Read - < 1 minute
ನವದೆಹಲಿ: ರಿಯೊ ಪ್ಯಾರಾ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದು ಮಿಂಚಿರುವ ಅಥ್ಲೀಟ್ ದೀಪಾ ಮಲಿಕ್ ಗೆ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟ್ ದಂತ ಕತೆ ಸಚಿನ್ ತೆಂಡೂಲ್ಕರ್ ಮತ್ತು ಶೂಟರ್ ಅಭಿನವ್ ಬಿಂದ್ರಾ ಸೇರಿದಂತೆ ಹಲವಾರು ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ.
ವೆಲ್ ಡನ್ ದೀಪಾ. ಪ್ಯಾರಾ ಒಲಿಂಪಿಕ್ಸ್ ಗೆಲ್ಲಿ ನೀವು ಬೆಳ್ಳಿ ಪದಕ ಗೆದ್ದು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ. ಎಂದು ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲ ತಾಣ ಟ್ವೀಟರ್ ಗೆಲ್ಲಿ ಬರೆದಿದ್ದಾರೆ.
ಪ್ಯಾರಾ ಒಲಿಂಪಿಕ್ಸ್ ನಲ್ಲಿ ಅಮೋಘ ಪ್ರದರ್ಶನ ತೋರಿದ ದೀಪಾಗೆ ತುಂಬ ಅಭಿನಂದನೆಗಳು ಎಂದು ಕ್ರಿಕೆಟ್ ದಂತ ಕತೆ ಸಚಿನ್ ತೆಂಡೂಲ್ಕರ್ ಅಭಿನಂದಿಸಿದ್ದಾರೆ.
ದೀಪಾ ಮಲಿಕ್ ಗೆ ತುಂಬ ತುಂಬ ಅಭಿನಂದನೆಗಳು. ನೀವು ಭಾರತಕ್ಕೆ ಪ್ರೇರಣೆಯಾಗಿದ್ದೀರಿ. ಗೋ ಸ್ಫೋಟ್ಸ್ ಗೆ ಅಭಿನಂದನೆಗಳು ಎಂದು ಶೂಟರ್ ಅಭಿನವ್ ಬಿಂದ್ರಾ ತಿಳಿಸಿದ್ದಾರೆ. ಉಳಿದಂತೆ ಸೈನಾ ನೆಹ್ವಾಲ್, ಕುಸ್ತಿಪಟು ವಿಜೇಂದರ್ ಸಿಂಗ್, ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ಅಭಿನಂದಿಸಿದ್ದಾರೆ.
Discussion about this post