ಶಿವಮೊಗ್ಗ, ಅ.5: ಇಲ್ಲಿನ ಬಡ ದಂಪತಿಗಳೊಬ್ಬರು ತಮ್ಮ ಪುತ್ರಿಯ ಶಸ್ತ್ರಚಿಕಿತ್ಸೆಗೆ ಸಾರ್ವಜನಿಕರ ನೆರವನ್ನು ಬೇಡಿದ್ದಾರೆ.
ಇಲ್ಲಿನ ಅಮೀರ್ ಅಹಮದ್ ನಗರದ ನಿವಾಸಿಯಾದ ಪಾಪಣ್ಣ ಹಾಗೂ ಕವಿತಾ ಬಡ ದಂಪತಿಯ ಒಬ್ಬಳೇ ಮಗಳಾದ ಸುಕನ್ಯಳಿಗೆ ಆರೋಗ್ಯದ ತೊಂದರೆ, ಪರೀಕ್ಷಿಸಿದ ವೈದ್ಯರು ಹೃದಯಕ್ಕೆ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸಾ ವೆಚ್ಚ 3.5 ಲಕ್ಷಗಳಾಗುತ್ತವೆ ಎಂದು ಆಸ್ಪತ್ರೆ ಹೇಳಿದೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಆದರೆ, ಈ ಬಾರೀ ಮೊತ್ತವನ್ನು ಭರಿಸುವ ಶಕ್ತಿಯನ್ನು ಈ ದಂಪತಿಗಳು ಹೊಂದಿಲ್ಲ. ಹೀಗಾಗಿ, ದಾನಿಗಳು ಸಹಾಯ ಮಾಡುವಂತೆ ಕೋರಿದ್ದಾರೆ. ಆಸಕ್ತ ದಾನಿಗಳು ಯಾರಿದ್ದರೂ ಸಹಾಯವನ್ನು ಸುಕನ್ಯಳ ಕೆನರಾ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾವಣೆ ಮಾಡಬಹುದು.
A/c-1820108015822
IFSC-CNRB0001820
ಶೇಷಾದ್ರಿಪುರ ಬ್ರಾಂಚ್, ಶಿವಮೊಗ್ಗ
ಪಾಪಣ್ಣ- 9972035134
Discussion about this post