬರ್‌ನಲ್ಲಿ ನಡೆಸಲಿರುವ ಪರೀಕ್ಷೆಗೆ ಸೂಕ್ತಮಾರ್ಗಸೂಚಿ
*ಶಾಲೆಗಳಲ್ಲಿ ಬೀಡುಬಿಟ್ಟಿರುವ ಭದ್ರತಾಪಡೆಗಳ ವರ್ಗಾವಣೆ
*ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಭವಿಷ್ಯದ ಕುರಿತು ಭರವಸೆ
Discussion about this post