ನವದೆಹಲಿ: ಸೆ:10: ಪಾಕ್ ಆಕ್ರಮಿತ ಬಲೂಚಿಸ್ತಾನದಲ್ಲಿ ಪಾಕಿಸ್ತಾನಿ ಸೇನೆಯ ಅಟ್ಟಹಾಸ ತೀವ್ರಗೊಂಡಿದ್ದು, ಯೋಧರ ವ್ಯಾಪಕ ಹಿಂಸಾಚಾರ ಮತ್ತು ಕ್ರೌರ್ಯದಿಂದ ಅಲ್ಲಿನ ಕೆಲವು ನಾಗರಿಕರು ಹತರಾಗಿರುವ ಆತಂಕಕಾರಿ ಸಂಗತಿ ಬೆಳಕಿಗೆ ಬಂದಿದೆ. ಪಾಕ್ ಸೇನೆ ಬಲೂಚ್ ಜನರ ಮೇಲೆ ರಾಸಾಯನಿಕ ಅಸ್ತ್ರ ಬಳಸಿ ಸಾವು-ನೋವಿಗೆ ಕಾರಣವಾಗಿದ್ದ ಬೆನ್ನಲ್ಲೇ ಈಗ ಮತ್ತೊಂದು ನರಮೇಧಕ್ಕೆ ಸಜ್ಜಾಗುತ್ತಿದೆ.
ಸ್ವಾತಂತ್ರ ಬಯಸುತ್ತಿರುವ ಬಲೂಚ್ ಜನರಿಗೆ ಪಾಕ್ ಸೇನೆಯು ಮತ್ತೆ ಮಿಲಿಟಿರಿ ಕಾಯರ್ಾಚರಣೆ ನಡೆಸಿ ಚಿತ್ರಹಿಂಸೆ ನೀಡುತ್ತಿರುವುದನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಬಲೂಚ್ ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಅಬ್ದುಲ್ ನವಾಜ್ ಬಗ್ಟಿ ಬಹಿರಂಗಗೊಳಿಸಿದ್ದಾರೆ.
ಬಲೂಚಿಸ್ತಾನದ ಬಹುತೇಕ ಕಡೆ ಪಾಕ್ ಯೋಧರು ಹೊಸ ಸೇನಾ ಕಾಯರ್ಾಚರಣೆ ಆರಂಭಿಸಿದ್ದಾರೆ. ಕಳೆದ ವಾರ ಒಂದೇ ಕುಟುಂಬಕ್ಕೆ ಸೇರಿದ ಮಹಿಳೆಯರು ಮತ್ತು ಮಕ್ಕಳೂ ಒಳಗೊಂಡಂತೆ 19 ಬಲೂಚ್ ನಾಗರಿಕರನ್ನು ಅಪಹರಿಸಿ ಚಿತ್ರಹಿಂಸೆ ನೀಡಲಾಗಿದೆ. ಬಲೂಚ್ನ ಡೆರಾ ಬುಗ್ಟಿ ಪ್ರಾಂತ್ಯ ಮತ್ತು ನಾಸಿರಾಬಾದ್ ಜಿಲ್ಲೆಗಳಲ್ಲೂ ಕೂಡ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಇಲ್ಲಿ ಕೆಲವು ಅಮಾಯಕ ಜನರು ಹತರಾಗಿದ್ದಾರೆ. ತರ್ಬತ್ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ರಾಜಕೀಯ ಮುಖಂಡರ ಮನೆಗಳಿಗೆ ಪಾಕ್ ಸೇನೆ ದಿಗ್ಬಂಧನ ಹಾಕಿದೆ ಎಂದು ಅಲ್ಲಿನ ಕಟು ವಾಸ್ತವದ ಚಿತ್ರಣವನ್ನು ಅಬ್ದುಲ್ ನವಾಜ್ ಬಿಚ್ಚಿಟ್ಟಿದ್ದಾರೆ.
ಪಾಕ್ ಸೇನೆಯು ಬಲೂಚ್ ಪ್ರಾಂತ್ಯವನ್ನು ನರಕ ಸದೃಶ ಮಾಡಿದ ಸಂಗತಿಯನ್ನು ಕಳೆದ ವಾರವಷ್ಟೇ ಬಹಿರಂಗಗೊಳಿಸಿದ್ದ ಯುಎನ್ಎಚ್ಆರ್ಸಿಯ ಬಲೂಚ್ಸ್ತಾನ ಪ್ರತಿನಿಧಿ ಮೆಹ್ರಾನ್ ಮರಿ ಅವರು, ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್, ಸೇನಾ ಮುಖ್ಯಸ್ಥ ರಾಹೀಲ್ ಷರೀಫ್, ಐಎಸ್ಐ ಮಹಾನಿದರ್ೇಶಕ ಮತ್ತಿತ್ತರನ್ನು ಯುದ್ಧ ಅಪರಾಧಿಗಳು ಎಂದು ಬಣ್ಣಿಸಿದ್ದರು.
Discussion about this post