Read - 3 minutes
ಸಾಂಸದ ಪ್ರತಾಪ್ ಸಿಂಹ, ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಹಿಂದೂ ಮುಖಂಡರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದ 13 ಮಂದಿ ಆರೋಪಿಗಳನ್ನು ದೋಷಿಗಳು ಎಂದು ಎನ್ ಐಎ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಈ ಮೂಲಕ ಹಿಂದೂ ಮುಖಂಡರ ಹತ್ಯೆಗೆ ರೂಪಿಸಿದ್ದ ಸಂಚು ಸತ್ಯ ಎನ್ನುವುದು ಸಾಬೀತಾಗಿದೆ.
ಈ ಪ್ರಕರಣವನ್ನು ಗಮನಿಸುವುದಾದರೆ, 14 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದರೆ, ಝಾಕಿರ್ ಎಂಬಾತ ತನಿಖಾಧಿಕಾರಿಗಳ ಕೈಗೆ ಸಿಗದ ಕಾರಣ, 13 ಮಂದಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಈಗ ದೋಷಿಗಳು ಎಂದು ಘೋಷಿಸಲಾಗಿರುವ ಎಲ್ಲರನ್ನೂ ಬಂಧಿಸಿದ ವೇಳೆ ಇವರ ಬೆಂಬಲಿತ ತಂಡಗಳು ಹಾಗೂ ಗಂಜಿ ಕೇಂದ್ರದ ಗಿರಾಕಿಗಳು ಹಾಹಾಕಾರ ಪಟ್ಟಿದ್ದರು. ಆದರೆ, ಅವರೆಲ್ಲ ಬೊಬ್ಬೆ ಈಗ ಡೋಂಗಿ ಎಂದು ಸಾಬೀತಾಗಿದೆ.
ಸಾಂಸದ ಪ್ರತಾಪ್ ಸಿಂಹ, ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪತ್ರಕರ್ತ ವಿಶ್ವೇಶ್ವರ ಭಟ್ ಸೇರಿದಂತೆ ಹಲವರ ವಿರುದ್ಧ ಈ ಅಪರಾಧಿಗಳು ಸಂಚು ರೂಪಿಸಿ, ಹತ್ಯೆ ಮಾಡಲು ಉದ್ದೇಶಿಸಿದ್ದರು. ಇದಕ್ಕೆ ಕಾರಣವಿಷ್ಟೆ. ಹತ್ಯೆ ಪಟ್ಟಿಯಲ್ಲಿದ್ದ ಎಲ್ಲರೂ ಹಿಂದೂ ಧರ್ಮದ ಅಳಿವು ಹಾಗೂ ಉಳಿವಿಗಾಗಿ ಒಂದಲ್ಲಾ ಒಂದು ರೀತಿಯಲ್ಲಿ ಹೋರಾಟ ಮಾಡಿಕೊಂಡು ಬಂದವರು. ಅಂದರೆ, ಸನಾತನ ಧರ್ಮದ ಮೇಲಾಗುತ್ತಿರುವ ದೌರ್ಜನ್ಯವನ್ನು ಪ್ರತಿಭಟಿಸಿ, ಹಿಂದೂ ಧರ್ಮದ ಪರ ಹೋರಾಟಕ್ಕೆ ಪ್ರೇರೇಪಣೆ ನೀಡುವುದು ಮಾತ್ರವಲ್ಲದೇ, ಮುಸ್ಲಿಂ ಮೂಲಭೂತವಾಗಿಳ, ನಕ್ಸಲಿಸಂ ಹಾಗೂ ಭಯೋತ್ಪಾದನೆ ವಿರುದ್ಧ ಸೆಟೆದು ನಿಂತವರು. ಹೀಗಾಗಿಯೇ ಇವರೆಲ್ಲಾ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರು.
ಆದರೆ, ಸತ್ಯಕ್ಕೆ ಎಂದಿದ್ದರೂ ಜಯ ಇದ್ದೇ ಇರುತ್ತದೆ ಎನ್ನುವುದು ಇಂದಿನ ತೀರ್ಪಿನಿಂದ ಸಾಬೀತಾಗಿದೆ.
ಆದರೆ ಅರ್ಥವಾಗದಿರುವ ಪ್ರಶ್ನೆಯೆಂದರೆ, ಅಸಹಿಷ್ಣುತೆ ಎಂದು ಬೊಬ್ಬಿರಿಯುತ್ತಿದ್ದ ಬುದ್ಧಿಜೀವಿಗಳು, ಪ್ರಗತಿಪರರು, ಜಾಣಜಾಣೆಯರು ಹಾಗೂ ಕಾಂಗಿಗಳು ಈ ವಿಚಾರದಲ್ಲಿ ಮೌನವಾಗಿದ್ದುದು ಏಕೆ?
ಪನ್ಸಾರಿ ಹಾಗೂ ಕಲಬುರ್ಗಿ ಓರ್ವ ಅತ್ಯುತ್ತಮ ಸಾಹಿತಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ, ಅವರ ವಿಚಾರಧಾರೆಗಳು ಮತ್ತೊಂದು ಧರ್ಮವನ್ನು ಅವಹೇಳನ ಮಾಡುವ, ಇನ್ನೊಬ್ಬರ ನಂಬಿಕೆಗೆ ಧಕ್ಕೆ ತರವು ರೀತಿಯಿದ್ದರೆ ಅಂತಹ ಸಾಹಿತ್ಯ ಹಾಗೂ ಸಾಹಿತಿಯಿಂದ ಸಮಾಜಕ್ಕಾಗುವ ಲಾಭ ಏನು ಎಂಬ ಪ್ರಶ್ನೆ ಮೂಡುತ್ತದೆ.
ಕಲಬುರ್ಗಿ ಹತ್ಯೆ ನಡೆದ ಒಂದು ವರ್ಷ ಕಳೆದ ಹಿನ್ನೆಲೆಯಲ್ಲಿ ಈಗ್ಗೆ ಕೆಲವು ದಿನಗಳ ಹಿಂದೆ ಮಾತನಾಡಿದ್ದ ಸಾಹಿತಿ ಚಂಪಾ, ಐದು ಸಾವಿರ ವರ್ಷಗಳಿಂದ ನಮ್ಮನ್ನಾಳುತ್ತಿರುವ ವೈದಿಕ ಬ್ರಾಹ್ಮಣರು, ವೀರಶೈವ ಹಾಗೂ ಲಿಂಗಾಯತರು ಕೋಮುವಾದ ತರಲು ಹೆಗಲಿಗಳಾಗಿ ಶ್ರಮಿಸಿದ್ದಾರೆ. ನನ್ನ ಸಹಪಾಠಿ ಕಲಬುರ್ಗಿ ಮೂಲಭೂತವಾದಿಗಳ ಒಳಸಂಚಿನಿಂದ ಬಲಿಯಾದರು ಎಂದಿದ್ದರು.
ಸ್ವಾಮಿ ಚಂಪಾ ಅವರೇ, ನಿಮ್ಮನ್ನಾರು ಸಾಹಿತಿ ಎಂದದ್ದು. ಪ್ರಮುಖ ವ್ಯಕ್ತಿಯೊಬ್ಬರ ಹತ್ಯೆ ಪ್ರಕರಣದ ತನಿಖೆ ನಡೆಯುವಾಗ ಅಥವಾ ತನಿಖೆ ನಡೆದು ವರದಿ ಮೂಲಕ ಸತ್ಯಾಂಶ ಯಾವುದು ಎಂದು ಸಾಬೀತಾಗುವ ಮುನ್ನ ಇಂತಹುದ್ದೇ ಕಾರಣಗಳಿಗೆ ಹಾಗೂ ಇಂತಹುದ್ದೇ ವ್ಯಕ್ತಿಗಳಿಂದ ಅಥವಾ ಸಮುದಾಯದಿಂದ ಹತ್ಯೆಯಾಗಿದೆ ಎಂದು ಅದು ಹೇಗೆ ಹೇಳುತ್ತೀರಿ? ಹಾಗೇ ತೀರ್ಪು ನೀಡಲು ತಾವೇನು ಮುಖ್ಯಮಂತ್ರಿ ಸಿದ್ಧರಾಮಯ್ಯರೇ, ಮಾಜಿ ಸಚಿವ ಜಾರ್ಜ್ ಅವರೇ ಅಥವಾ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತರೇ?
ಸಾಹಿತಿ ಎನಿಸಿಕೊಂಡ ತಮಗೆ, ಇಂತಹ ವಿಚಾರದಲ್ಲಿ ಸತ್ಯಾಂಶ ಹೊರಬರುವ ಮುನ್ನ ಇಂತಹ ಹೇಳಿಕೆಗಳನ್ನು ನೀಡಬಾರದು ಎಂಬ ಕನಿಷ್ಠ ಜ್ಞಾನವಿಲ್ಲವೇ? ಅಥವಾ ವಯಸ್ಸಾದ್ದರಿಂದ ತಮ್ಮ ಬುದ್ಧಿಗೆ ಮಂಕು ಕವಿದಿದೆಯೇ?
ಐದು ಸಾವಿರ ವರ್ಷಗಳಿಂದ ವೈದಿಕ ಬ್ರಾಹ್ಮಣರು, ವೀರಶೈವರು ಹಾಗೂ ಲಿಂಗಾಯತರು ನಮ್ಮನ್ನಾಳುತ್ತಿದ್ದಾರೆ ಎನ್ನುತ್ತೀರಿ. ಹೌದು, ಇವರೆಲ್ಲಾ ದಬ್ಬಾಳಿಕೆ ಮಾಡಿದ್ದಾರೆ ಎಂದೇ ಇಟ್ಟುಕೊಳ್ಳೋಣ. ಐದು ಸಾವಿರ ವರ್ಷ ಬಿಡಿ, ತಾವು ಈ ಭೂಮಿಯ ಮೇಲೆ ಜನಿಸಿದ ನಂತರವಾದರೂ ಈ ದಬ್ಬಾಳಿಕೆಯನ್ನು ತಡೆಯುವ ಪ್ರಯತ್ನ ಮಾಡಿ, ಜಾತಿ ಎನ್ನುವುದನ್ನು ತೊಡೆಯಲು ಯಾವ ಪ್ರಯತ್ನವನ್ನು ಮಾಡಿದ್ದೀರಿ ಸ್ವಲ್ಪ ವಿವರಿಸಿ. ಸಾಧ್ಯವೇ ಇಲ್ಲ, ಅಂತಹ ಪ್ರಯತ್ನಗಳು ನಿಮ್ಮ ಹಾಗೂ ನಿಮ್ಮ ಗಂಜಿ ಕೇಂದ್ರದ ಗಿರಾಕಿಗಳಿಂದ ಆಗಿರಲು ಸಾಧ್ಯವೇ ಇಲ್ಲ. ಕಾರಣ, ನಿಮ್ಮ ಗಂಜಿ ಕೇಂದ್ರದ ಬಂಡವಾಳವೇ ಜಾತಿ ಹಾಗೂ ಧರ್ಮ. ಹೀಗಿದ್ದಾಗ ನೀವು ಬ್ರಾಹ್ಮಣರ ಬಗ್ಗೆ ಮಾತನಾಡುತ್ತೀರಿ..
ಮೂಲಭೂತವಾದಿಗಳು… ಮೂಲಭೂತವಾದಿಗಳು ಎಂದು ನೀವೆಲ್ಲಾ ಬೊಬ್ಬೆ ಹೊಡೆಯುತ್ತೀರಲ್ಲಾ, ಯಾವ ಮೂಲಭೂತವಾದ ಸ್ವಾಮಿ. ಗಾಂಧಿ ಹತ್ಯೆಯನ್ನು ಪರಿವಾರದ ತಲೆಗೆ ಕಟ್ಟುವ ನೀವು, ಗಾಂಧಿಯವರ ಪ್ರಭಾವವಿದ್ದಾಗಲೇ ಭಗತ್ ಸಿಂಗ್ ರನ್ನು ಬ್ರಿಟೀಷರು ನೇಣಿಗೆ ಹಾಕಿದ್ದನ್ನು ಹಾಗೂ ಈ ವಿಚಾರದಲ್ಲಿ ಅಂದು ಇದ್ದ ಗಾಂಧಿ, ನೆಹರೂ ವೈಫಲ್ಯವನ್ನು ಖಂಡಿಸುವುದಿಲ್ಲ.
ಪ್ರಸ್ತುತ ವಿಚಾರದಲ್ಲೇ ನೋಡುವುದಾದರೆ, ಕಲಬುರ್ಗಿ ಹತ್ಯೆ ವಿಚಾರದಲ್ಲಿ ಹಿಂದೂ ಮೂಲಭೂತವಾದಿಗಳು ಎಂದು ಹೇಳುವ ನಿಮಗೆ ಹಿಂದೂ ಪ್ರಮುಖರ ಹತ್ಯೆ ಮಾಡಲು ಯತ್ನಿಸಿ ಇಂದು ದೋಷಿಗಳು ಎಂದು ಸಾಬೀತಾಗಿರುವ ಮುಸ್ಲಿಂ ಮೂಲಭೂತವಾದದ ಪಾಪ ಪಿಂಡಗಳು ಕಾಣುವುದಿಲ್ಲ. ಈ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿರುವವರು, ಶೋಯೆಬ್ ಅಹ್ಮದ್ ಮಿರ್ಜಾ, ಅಬ್ದುಲ್ ಹಕೀಮ್ ಜಮಾದಾರ್, ರಿಯಾಜ್ ಅಹ್ಮದ್ ಬ್ಯಾಹಟ್ಟಿ, ಮೊಹಮದ್ ಅಕ್ರಮ್, ಉಬೇದುಲ್ಲಾ ಬಹದ್ದೂರ್, ವಾಹಿದ್ ಹುಸೇನ್, ಜಫರ್ ಇಕ್ಬಾಲ್ ಶೋಲಾಪುರ್, ಮೊಹಮದ್ ಸಾಧಿಕ್, ಮೆಹಬೂಬ್ ಬಾಗುಲ್ ಕೋಟ, ಒಬೈದ್ ಉರ್ ರೆಹಮಾನ್, ನಯೀಮ್ ಸಿದ್ಧಿಕಿ, ಇಮ್ರಾನ್ ಅಹ್ಮದ್ ಹಾಗೂ ಸಯ್ಯದ್ ತಾಂಜಿಮ್ ಅಹ್ಮದ್… ಇವೆಲ್ಲಾ ನಿಮ್ಮ ಗಂಜಿ ಕೇಂದ್ರ ಪ್ರೇರಿತ ಮೂಲಭೂತವಾದದ ಪಾಪ ಪಿಂಡಗಳೇ ಸ್ವಾಮಿ.
ವೈಚಾರಿಕತೆಯ ಹತ್ಯೆ ಎಂದು ಹಿಂದೂಗಳ ವಿರುದ್ಧ ಮಾತನಾಡುವ ತಾವು, ಅದೇ ಹಿಂದೂ ವೈಚಾರಿಕತೆಯ ಕುರಿತು ಹೋರಾಡುವ, ಬರೆಯುವವರನ್ನು ಹತ್ಯೆ ಮಾಡುವ ಸಂಚು ರೂಪಿಸುವುದು ಅಸಹಿಷ್ಣುತೆಯಾಗಿ ಕಾಣುವುದಿಲ್ಲ. ಈ ದೇಶ, ಈ ನೆಲ ಹಿಂದೂಗಳ ಮೂಲ. ಎಲ್ಲಿಂದಲೋ ವಲಸೆ ಬಂದವರಿಗೆ ನಾವು ಜಾಗ ಕೊಟ್ಟು ಸಲಹಿದ್ದೇವೆ, ಆದರಿಸಿದ್ದೇವೆ. ಪ್ರಪಂಚಕ್ಕೆ ವಿಶ್ವ ಬ್ರಾತೃತ್ವದ ಶ್ರೇಷ್ಠ ಕಲ್ಪನೆಯನ್ನು ನೀಡಿದ ಏಕೈಕ ಧರ್ಮ ಎಂದರೆ ಅದು ಹಿಂದೂ ಧರ್ಮ. ಇಂತಹ ನೆಲದಲ್ಲಿ ಹುಟ್ಟಿದ ಬುದ್ಧಿಜೀವಿಗಳು, ಪ್ರಗತಿಪರರು ಇಂದು ಅದೇ ನೆಲಮೂಲದ ಧರ್ಮವನ್ನೇ ದ್ವೇಶಿಸುತ್ತಾ, ಮಗ್ಗಲು ಮುಳ್ಳಾಗಿ ಕಾಡುತ್ತಿರುವುದು ಈ ದೇಶಕ್ಕೆ ಬಡಿದ ಶಾಪವೇ ಹೌದು. ಆದರೆ, ಈಗ ಕಾಲ ಬದಲಾಗಿದೆ… ನಿಮ್ಮ ಗಂಜೀ ಕೇಂದ್ರದ ಆಟ ಹೆಚ್ಚು ದಿನ ನಡೆಯುವುದಿಲ್ಲ ಹಾಗೂ ಅದನ್ನು ಸಹಿಸಿಕೊಂಡು ಕೂರಲು ಹಿಂದೂ ಸಿಂಹಗಳು ಈಗ ಸಿದ್ಧವೂ ಇಲ್ಲ. ಕಾರಣ… ಹಿಂದೂಗಳ ಸಹನೆ, ತಾಳ್ಮೆ, ಕ್ಷಮಾಗುಣ ಈ ಧರ್ಮ ಕಲಿಸಿದ ಶ್ರೇಷ್ಠ ಪಾಠವೇ ಹೊರತು ಅದು ಹಿಂದೂಗಳ ದೌರ್ಬಲ್ಯವಲ್ಲ… ನೆನಪಿರಲಿ…
Discussion about this post