ಶಿವಮೊಗ್ಗ, ಆ.31: ಟಾಟಾ ಹೌಸ್‌ನ ಮುಂಚೂಣಿ ಜ್ಯುವೆಲರಿ ಬ್ರಾಂಡ್ ಗೋಲ್ಡ್‌ಪ್ಲಸ್, ಆಭರಣ ಪ್ರಿಯರಿಗಾಗಿ ಇದೀಗ ಡೈಮಂಡ್ ಮತ್ತು ಡೈಮಂಟೈನ್ ಆಭರಣಗಳ ಮೇಲೆ ಕೊಡುಗೆ ಘೋಷಿಸಿದೆ.
ಶುದ್ಧತೆಗೆ ಜನಪ್ರಿಯವಾಗಿ, ಭರವಸೆಗಳನ್ನು ಈಡೇರಿಸುವ ಗೋಲ್ಡ್‌ಪ್ಲಸ್, ತನ್ನ ಎಲ್ಲ ಮಳಿಗೆಗಳಲ್ಲಿ
ಆ.6 ರಿಂದ ಸೆ. 4 ವರೆಗೆ ಗ್ರಾಹಕರು ಡೈಮಂಡ್ ಹಾಗೂ ಡೈಮಂಟೈನ್ ಆಭರಣಗಳ ಪೂರ್ತಿ ಮೌಲ್ಯದ ಮೇಲೆ ಶೇ.15 ರಷ್ಟು ನೇರ ರಿಯಾಯಿತಿ ಪಡೆಯಬಹುದು. ಬಣ್ಣದ ಹರಳುಗಳ ಆಭರಣದಲ್ಲಿ ಬಣ್ಣದ ಹರಳುಗಳ ಮೌಲ್ಯದ ಮೇಲೆ ಶೇ.15 ವರೆಗೆ ರಿಯಾಯಿತಿ ದೊರೆಯಲಿದ್ದು, ಇನ್ನೂ ಅನೇಕ ಕೊಡುಗೆಗಳನ್ನು ನೀಡುತ್ತಿದೆ.
ಗೋಲ್ಡ್‌ಪ್ಲಸ್‌ನ ಎಲ್ಲ ಅನನ್ಯವಾದ ಸಂಗ್ರಹಗಳು ಉತ್ಕೃಷ್ಟ ಕಸೂತಿ ಹೊಂದಿವೆ. ಆಭರಣಗಳು ಡೈಮಂಡ್ ಹಾಗೂ ಡೈಮಂಟೈನ್‌ನ ಸಮ್ಮಿಲನವಾಗಿವೆ. ಚಿನ್ನದಲ್ಲಿ ಹೊಳಪು, ಸುಂದರತೆ ಹಾಗೂ ಶುದ್ಧತೆಯನ್ನು ಹೊಂದಿರುತ್ತದೆ. ಈ ಕೊಡುಗೆ ಪದಕಗಳು, ಕಿವಿಯೋಲೆ, ನಕ್ಲೇಸ್‌ಗಳು, ಸೊಂಟಪಟ್ಟಿ, ಬಳೆ ಮತ್ತು ಉಂಗುರಗಳ ಮೇಲೆ ಲಭ್ಯವಿದ್ದು, ಕೈಗೆಟಕುವ ದರದ ಈ ಆಭರಣಗಳು 5000 ರೂ.ನಿಂದ ಆರಂಭವಾಗುತ್ತವೆ.
ಡೈಮಂಡ್ ಆಭರಣಗಳು ಪರಿಪೂರ್ಣ ಕಟ್ ಹೊಂದಿದ್ದು, ವಿಶಿಷ್ಟ ಪ್ರಕ್ರಿಯೆಯೊಂದಿಗೆ ಬೆಳಕು ಪ್ರತಿಫಲನವಾಗುವುದನ್ನು ಉತ್ಕೃಷ್ಟಗೊಳಿಸುತ್ತದೆ. ಸುಂದರವಾಗಿ ಕೆತ್ತನೆಗೊಂಡ ಆಭರಣಗಳು ಗ್ರಾಹಕರಿಗೆ ಆಯ್ಕೆಗೆ ಅವಕಾಶವಿಲ್ಲದಂತೆ ಮಾಡುತ್ತವೆ.
ಕೊಡುಗೆ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರದ ಗೋಲ್ಡ್‌ಪ್ಲಸ್ ಮಳಿಗೆಗಳಲ್ಲಿ ಲಭ್ಯವಿದೆ.
Discussion about this post