ಚೆನ್ನೈ, ಸೆ.9: ತಮಿಳುನಾಡಿಗೆ 10 ದಿನಗಳಲ್ಲಿ 13 ಟಿಎಂಸಿ ನೀರು ಬಿಡಬೇಕು ಎಂದು ಸುಪ್ರೀಂ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಮತ್ತಷ್ಟು ನೀರು ಬೇಕು ಎಂದು ಅರ್ಜಿ ಸಲ್ಲಿಸುವ ಮೂಲಕ ಜಯಲಲಿತಾ ಮತ್ತೆ ಕ್ಯಾತೆ ತೆಗೆದಿದ್ದಾರೆ.
ಜೂನ್‌ನಿಂದ ಆಗಸ್ಟ್‌ವರೆಗೆ ತನಗೆ ಬರಬೇಕಾದ 61೧ ಟಿಎಂಸಿ ಬಾಕಿ ನೀರಿಗಾಗಿ ಕೋರಿಕೆ ಸಲ್ಲಿಸಿದ್ದು, ಕರ್ನಾಟಕಕ್ಕೆ ಮತ್ತೂಂದು ಸಂಕಷ್ಟ ಎದುರಾಗಿದೆ. ಇದರಿಂದಾಗಿ ಸುಪ್ರೀಂಕೋರ್ಟ್ ತೀರ್ಪಿನಂತೆ ೧೦ ದಿನಗಳಲ್ಲಿ ೧೩ ಟಿಎಂಸಿ ನೀರನ್ನು ಹರಿಸುವ ಮೂಲಕ ರಾಜ್ಯದ ರೈತರ ಆಕ್ರೋಶ ಎದುರಿಸುತ್ತಿರುವ ಸರ್ಕಾರ, ಸಿಎಸ್‌ಸಿ ಮತ್ತಷ್ಟು ನೀರು ಹರಿಸಲು ಆದೇಶಿಸಿದ್ದೇ ಆದಲ್ಲಿ ಇನ್ನೂ ಗಂಭೀರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
ಈಗಾಗಲೇ ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿದಿನ ೧೫ ಸಾವಿರ ಕ್ಯೂಸೆಕ್ ನೀರನ್ನು ಬಿಡುತ್ತಿದೆ. ಈ ಮಧ್ಯೆ, ಕೇಂದ್ರ ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿಯನ್ನು ಮುಖ್ಯಸ್ಥರನ್ನಾಗಿ ಹೊಂದಿರುವ ಕಾವೇರಿ ಮೇಲುಸ್ತುವಾರಿ ಸಮಿತಿ (ಸಿಎಸ್‌ಸಿ)ಗೆ ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಗುರುವಾರ ಇ-ಮೇಲ್ ಮಾಡಿದ್ದು, ಆಗಸ್ಟ್ ತನಕ ಬಾಕಿ ಇರುವ ನೀರನ್ನು ಕರ್ನಾಟಕದಿಂದ ದೊರಕಿಸಿ ಕೊಡಬೇಕು ಎಂದು ಕೋರಿದ್ದಾರೆ.
ನಮ್ಮಲ್ಲಿ ಇರೋದೇ ೪೮ ಟಿಎಂಸಿ ನೀರು
ಕಾವೇರಿ ಕೊಳ್ಳದ ೪ ಜಲಾಶಯಗಳಾದ ಕೆಆರ್‌ಎಸ್, ಕಬಿನಿ, ಹೇಮಾವತಿ, ಹಾರಂಗಿಯಲ್ಲಿ ಒಟ್ಟಾರೆ ಇರುವ ನೀರು ೫೭ ಟಿಎಂಸಿ. ಇದರಲ್ಲಿ ೯ ಟಿಎಂಸಿ ಡೆಡ್ ಸ್ಟೋರೇಜ್ ಹೊರತುಪಡಿಸಿದರೆ ಲಭ್ಯ ಇರುವುದು ೪೮ ಟಿಎಂಸಿ. ಇದರಲ್ಲಿ ಆವಿಯಾಗುವ ೩ ಟಿಎಂಸಿ ಜತೆಗೆ ತಮಿಳುನಾಡಿಗೆ ೧೩ ಟಿಎಂಸಿ ೧೦ ದಿನದಲ್ಲಿ ಬಿಟ್ಟರೆ ಉಳಿಯುವುದು ೩೨ ಟಿಎಂಸಿ. ಇದರಲ್ಲೂ ತಮಿಳುನಾಡು ಪಾಲು ಕೇಳುತ್ತದೆ. ಮುಂದಿನ ಜೂನ್‌ವರೆಗೂ ಇಷ್ಟರಲ್ಲೇ ಆಗಬೇಕು. ಇಂತಹ ಸ್ಥಿತಿಯಲ್ಲಿ ರಾಜ್ಯ ನಿಂತಿರುವ ವೇಳೆ, ತಮಿಳುನಾಡು ಪಾಲು ಕೇಳುವ ಮೂಲಕ ನೀಚತನವನ್ನು ಪ್ರದರ್ಶಿಸುತ್ತಿದೆ.
Discussion about this post