Read - < 1 minute
ಕೋಲ್ಕತ್ತಾ, ಅ.18: ಗಡಿಯಲ್ಲಿ ಭಯೋತ್ಪಾದನೆ ನಿಲ್ಲುವವರೆಗೂ ಪಾಕಿಸ್ಥಾನದೊಂದಿಗೆ ಕ್ರಿಕೆಟ್ ಅಡಬಾರದೆಂದು ಭಾರತ ಕ್ರಿಕೆಟ್ ಎಡಗೈ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಹೇಳಿದ್ದಾರೆ. ಈ ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರನ್ನು ಬೆಂಬಲಿಸಬೇಕಿದೆ ಎಂದು ಹೇಳಿದ್ದಾರೆ.
ಗಡಿಯಲ್ಲಿ ಭಯೋತ್ಪಾದನೆ ನಿಲ್ಲುವವರೆಗೂ ಪಾಕಿಸ್ಥಾನದೊಂದಿಗೆ ಕ್ರಿಕೆಟ್ ಸರಣಿ ಆಡಬಾರದು. ಈಗಿನ ಪರಿಸ್ಥಿತಿ ತುಂಬ ಕೆಟ್ಟದಾಗಿದೆ. ಸೈನಿಕರು ಮತ್ತು ನಮ್ಮ ಜನರ ಪ್ರಾಣ ನಮಗೆ ತುಂಬ ಮುಖ್ಯವಾಗಿದೆ. ಕ್ರಿಕೆಟ್ ಜೊತೆಗೆ ಬೇರೆ ವ್ಯವಹಾರಗಳನ್ನು ನಿಲ್ಲಿಸಸಬೇಕೆಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.
Discussion about this post