ನವದೆಹಲಿ, ಸೆ.2: ಚೀನಾದಲ್ಲಿ ನಡೆಯಲಿರುವ ಜಿ-20 ಶೃಂಗಸಭೆಯು ಉತ್ಪಾದಕತೆ ಮತ್ತು ಫಲಶೃತಿಗೆ ಅತ್ಯಂತ ಪೂರವಾಗಿರುತ್ತದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದಾರೆ.
ಚೀನಾದ ಹಾಂಗ್ಝೌಗ್ನಲ್ಲಿ ಭಾನುವಾರದಿಂದ ಆರಂಭವಾಗುವ ಜಿ20 ಶೃಂಗಸಭೆಯಲ್ಲಿ ಅಂತರ್ರಾಷ್ಟ್ರೀಯ ಆದ್ಯತೆಗಳು ಮತ್ತು ಸವಾಲುಗಳ ಮೇಲೆ ಭಾರತವು ಬೆಳಕು ಚೆಲ್ಲಲಿದೆ. ಈ ನಿಟ್ಟಿನಲ್ಲಿ ಸಭೆಯು ಉತ್ಪಾದಕತೆ ಮತ್ತು ಫಲಶೃತಿಗೆ ತುಂಬಾ ಪೂರಕವಾಗಿರುತ್ತದೆ ಎಂಬುದನ್ನು ತಾವು ಎದುರು ನೋಡುವುದಾಗಿಯೂ ಮೋದಿ ಹೇಳಿದ್ದಾರೆ.
ವಿಯೆಟ್ನಾಂ ರಾಜಧಾನಿ ಹನೊಯ್ ಭೇಟಿ ಬಹು ಮುಖ್ಯ ಭೇಟಿಯಾಗಲಿದೆ. ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಂಬಂಧ ಬಲವರ್ಧನೆಯಲ್ಲಿ ಈ ಭೇಟಿಯು ಮಹತ್ವದ್ದಾಗಲಿದೆ. ಉಭಯ ರಾಷ್ಟ್ರಗಳ ಬಾಂಧವ್ಯದಿಂದ ಏಷ್ಯಾ ಖಂಡಕ್ಕೂ ಅನುಕೂಲವಾಗಲಿದೆ ಎಂದು ಅವರು ಫೇಸ್ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ವಿಯೆಟ್ನಾಂ ಭೇಟಿ ನಂತರ ಪ್ರಧಾನಿ ಅವರು ನಾಳೆ ಚೀನಾದತ್ತ ಪ್ರಯಾಣ ಬೆಳೆಸಿ ಸೆ.4ರಂದು ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.














