ಮೈಸೂರು, ಅ.4: ಈ ಬಾರಿಯ ದಸರಾದಲ್ಲಿ ಕೆಎಸ್ಆರ್ ಟಿಸಿ ವಿಶೇಷ ಪ್ಯಾಕೇಜ್ ಟೂರ್ ಏರ್ಪಡಿಸಿದೆ. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ಮೈಸೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ದೇವಾಲಯ, ಪ್ರವಾಸಿ ತಾಣ, ಅರಣ್ಯ ಪ್ರದೇಶ ಹಾಗೂ ಜಲಪಾತಗಳನ್ನು ವೀಕ್ಷಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಅ.7ರಿಂದ ಅ.17ರವರೆಗೆ ಏರ್ಪಡಿಸಿದೆ. ಗಿರಿದರ್ಶಿನಿ, ಜಲದರ್ಶಿನಿ ಹಾಗೂ ದೇವದರ್ಶಿನಿ ಎಂಬ ಮೂರು ವಿಶೇಷ ಕೆಎಸ್ಆರ್ ಟಿಸಿ ಪ್ಯಾಕೇಜ್ ಟೂರುಗಳನ್ನು ಏರ್ಪಡಿಸಲಾಗಿದೆ.
ಗಿರಿದರ್ಶಿನಿ: ಚಾಮುಂಡಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಬಂಡೀಪುರ ಹಾಗೂ ಗೋಪಾಲಸ್ವಾಮಿ ಬೆಟ್ಟ ತೋರಿಸಲಾಗುತ್ತದೆ. ವಯಸ್ಕರಿಗೆ 350 ರೂ., ಮಕ್ಕಳಿಗೆ 175 ರೂ. ನಿಗದಿಪಡಿಸಲಾಗಿದೆ.
ಜಲದರ್ಶಿನಿ: ಗೋಲ್ಡನ್ ಟೆಂಪಲ್, ದುಬಾರೆ ಅರಣ್ಯ ನಿಸರ್ಗ ಧಾಮ, ಅಬ್ಬಿ ಜಲಪಾತ, ರಾಜಾಸೀಟ್ , ಹಾರಂಗಿ ಜಲಾಶಯ, ಕೆಆರ್ ಎಸ್ ಜಲಾಶಯ ತೋರಿಸಲಾಗುತ್ತದೆ. ವಯಸ್ಕರಿಗೆ 375, ಮಕ್ಕಳಿಗೆ 190 ರೂ.ನಿಗದಿಪಡಿಸಲಾಗಿದೆ.
ದೇವದರ್ಶಿನಿ: ನಂಜನಗೂಡು, ತಲಕಾಡು, ಬ್ಲಫ್, ಮುಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆಆರ್ ಎಸ್ ತೋರಿಸಲಾಗುತ್ತದೆ. ವಯಸ್ಕರಿಗೆ 275, ಮಕ್ಕಳಿಗೆ 140 ರೂ. ನಿಗದಿಪಡಿಸಲಾಗಿದೆ.
ಈ ವಿಶೇಷ ಪ್ಯಾಕೇಜ್ ನಲ್ಲಿ ಪ್ರಯಾಣಿಸುವವರು ಮೈಸೂರಿನ ಕೇಂದ್ರ ಬಸ್ ನಿಲ್ದಾಣದಿಂದ ಬಸ್ ಹಿಡಿಯಬಹುದು. ಅ.7ರಂದು ಮುಂಜಾನೆ 6.30 ರಿಂದ ಪ್ರವಾಸ ಪ್ರಾರಂಭವಾಗುತ್ತದೆ.
ಹೆಚ್ಚಿನ ಮಾಹಿತಿ ಹಾಗೂ ಮುಂಗಡ ಬುಕಿಂಗ್ಗಾಗಿ ಮೊಬೈಲ್ 7760990822 ಸಂಪರ್ಕಿಸಬಹುದು ಎಂದು ಕೆಎಸ್ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
Discussion about this post