ಬೆಂಗಳೂರು: ಸೆ:17; ಸ್ಥಳಿಯ ಮಟ್ಟದಲ್ಲಿ ಪಕ್ಷವನ್ನು ಬಲ ಪಡಿಸಲು ನಿಷ್ಕ್ರೀಯ ಪದಾಧಿಕಾರಿಗಳನ್ನು ಬದಲಿಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿಂದು ನಡೆದ ನಗರದ ಪ್ರಮುಖರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡಲಾಗಿದೆ. ಬಿಬಿಎಂಪಿ ಮೇಯರ್ ಚುನಾವಣೆ ಬಗ್ಗೆಯೂ ಇಂದು ಚರ್ಚೆಯಾಗಿದೆ. ಜೆಡಿಎಸ್ ಜೊತೆ ಮೈತ್ರಿ ಮುಂದುವರೆಸುವಂತೆ ಬಿಬಿಎಂಪಿ ಸದಸ್ಯರು ಇಂದಿನ ಸಭೆಯಲ್ಲಿ ಸಲಹೆ ನೀಡಿದ್ದಾರೆ. ಜೆಡಿಎಸ್ ಜೊತೆ ಮೈತ್ರಿ ಅಂತಿಮವಾದ ನಂತರ ಮೇಯರ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಮೇಯರ್ ಸ್ಥಾಣಕ್ಕೆ ಜೆಡಿಎಸ್ ಪಟ್ಟು ಹಿಡಿದಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಈವರೆಗೂ ಕುಮಾರಸ್ವಾಮಿ ಅವರ ಜೊತೆ ಚರ್ಚೆ ಮಾಡಿಲ್ಲ. ಚರ್ಚೆ ಮಾಡಿದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.
ಮುನ್ನೆಚ್ಚರಿಕೆ:
ಸೆ.19 ರಂದು ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ಮತ್ತು ಸೆ.20 ರಂದು ಸುಪ್ರೀಂ ಕೋರ್ಟ್ ನಲ್ಲಿ ವಿವಾದ ವಿಚಾರಣೆಗೆ ಬರುತ್ತಿದೆ. ಬಿಬಿಎಂಪಿ ಸದಸ್ಯರು ವಾರ್ಡ ಮಟ್ಟದಲ್ಲಿ ಯಾವುದೇ ಗಲಾಟೆಯಾಗದಂತೆ ನೋಡಿಕೊಳ್ಳುವಂತೆಯೂ ಸೂಚನೆ ಕೊಡಲಾಗಿದೆ. ಯಾವುದೇ ಭಾಷೆಯ ಜನರಾಗಿರಲಿ ಎಲ್ಲರಿಗೂ ರಕ್ಷಣೆ ನೀಡಬೇಕು. ಯಾರಿಗೂ ತೊಂದರೆಯಾಗದಂತೆ ಸ್ಥಳಿಯ ನಾಯಕರು ಜನರ ಜೊತೆ ಮಾತುಕತೆ ನಡೆಸಿ ಶಾಂತಿ ಕಾಪಾಡಬೇಕು ಎಂದು ಸೂಚಿಸಲಾಗಿದೆ ಎಂದರು.
ಅಹಿತಕರ ಘಟನೆ ನಡೆಯುವ ಸೂಚನೆ ಇದ್ದರೆ ತಕ್ಷಣ ಪೊಲಿಸ್ ಇಲಾಖೆಗೆ ಮಾಹಿತಿ ನೀಡುವಂತೆ ಸಲಹೆ ನೀಡಲಾಗಿದೆ. ಬೇರೆ ರಾಜಕೀಯ ಪಕ್ಷಗಳ ಮುಖಂಡರೂ ತಮ್ಮ ಸ್ಥಳಿಯ ನಾಯಕರಿಗೆ ಈ ರೀತಿಯ ಸೂಚನೆ ಕೊಡಳ್ಳಬೇಕು ಎಂದು ಅವರು ಹೇಳಿದರು.
ಕಾವೇರಿಗಾಗಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ಚರ್ಚೆಯಾಗಿವೆ, ಬೆಂಗಳೂರಿಗೆ ಅಂತರಾಷ್ರ್ಟೀಯ ಮಟ್ಟದಲ್ಲಿ ಹೆಸರಿದೆ. ಕಾವೇರಿ ಮೇಲುಸ್ತುವಾರಿ ಹಾಗು ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಯಾವ ರೀತಿಯ ತೀರ್ಪು ಬರಲಿದೆ ಎಂದು ಗೋತ್ತಿಲ್ಲ. ಮುಂದೆ ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಿ ಎಂದು ಬಿಬಿಎಂಪಿ ಸದಸ್ಯರಿಗೆ ಹೇಳಿದ್ದೇವೆ. ಬೆಂಗಳೂರಿನ ಎಲ್ಲ ಪದಾಧಿಕಾರಿಗಳು ಹಾಗು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ, ಬಿಬಿಎಂಪಿ ಸದಸ್ಯರು ಹಾಗು ಶಾಸಕರಿಗೆ ಸಲಹೆ ನೀಡಲಾಗಿದೆ ಮತ್ತು ಕಾವೇರಿ ವಿಷಯದಲ್ಲಿ ಸಕರ್ಾರದ ಪರ ನಿಲ್ಲುವಂತೆಯೂ ಸೂಚಿಸಲಾಗಿದೆ ಎಂದರು.
Discussion about this post