Read - < 1 minute
ನವದೆಹಲಿ: ಸೆ:30: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಾರತೀಯ ಸೇನೆಯು ಸರ್ಜಿಕಲ್ ಸ್ಟ್ರೇಕ್ (ಸೀಮಿತ ದಾಳಿ)ಯಲ್ಲಿ ಒಂದು ವೇಳೆ ನಮ್ಮ ಸೈನಿಕರಿಗೆ ಗಾಯವಾದರೆ ಅಥವಾ ಹುತಾತ್ಮರಾದರೆ ಯಾವುದೇ ಕಾರಣಕ್ಕೂ ಅಂತಹ ಸೈನಿಕರ ಶವಗಳನ್ನು ಪಾಕಿಸ್ತಾನದ ನೆಲೆಯಲ್ಲಿ ಬಿಟ್ಟು ಬರಬೇಡಿ ಎಂದು ಮುಖ್ಯ ಸೈನಾಧಿಕಾರಿಯೊಬ್ಬರು ಯೋಧರಿಗೆ ಸೂಚನೆ ನೀಡಿದ್ದ ಮಹತ್ತರ ಅಂಶ ಬೆಳಕಿಗೆ ಬಂದಿದೆ.
ಅದೃಷ್ಟವಶಾತ್ ಈ ಸೇನಾ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರು ಗಾಯಗೊಂಡಿಲ್ಲ. ಆದರೆ ಒಂದು ವೇಳೆ ಕಾರ್ಯಾಚರಣೆಯಲ್ಲಿ ಭಯೋತ್ಪಾ ದಕರ ವಿರುದ್ಧ ಹೋರಾಟ ನಡೆಸುವಾಗ ಸೈನಿಕರು ಗಾಯಗೊಂಡರೆ ಮತ್ತು ಮೃತಪಟ್ಟರೆ ದೇಹಗಳನ್ನು ಪಾಕ್ ನೆಲದಲ್ಲಿ ಬಿಟ್ಟು ಬರಬಾರದು ಎಂದು ಸೈನಿಕರಿಗೆ ಸೈನ್ಯಾಧಿಕಾರಿಯೊಬ್ಬರು ಸೂಚನೆ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.
ಸೀಮಿತ ದಾಳಿಯು ಕಾರ್ಯಾಚರಣೆಯನ್ನು ಬೆಳಿಗ್ಗೆ ಆಗುವಷ್ಟರಲ್ಲಿ ಮುಗಿಸಬೇಕು. ತಮ್ಮ ಕ್ಯಾಂಪ್ಗಳಿಗೆ ಹಿಂತಿರುಗಬೇಕು ಎಂದು ಸೈನ್ಯಾಧಿಕಾರಿಗಳು ಸೂಕ್ಷ್ಮವಾಗಿ ಸೂಚಿಸಿದ್ದರು.
ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಸೀಮಿತ ದಾಳಿ ನಡೆಸಿ 40ಕ್ಕೂ ಹೆಚ್ಚು ಭಯೋತ್ಪಾದಕರನ್ನು ಹೊಡೆದುರುಳಿಸಿ ಯಶಸ್ವಿಯಾಗಿ ಸೇನಾಪಡೆಯು ವಾಪಸ್ಸಾಗಿತ್ತು. ಭಯೋತ್ಪಾದಕರು ಕಾಶ್ಮೀರದ ಉರಿ ವಲಯದ ಸೇನೆಪಡೆಗಳ ಮೇಲೆ ಭೀಕರ ದಾಳಿ ನಡೆಸಿ ಅಮಾಯಕ 19 ಸೈನಿಕರನ್ನು ಕೊಂದು ಹಾಕಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಸೇನೆ ನುಗ್ಗಿ 40ಮಂದಿ ಭಯೋತ್ಪಾದಕರ ಹಾಗೂ ರಕ್ಷಣೆಗೆ ಬಂದ ಪಾಕ್ ಸೈನಿಕರನ್ನು ದಮನ ಮಾಡಿತ್ತು.
Discussion about this post