Read - < 1 minute
ನವದೆಹಲಿ, ಸೆ.21.ಪ್ರಧಾನಿ ನರೇಂದ್ರ ಮೋದಿ ಅವರ ದಿಲ್ಲಿಯ ನಿವಾಸದ ವಿಳಾಸ ಈಗ ಬದಲಾಗಿದೆ.
ನಂ.7, ರೇಸ್ ಕೋಸರ್್ ರಸ್ತೆ ಎಂದಿದ್ದ ವಿಳಾಸ ಈಗ ನಂ.7, ಲೋಕ ಕಲ್ಯಾಣ ಮಾರ್ಗ ಎಂಬುದಾಗಿ ಬದಲಾಗಿದೆ.
ಪ್ರಧಾನಿ ಹಾಗೂ ಅನೇಕ ವಿಐಪಿಗಳ ನಿವಾಸಗಳುಳ್ಳ ದಿಲ್ಲಿಯ ಈ ಪ್ರಮುಖ ರಸ್ತೆಗೆ ಬ್ರಿಟಿಷರ ಕಾಲದಿಂದ ರೇಸ್ ಕೋಸರ್್ ರೋಡ್ ಎಂಬುದಾಗಿ ಕರೆಯಲಾಗುತ್ತಿತ್ತು. ಬುಧವಾರ ನಡೆದ ಹೊಸದಿಲ್ಲಿ ನಗರಪಾಲಿಕೆ ಸಭೆಯಲ್ಲಿ ಈ ಬಗ್ಗೆ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ತೀಮರ್ಾನ ಕೈಗೊಳ್ಳಲಾಗಿದೆ. ಇನ್ನುಮುಂದೆ ಈ ರಸ್ತೆ ಲೋಕಕಲ್ಯಾಣ ಮಾರ್ಗ ಎಂದು ಬದಲಾಗಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಲೋಕ ಕಲ್ಯಾಣ ಎಂಬ ಹೆಸರಿಗಿಂತ ದೊಡ್ಡದು ಬೇರಿಲ್ಲ. ರಾಜಕೀಯ ನಾಯಕರೆಲ್ಲಾ ಈ ಬಗ್ಗೆ ಒಟ್ಟು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ದಿಲ್ಲಿ ಮಹಾನಗರ ಪಾಲಿಕೆ ಬಿಜೆಪಿ ಸದಸ್ಯೆಯೂ ಆಗಿರುವ ಸಾಂಸದೆ ಮೀನಾಕ್ಷಿ ಲೇಖಿ ಹೇಳಿದ್ದಾರೆ. ಈ ಬಗ್ಗೆ ಸಕರ್ಾರಕ್ಕೆ ಪತ್ರದಲ್ಲಿ ಭಾರತೀಯ ಸಂಸ್ಕೃತಿಗೆ ರೇಸ್ ಕೋಸರ್್ ಹೆಸರು ಹೊಂದಾಣಿಕೆ ಆಗುವುದಿಲ್ಲ ಎಂದು ಅವರು ಈ ಹಿಂದೆ ತಿಳಿಸಿದ್ದರು.
ಚಾಲ್ತಿಯಲ್ಲಿದ್ದವು ಅನೇಕ ಹೆಸರುಗಳು
ದಿಲ್ಲಿಯ ಈ ಮುಖ್ಯ ರಸ್ತೆಗೆ ಇಡಲು ಅನೇಕ ಹೆಸರುಗಳ ಪ್ರಸ್ತಾಪ ಬಂದಿತ್ತು. ದೀನ ದಯಾಳ್ ಉಪಾಧ್ಯಾಯ ಅವರ ಗೌರವಾರ್ಥ ಏಕಾತ್ಮ ಮಾರ್ಗ ಎಂದು ಹೆಸರಿಡಬಹುದು ಎಂಬ ಪ್ರಸ್ತಾಪ ಸಲ್ಲಿಸಲಾಗಿತ್ತು. ಉಪಾಧ್ಯಾಯ ಅವರ ಸಿದ್ಧಾಂಗಳ ಸಂಕಲನ ಏಕಾತ್ಮ ಮಾನವ್ ಪ್ರಸಿದ್ಧ ಕೃತಿಯಾಗಿದೆ.
ಕಳೆದ ವರ್ಷವಷ್ಟೇ ದಿಲ್ಲಿಯ ಇನ್ನೊಂದು ಪ್ರಸಿದ್ಧ ಔರಂಗಜೇಬ್ ರಸ್ತೆಗೆ ಭಾರತ ಕಂಡ ಹೆಮ್ಮೆಯ ರಾಷ್ಟ್ರಪತಿಯಾದ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಇಡಲಾಗಿತ್ತು.
ಈ ಬದಲಾವಣೆಯನ್ನು ಬಿಜೆಪಿ ಮುಖಂಡ ಮಹೇಶ್ ಗಿರಿ ಅವರು ಸೂಚನೆ ನೀಡಿದ್ದರು. ಔರಂಗಜೇಬ್ ದಿಲ್ಲಿಯ ಅನೇಕ ಪ್ರದೇಶಗಳಿಗೆ ಮೊಗಲ್ ಸಂಸ್ಕೃತಿ ಹೆಸರನ್ನು ಇಟ್ಟಿದ್ದ. ನಮ್ಮ ಇತಿಹಾಸ ಪ್ರತಿನಿಧಿಸುವ ಎಲ್ಲಾ ಹೆಸರುಗಳು ಇದರಿಂದ ಅಳಿಸಿ ಹೋಗಿದ್ದವು. ಈ ಹಿನ್ನೆಲೆ ಹೆಸರು ಬದಲಾವಣೆಗೆ ಸೂಚನೆ ನೀಡಲಾಗಿತ್ತು. ಅಲ್ಲದೇ ದಿಲ್ಲಿಯ ಅಕ್ಬರ್ ರಸ್ತೆಯನ್ನು ಮಹರಾಣಾ ಪ್ರತಾಪ ರಸ್ತೆ ಎಂದು ನಾಮಕರಣ ಮಾಡಲು ಸೂಚನೆ ನೀಡಲಾಗಿತ್ತು, ಆದರೆ ಸಕರ್ಾರ ಈ ಹೆಸರನ್ನು ಇನ್ನೂ ಬದಲಾವಣೆ ಮಾಡದೇ ಕಾಯ್ದಿರಿಸಿದೆ.
ಈ ಹಿಂದೆ ಏಕಾತ್ಮ ಮಾರ್ಗ ಎಂದು ಹೆಸರಿಡುವ ಬಗ್ಗೆ ಚಚರ್ಿಸಲಾಗಿತ್ತು. ಅದನ್ನು ಈಗ ಲೋಕ ಕಲ್ಯಾಣ ಮಾರ್ಗ ಎಂದು ಬದಲಿಸಲಾಗಿದೆ.
Discussion about this post