ನವದೆಹಲಿ: ಸೆ:28: ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆಂದು ಘೋಷಿಸುವಂತೆ ಬಾಂಗ್ಲಾ ದೇಶವೂ ವಿಶ್ವಸಂಸ್ಥೆಯನ್ನು ಆಗ್ರಹಿಸಿದೆ. ವಿಶ್ವಕ್ಕೆ ಭಯೋತ್ಪಾದನೆಯನ್ನು ರಫ್ತು ಮಾಡುವ ಪಾಕಿಸ್ತಾನವನ್ನು ಜಾಗತಿಕ ಸಮುದಾಯ ಪ್ರತ್ಯೇಕಗೊಳಿಸುವ ಅಗತ್ಯವಿದೆ ಎಂದು ಅದು ಒತ್ತಿ ಹೇಳಿದೆ.
ಸಾರ್ಕಾರ ಇತಿಹಾಸದಲ್ಲೇ ಮೊದಲ ಬಾರಿಗೆ ಎಂಟು ಸದಸ್ಯ ದೇಶಗಳ ಪೈಕಿ ನಾಲ್ಕು ದೇಶಗಳು ಇಸ್ಲಾಮಾಬಾದ್ನಲ್ಲಿ ನಡೆಯುವ ಶೃಂಗಸಭೆಯನ್ನು ಬಹಿಷ್ಕರಿಸಲು ಮುಂದಾಗಿವೆ. ಇದು ಅತ್ಯಂತ ಪ್ರಬಲ ಸಂದೇಶವನ್ನೇ ರವಾನಿಸಿದೆ ಎಂದು ಬಾಂಗ್ಲಾ ರಾಯಭಾರಿ ಸಯ್ಯದ್ ಮೌಝೆಮ್ ಆಲಿ ತಿಳಿಸಿದ್ದಾರೆ.ಈಗ ತನ್ನ ವಿದೇಶಾಂಗ ನೀತಿ ಹೇಗಿರಬೇಕೆಂಬುದನ್ನು ನಿರ್ಧರಿಸುವುದೀಗ ಪಾಕಿಗೆ ಬಿಟ್ಟದ್ದು. ಬಾಂಗ್ಲಾದೇಶದಲ್ಲಿ ಭಯೋತ್ಪಾದಕ ಗುಂಪುಗಳಿಗೆ ನೆರವು ನೀಡುವುದನ್ನು ಮತ್ತು ಬಾಂಗ್ಲಾದ ಆಂತರಿಕ ವ್ಯವಹಾರದಲ್ಲಿ ಮೂಗುತೂರಿಸುವುದನ್ನು ಪಾಕ್ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು. ಪರಮಾಣು ದಾಳಿ ನಡೆಸುವುದಾಗಿ ಪಾಕ್ ರಕ್ಷಣಾ ಸಚಿವ ಖ್ವಾಜಾ ಎಂ.ಆಸೀಫ್ ಬಹಿರಂಗವಾಗಿ ಬೆದರಿಕೆಯೊಡ್ಡುತ್ತಿರುವಾಗ ಪ್ರಾದೇಶಿಕ ಸಹಕಾರ ಸಭೆಯೊಂದನ್ನು ಹೇಗೆ ನಡೆಸಲು ಸಾಧ್ಯ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
Discussion about this post