ಇಸ್ಲಾಮಾಬಾದ್:ಅ:28: ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ವಿರುದ್ಧ ಯರ್ಾಲಿ ನಡೆಸಿದ ಕಾರಣಕ್ಕೆ ಮಾಜಿ ಕ್ರಿಕೆಟಿಗ ಹಾಗೂ ತೆಹರೀಕ್ ಇ ಪಾಕಿಸ್ತಾನ್ ಪಕ್ಷದ ಅಧ್ಯಕ್ಷ ಇಮ್ರಾನ್ ಖಾನ್ ಅವರನ್ನು ಪಾಕಿಸ್ತಾನ ಪೊಲೀಸರು ಬಂಧಿಸಿದ್ದಾರೆ.
ನವಾಜ್ ಷರೀಫ್ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆಯನ್ನು ಸಲ್ಲಿಸಬೇಕೆಂದು ಆಗ್ರಹಿಸಿ ಕಳೆದ ರಾತ್ರಿ ಇಮ್ರಾನ್ ಖಾನ್ ಅವರು ಇಸ್ಲಾಮಾಬಾದ್ ನಲ್ಲಿ ಪ್ರತಿಭಟನಾ ಯುವ ಯರ್ಾಲಿಯೊಂದನ್ನು ನಡೆಸುತ್ತಿದ್ದರು. ಇಸ್ಲಾಮಾಬಾದ್ ನಲ್ಲಿ ಈಗಾಗಲೇ ಪ್ರತಿಭಟನೆ ತೀವ್ರಗೊಂಡಿರುವುದರಿಂದ ಮುಂದಿನ 2 ತಿಂಗಳ ಕಾಲ ಸೆಕ್ಷನ್-144ನ್ನು ಜಾರಿ ಮಾಡಲಾಗಿತ್ತು. ಇದರಂತೆ ಸಾರ್ವಜನಿಕ ಕಾರ್ಯಕ್ರಮಗಳಿಗೂ ನಿಷೇಧ ಹೇರಲಾಗಿತ್ತು.
ಇದರ ನಡುವೆಯೂ ಇಮ್ರಾನ್ ಖಾನ್ ಅವರು ಕಾರ್ಯಕ್ರಮವನ್ನು ಆಯೋಜಿಸಿದ್ದರಿಂದ, ಕಾರ್ಯಕ್ರಮದ ಮೇಲೆ ದಾಳಿ ಮಾಡಿದ ಪಾಕಿಸ್ತಾನ ಪೊಲೀಸರು ಇಮ್ರಾನ್ ಖಾನ್ ಅವರನ್ನೂ ಸೇರಿ 40 ಕಾರ್ಯಕರ್ತರನ್ನು ಬಂಧನಕ್ಕೊಳಪಡಿಸಿದ್ದಾರೆಂದು ಹೇಳಲಾಗುತ್ತಿದೆ.
ನವಾಜ್ ಶರೀಫ್ ಅವರ ಇಬ್ಬರು ಪುತ್ರರು ಹಾಗೂ ಪುತ್ರಿ ಬ್ರಿಟನ್ನಿನಲ್ಲಿ ಆಸ್ತಿ ಹೊಂದಿರುವುದು ಏಪ್ರಿಲ್ ತಿಂಗಳಿನಲ್ಲಿ ಪನಾಮಾ ದಾಖಲೆಗಳಲ್ಲಿ ಬಯಲಾಗಿತ್ತು. ಶರೀಫ್ ಅವರು ತಮ್ಮ ಕುಟುಂಬದ ಆಸ್ತಿ ವಿವರದಲ್ಲಿ ಇದನ್ನು ಉಲ್ಲೇಖಿಸಿರಲಿಲ್ಲ. ಪನಾಮಾ ದಾಖಲೆಗಳಲ್ಲಿ ಹೆಸರು ಬಹಿರಂಗವಾದ ಹಿನ್ನೆಲೆಯಲ್ಲಿ ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಶರೀಫ್ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಸಲ್ಲಿಸಬೇಕೆಂದು ಪ್ರತಿಪಕ್ಷ ಪಾಕಿಸ್ತಾನ್ ತೆಹ್ರೀಕ್-ಐ-ಇನ್ಸಾಫ್ ಆಗ್ರಹಿಸುತ್ತಿದೆ.
Discussion about this post