ನವದೆಹಲಿ, ಅ.4: ರಾಜ್ಯ ವಿಧಾನಮಂಡಲದಲ್ಲಿ ನನಗೆ ಅವಮಾನವಾಗಿದೆ ಎಂದು ಮುನಿಸಿಕೊಂಡಿದ್ದ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರನ್ನು ರಾಜ್ಯ ಸರ್ಕಾರ ಮನವೊಲಿಸಿದ್ದು, ಕಾವೇರಿ ವಿಚಾರದಲ್ಲಿ ರಾಜ್ಯದ ಪರ ವಾದ ಮಾಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ.
ಕರ್ನಾಟಕ ವಿಧಾನಮಂಡಲದಲ್ಲಿ ನನಗೆ ಅವಮಾನ ಮಾಡಿದ್ದಾರೆ ಎಂದಿದ್ದ ನಾರಿಮನ್, ತಮಿಳುನಾಡಿಗೆ ಮೊದಲು ನೀರು ಬಿಡುಗಡೆ ಮಾಡಿ, ಆನಂತರ ವಾದ ಮಾಡುತ್ತೇನೆ ಎಂದು ಹಠ ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳ ನಿಯೋಗ ನಾರಿಮನ್ ಅವರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
Discussion about this post