Read - < 1 minute
ಗೋಪಾಲ್ಸ್ ತಂಡ(ಗೋಪ್ರೇಮಿ ಐಟಿ ಉದ್ಯೋಗಿಗಳು ) ಸದಸ್ಯರು ಇಂದು ಮಾಲೂರು ಸಮೀಪದ ಗಂಗಾಪುರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಂದ್ರ ಗೋ ಆಶ್ರಮದಲ್ಲಿ ಗೋಸೇವೆ ನಡೆಸಿದರು. ಸದಾ ಕಂಪ್ಯೂಟರ್ ಜೊತೆಗಿರುವ ಇವರು ಇಂದು ಕಸಪೊರಕೆ ಹಿಡಿದು ಗೋಶಾಲೆ ಗುಡಿಸಿದರು. ಸೆಗಣಿ ಎತ್ತಿದರು. ಇವರೊಂದಿಗೆ ಕೆಲವು ಪುಟಾಣಿಗಳೂ ಸೇವೆಯಲ್ಲಿ ಭಾಗಿಯಾದರು.
ಗ್ರಾಮರಾಜ್ಯ ವಿಭಾಗದ ಶ್ರೀ ಗಣಪತಿ ಮನೋಹರ್ ಅವರು ಗ್ರಾಮರಾಜ್ಯದ ಬಗ್ಗೆ ಮಾಹಿತಿ ನೀಡಿದರು. ಶ್ರೀ ಕುಮಾರ ಸುಬ್ರಹ್ಮಣ್ಯ ಜಾಗೀರದಾರ್ ಇವರು ಗೋವಿನ ಮಹತ್ವದ ಬಗ್ಗೆ ತಿಳಿಸಿದರು. ಮಾ ಗೋ ಪ್ರಾಡೆಕ್ಟ್ಸ್ ವ್ಯವಸ್ಥಾಪಕರಾದ ಶಿವಕುಮಾರ್, ಗೋಪಾಲ್ಸ್ ತಂಡದ ರಾಮಸುಬ್ರಹ್ಮಣ್ಯಮ್ ಸೇರಿದಂತೆ 30ಕ್ಕೂ ಹೆಚ್ಚು ಸದಸ್ಯರು ಹಾಜರಿದ್ದರು.
Discussion about this post