ಈಗ ನೇರ ವಿಚಾರಕ್ಕೆ ಬರೋಣ. ಉಡುಪಿ ಕೃಷ್ಣ ಮಠದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟ ಹಾಕಲಾಗುತ್ತದೆ. ಆ ಮೂಲಕ ಬೇಧಭಾವ ಮಾಡಿ, ದಲಿತರನ್ನು ತುಳಿಯಲಾಗುತ್ತಿದೆ. ಇದನ್ನು ಮೂಲೋತ್ಪಾಟನೆ ಮಾಡಲು ಸಹಪಂಕ್ತಿ ಭೋಜನ ನಡೆಯಬೇಕು. ಇದಕ್ಕಾಗಿ ಉಡುಪಿ ಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಗಡುವು ನೀಡಿದ್ದಾರೆ ಈ ಮಹಾನುಭಾವರು.
ಕಳೆದ ವಾರ ಚಲೋ ಉಡುಪಿ ಎಂಬ ಅರ್ಥವಿಲ್ಲದ ಕಾರ್ಯಕ್ರಮವೊಂದನ್ನು ಉಡುಪಿಯಲ್ಲಿ ನಡೆಸಿ, ಉಡುಪಿ ಪೇಜಾವರ ಸ್ವಾಮಿಗಳನ್ನು, ಚಕ್ರವರ್ತಿ ಸೂಲಿಬೆಲೆಯನ್ನು, ಹಿಂದೂ ಹಾಗೂ ಬ್ರಾಹ್ಮಣರನ್ನು ತೆಗಳುವ ವೇದಿಕೆಯನ್ನು ಮಾಡಿಕೊಳ್ಳಲಾಗಿತ್ತು. ಅಂದು ವೇದಿಕೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಅಮಿನ್ ಮಟ್ಟು ಎಂಬ ಬೋಳು ಮಂಡೆ, ಪೇಜಾವರ ಸ್ವಾಮೀಜಿ ಮೆದುಳನ್ನು ಸ್ವಚ್ಛಗೊಳಿಸಬೇಕು ಎಂದಿದ್ದರು. ಅಸಲಿಗೆ ಈ ವ್ಯಕ್ತಿಗೆ ಪೇಜಾವರ ಸ್ವಾಮಿಗಳ ಬಗ್ಗೆ ಮಾತನಾಡುವ ಯೋಗ್ಯತೆ ಇದೆಯೇ ಎಂಬುದು ಪ್ರಶ್ನೆ.
ವಾಸ್ತವವಾಗಿ ಈ ವ್ಯಕ್ತಿಯನ್ನು ಮಾಧ್ಯಮ ಸಲಹೆಗಾರನಾಗಿ ನೇಮಕ ಮಾಡಿಕೊಂಡಿರುವ ಸಿದ್ಧರಾಮಯ್ಯರ ಉದ್ದೇಶವಾದರೂ ಏನಿದೆ? ಈ ವ್ಯಕ್ತಿಯ ಕೆಲಸ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರಿಕೆ. ಆದರೆ, ಈ ಮನುಷ್ಯ ಆ ಕೆಲಸವನ್ನು ಬಿಟ್ಟು ಹಿಂದೂಗಳ ಮೇಲೆ, ಸ್ವಾಮೀಗಳ ಮೇಲೆ, ಬಲಪಂಥೀಯ ನಾಯಕರ ಮೇಲೆ ಹರಿಹಾಯುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾ ಕಾಲಹರಣ ಮಾಡುತ್ತಿರುವುದನ್ನು ನೋಡಿದರೆ, ಇದಕ್ಕಾಗಿಯೇ ಈತನನ್ನು ನೇಮಕ ಮಾಡಲಾಗಿದೆಯೇ ಎಂಬ ಅನುಮಾನ ಮೂಡುತ್ತಿದೆ.
ಇರಲಿ… ಈಗ…ಉಡುಪಿ ಕೃಷ್ಣ ಮಠದಲ್ಲಿ ಸಹಪಂಕ್ತಿ ಭೋಜನ ಮಾಡಬೇಕು ಎಂದು ಈ ಎಡಪಂಥೀಯರು, ಪ್ರಗತಿಪರರು ಹೇಳುತ್ತಿರುವ ವಿಚಾರಕ್ಕೆ ಬರೋಣ.
ಉಡುಪಿ ಕೃಷ್ಣ ಮಠದಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟ ಹಾಕಲಾಗುತ್ತದೆ. ಆ ಮೂಲಕ ದಲಿತರನ್ನು ತುಳಿಯಲಾಗುತ್ತಿದೆ ಎಂದು ಈ ಮತಿಗೇಡಿಗಳು ಆರೋಪಿಸಿದ್ದಾರೆ. ಹೌದು ಉಡುಪಿಯಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಊಟ ಹಾಕಲಾಗುತ್ತಿದೆ. ಅದರಿಂದ ಇವರಿಗಾದ ಸಮಸ್ಯೆಯೇನು? ಪ್ರತ್ಯೇಕ ಊಟ ಹಾಕುವುದು ರಾಷ್ಟ್ರೀಯ ಸಮಸ್ಯೆಯೇ?
ಮಠದ ಒಳಗೆ ಬ್ರಾಹ್ಮಣರಿಗೆ ಪ್ರತ್ಯೇಕ ಊಟದ ವ್ಯವಸ್ಥೆಯಿದೆ. ಹಾಗಯೇ, ಇದೇ ಮಠದ ಪ್ರಾಂಗಣದಲ್ಲಿಯೇ ಎಲ್ಲ ಜಾತಿ, ಧರ್ಮೀಯರಿಗೂ ಸಹಪಂಕ್ತಿ ಭೋಜನದ ವ್ಯವಸ್ಥೆಯಿದೆ. ಈ ವ್ಯವಸ್ಥೆಯಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ. ವಾಸ್ತವವಾಗಿ ಪ್ರತ್ಯೇಕ ಊಟ ಹಾಕುವುದರಿಂದ ಸಮಸ್ಯೆಯಾಗುತ್ತಿದೆ ಎಂದು ಮಠಕ್ಕೆ ಭೇಟಿ ನೀಡುವ ಭಕ್ತರು ಅಳಲು ತೋಡಿಕೊಳ್ಳಬೇಕು. ಅವರುಗಳೇ ಯಾವುದೇ ರೀತಿಯ ತಕರಾರು ಮಾಡದೇ, ಭಕ್ತಿಯಿಂದ ಕೃಷ್ಣ ಪ್ರಸಾದವನ್ನು ಸ್ವೀಕರಿಸಿ ತೆರಳುತ್ತಾರೆ.
ಆದರೆ, ವರ್ಷಕ್ಕೊಮ್ಮೆಯೂ ಮಠಕ್ಕೆ ಭೇಟಿ ನೀಡದ, ಕೃಷ್ಣನಿಗೆ ಕೈಮುಗಿಯದ, ದೇವರಲ್ಲಿ ನಂಬಿಕೆಯಿಲ್ಲದ ಇವರಿಗೆ ಸಹಪಂಕ್ತಿ ಭೋಜನದ ವಿಚಾರವೇಕೆ?
ಇಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ವಿಚಾರದಲ್ಲಿ ದಲಿತರನ್ನು ಎಳೆದು ತರುತ್ತಿರುವ ಈ ಸಮಾಜವಿರೋಧಿ ವ್ಯಕ್ತಿಗಳು ಆಹಾರದ ಹಕ್ಕು ಎಂಬ ಮಾತನ್ನು ಆಡುತ್ತಾರೆ. ಇವರಿಗೆ ಹೇಗೆ ಆಹಾರದ ಹಕ್ಕು ಎನ್ನುವುದಿದೆಯೋ, ಅದೇ ರೀತಿ ಬ್ರಾಹ್ಮಣರಿಗೂ ಆಹಾರದ ಹಕ್ಕಿದೆ. ಹಾಗಿದ್ದಾಗ ಪ್ರತ್ಯೇಕವಾಗಿ ಊಟ ಮಾಡಿಕೊಂಡರೆ ಅದರಿಂದಾಗುವ ಸಮಸ್ಯೆಯೇನು?
ಸಹಪಂಕ್ತಿ ಭೋಜನ ಮಾಡಬೇಕು, ಬ್ರಾಹ್ಮಣರಿಗೆ ಪ್ರತ್ಯೇಕ ಊಟ ಹಾಕಬಾರದು ಎಂದು ಹೇಳಲು ಉಡುಪಿ ಕೃಷ್ಣ ಮಠವೇನು ಸರ್ಕಾರದ ಅನುದಾನ ಭಿಕ್ಷೆಯಲ್ಲಿ ನಡೆಯುತ್ತಿಲ್ಲ. ಅಥವಾ ಮಧ್ವಾಚಾರ್ಯರು ಕೃಷ್ಣ ಮಠವನ್ನು ಸ್ಥಾಪಿಸುವ ವೇಳೆ ಸರ್ಕಾರ, ಪ್ರಗತಿಪರರ ಹಾಗೂ ಬುದ್ಧಿಜೀವಿಗಳ ಸಹಾಯಹಸ್ತ ಬೇಡಿಲ್ಲ. ಹೀಗಿದ್ದಾಗ ಮಠ ಹೀಗಿರಬೇಕು ಎಂದು ಹೇಳುವ ಹಕ್ಕು, ಅಧಿಕಾರ ಹಾಗೂ ಯೋಗ್ಯತೆ ನಿಮಗಿಲ್ಲ.
ಕೇವಲ ಹಿಂದೂ ದೇವಾಲಯಗಳನ್ನು ಟಾರ್ಗೆಟ್ ಮಾಡುವ ನಿಮಗೆ, ಸರ್ಕಾರಿ ಅಂದರೆ ಮುಜರಾಯಿ ಇಲಾಖೆಗೆ ಹಿಂದೂ ದೇವಾಲಯಗಳಿಂಗ ಬರುವ ಆದಾಯದಿಂದ ಅನುದಾನ ಪಡೆಯುವ ಮಸೀದಿ, ದರ್ಗಾ ಹಾಗೂ ಚರ್ಚ್‌ಗಳ ಕುರಿತಾಗಿ ಮಾತನಾಡುತ್ತಿಲ್ಲ ನೀವುಗಳು. ಮಸೀದಿಯಲ್ಲಿ ಇಂದಿಗೂ ಹೆಣ್ಣು ಮಕ್ಕಳಿಗೆ ಪ್ರವೇಶ ನೀಡುವುದಿಲ್ಲ. ಇದು ನಿಮಗೆ ಮಹಿಳಾ ಶೋಷಣೆ ಎನಿಸುವುದಿಲ್ಲವೇ? ಅಸಮಾನತೆಯ ಪ್ರಜ್ಞೆ ಕಾಡುವುದಿಲ್ಲವೇ?
ಮಸೀದಿ, ಚರ್ಚ್‌ಗಳಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳು, ಘಟನೆಗಳು ಹೊರಜಗತ್ತಿಗೆ ಬಾರದೇ ಹೋಗುತ್ತವೆ. ಎಂದಾದರೂ ಆ ವಿಚಾರಗಳ ಕುರಿತಾಗಿ ನೀವು ಮಾತನಾಡಿದ್ದೀರಾ? ಸಮಾನತೆ ಎಂದು ಬೊಬ್ಬಿರಿಯುತ್ತೀರಿ. ಆದರೆ, ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಮಾನ ನಾಗರಿಕ ಸಂಹಿತೆಗೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಆ ವಿಚಾರದ ಕುರಿತು ಮಾತನಾಡುವ ಧೈರ್ಯ ಹಾಗೂ ಸಂಹಿತೆ ಸಹಮತ ವ್ಯಕ್ತಪಡಿಸುವಂತೆ ಮುಸ್ಲಿಂ ಸಂಘಟನೆಗಳಿಗೆ ಹೇಳುವ ತಾಕತ್ತು ನಿಮಗೆ ಇದೆಯೇ? ಸಾಧ್ಯವೇ ಇಲ್ಲ. ನಿಮ್ಮ ರೋಷಾವೇಶವೇನಿದ್ದರೂ ಅದು ಹಿಂದೂಗಳ ವಿರುದ್ಧವಷ್ಟೇ.
ಆರ್ಥಿಕ ವಿಚಾರದಲ್ಲಿ ಸಮಾನತೆ ಬೇಡವೇ?
ಮಠದಲ್ಲಿ ಹಾಕಲಾಗುವ ಊಟದಲ್ಲಿ ಸಮಾನತೆ ಬೇಕು ಎಂದು ಬೊಬ್ಬಿರಿಯುವ ಪ್ರಗತಿಪರರಿಗೆ, ಜಾತ್ಯತೀತವಾದಿಗಳಿಗೆ ಹಾಗೂ ಬುದ್ಧಿಜೀವಿಗಳಿಗೆ ನಿಜವಾಗಿಯೂ ದಲಿತರನ್ನು ಉದ್ದಾರ ಮಾಡಬೇಕು ಎಂಬ ಉದ್ದೇಶವಿಲ್ಲ ಎನ್ನುವುದು ಸ್ಪಷ್ಟ.
ದಲಿತ, ಹಿಂದುಗಳಿದ ವರ್ಗಕ್ಕೆ ಸೇರಿದ ಸಾವಿರಾರು ಮಂದಿ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾರೆ. ಅದರಲ್ಲಿ ಹಲವು ಮಂದಿ ಪ್ರತಿ ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ವೇತನ ಪಡೆಯುತ್ತಿದ್ದಾರೆ. ಸಮಾನತೆ ಎಂದು ಬೊಬ್ಬಿರಿಯುವ ಇವರ, ಈ ರೀತಿ ಲಕ್ಷಗಟ್ಟಲೆ ವೇತನ ಪಡೆಯುವ ಮಂದಿಯಿಂದ ಅದೇ ವರ್ಗಕ್ಕೆ ಸೇರಿದ ಬಡವರಿಗೇಕೆ ಸಹಾಯ ಮಾಡಿಸಬಾರದು. ಬ್ರಾಹ್ಮಣ ಸೇರಿದಂತೆ ಮುಂದುವರೆದ ಜನಾಂಗಕ್ಕೆ ಸೇರಿದವರಲ್ಲಿ ಹೇಗೆ ಶ್ರೀಮಂತರು, ಬಡವರೂ ಇದ್ದಾರೆ ಅದೇ ರೀತಿಯಲ್ಲಿ ಹಿಂದುಳಿದ ಹಾಗೂ ದಲಿತರಲ್ಲೂ ಶ್ರೀಮಂತರು ಹಾಗೂ ಬಡವರಿದ್ದಾರೆ. ಶ್ರೀಮಂತ ದಲಿತರಿಂದ ಬಡ ದಲಿತರಿಗೆ ಸಹಾಯ ದೊರೆಯುವಂತೆ ಮಾಡುವ ತಾಕತ್ತು ನಿಮಗೆ ಇದೆಯೇ? ಉಳ್ಳ ಶ್ರೀಮಂತ ದಲಿತರಿಂದ ಅದರಲ್ಲೂ ಪ್ರಮುಖವಾಗಿ ದಲಿತರು ಎಂದು ವೇದಿಕೆಯ ಮೇಲೆ ಮಾತನಾಡುವ ಬಹುತೇಕ ಎಲ್ಲ ಮಂದಿ ಕೋಟ್ಯಾಧಿಪತಿಗಳೇ. ಅವರೇಕೆ ತಮ್ಮ ಆಸ್ತಿಯಲ್ಲಿ ಒಂದಷ್ಟನ್ನು ದಾನ ಮಾಡಿ ಬಡ ದಲಿತರಿಗೆ ಸಹಾಯ ಮಾಡಬಾರದು. ಪ್ರಯತ್ನಿಸಿನೋಡಿ.
ವಾಸ್ತವವಾಗಿ ದಲಿತ ವರ್ಗಕ್ಕೆ ಸೇರಿದ ಲಕ್ಷಾಂತರ ಮಂದಿ ಈ ಜಾತಿಭೇಧದ ಕುರಿತಾಗಿ ತಲೆಕೆಡಿಸಕೊಂಡಿರುವುದೇ ಇಲ್ಲ. ಪೇಜಾವರ ಶ್ರೀಗಳನ್ನು ಸಾಕ್ಷಾತ್ ದೇವರಂತೆ ಕಾಣುವ ಎಷ್ಟೋ ದಲಿತರಿದ್ದಾರೆ. ಅವರಲ್ಲಿ ಭಕ್ತಿ ಕಾಣುತ್ತದೆಯೇ ಹೊರತು ಜಾತಿ, ಪ್ರತ್ಯೇಕ ಊಟ ಕಾಣುವುದಿಲ್ಲ. ಅದು ಕಾಣುವುದೇನಿದ್ದರೂ ಜಾತಿ ಹೆಸರು ಹೇಳಿಕೊಂಡು ಸ್ವಾರ್ಥ ಸಾಧಿಸಿಕೊಳ್ಳುವವರಿಗೆ ಮಾತ್ರ.
ದಲಿತರನ್ನು ಉದ್ದಾರ ಮಾಡುವ ಮಾತನಾಡುವ ಮೊದಲು ಇದನ್ನು ಚಿಂತಿಸಿ. ಮೊನ್ನೆ ಚಲೋ ಉಡುಪಿ ಕಾರ್ಯಕ್ರಮಕ್ಕೆ ಎಷ್ಟು ವೆಚ್ಚವಾಗಿದೆ ಎಂಬ ಲೆಕ್ಕವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ನೋಡೋಣ. ಉದಾಹರಣೆಗೆ ಚಲೋ ಉಡುಪಿ ಕಾರ್ಯಕ್ರಮಕ್ಕೆ ಒಂದು ಲಕ್ಷ ವೆಚ್ಚವಾಗಿದೆ ಎಂದಿಟ್ಟುಕೊಳ್ಳೋಣ. ಅದೇ ಒಂದು ಲಕ್ಷವನ್ನು ಕಾರ್ಯಕ್ರಮಕ್ಕೆ ವೆಚ್ಚ ಮಾಡುವ ಬದಲಾಗಿ, ಕಷ್ಟದಲ್ಲಿರುವ ದಲಿತ ಕುಟುಂಬವೊಂದನ್ನು ಗುರುತಿಸಿ, ಆ ಕುಟುಂಬದ ಮಕ್ಕಳ ವಿದ್ಯಾಭ್ಯಾಸ, ಮೂಲ ಸೌಕರ್ಯ ಕಲ್ಪಿಸುವ ವ್ಯವಸ್ಥೆ ಮಾಡಬಹುದಿತ್ತು. ಅದು ನಿಜವಾದ ದಲಿತರ ರಕ್ಷಣೆ ಹಾಗೂ ಸೇವೆ ಆಗುತ್ತಿತ್ತು. ಆದರೆ, ಅದರ ಬದಲಾಗಿ ಲಕ್ಷಗಟ್ಟಲೆ ವೆಚ್ಚ ಮಾಡಿ ವೇದಿಕೆ ಕಾರ್ಯಕ್ರಮ ಮಾಡಿ, ಬೊಬ್ಬಿರಿದರೆ ಅಥವಾ ಉಡುಪಿ ಮಠದಲ್ಲಿ ಸಹಪಂಕ್ತಿ ಭೋಜನ ಮಾಡಿದರೆ ದಲಿತರು ಉದ್ದಾರವಾಗುವುದಿಲ್ಲ. ಬದಲಾಗಿ, ನಿಮ್ಮ ಸ್ವಾರ್ಥ ಸಾಧನೆಯಾಗುತ್ತದೆಯಷ್ಟೆ.
ದಲಿತರು ಎಂದಿಗೂ ತಮ್ಮನ್ನು ತಾವು ಹಿಂದೆ ಎಂದುಕೊಂಡಿಲ್ಲ. ಬದಲಾಗಿ, ಎಲ್ಲ ರಂಗದಲ್ಲೂ ಮುಂದೆ ಬರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಅವರಿಗೆ ಸಾಮಾಜಿಕ ಜೀವನದಲ್ಲಿ ಸದೃಢರಾಗಲು ಬೇಕಾದ ಅವಕಾಶವನ್ನು ಸೃಷ್ಠಿಸಿ, ಸಹಕಾರ ನೀಡುವ ಬದಲಾಗಿ, ಊಟದಲ್ಲಿ ಸಮಾನತೆ ನೀಡಬೇಕು ಎಂದು ಹೇಳುವ ಮೂಲಕ ವಾಸ್ತವವಾಗಿ ದಲಿತರಿಗೆ ಅವಮಾನ ಮಾಡುತ್ತಿದ್ದೀರಿ. ಸ್ವಾಭಿಮಾನಿ ದಲಿತರಿಗೆ ಸಮಾನತೆ ಎಂದರೆ ಕೇವಲ ಊಟದಲ್ಲಿ ಮಾತ್ರವೇ?
*ಯಾವುದೇ ಮಠ, ಮಂದಿರಕ್ಕೆ ತೆರಳುವುದು ಪೂಜೆ ಹಾಗೂ ಮಾನಸಿಕ ನೆಮ್ಮದಿಗಾಗಿಯೇ ಹೊರತು ಊಟಕ್ಕಾಗಿ ಅಲ್ಲ. ಆದರೆ, ಉಡುಪಿ ಮಠದ ವಿಚಾರದಲ್ಲಿ ಸಹಪಂಕ್ತಿ ಭೋಜನದ ಅಂಶವನ್ನು ಮಾತನಾಡುತ್ತಾರೆ ಎಂದರೆ, ಮಠಕ್ಕೆ ತೆರಳುವುದು ಭಕ್ತಿಗಾಗಿ, ಅಲ್ಲಿ ಭಕ್ತಿ ಮುಖ್ಯವೇ ಹೊರತು ಇನ್ನೇನೂ ಅಲ್ಲ ಎನ್ನುವುದು ಬೋಳುಮಂಡೆ ಕಾಣೆ ಮೀನು ಪ್ರಿಯನಿಗೆ ತಿಳಿದಿಲ್ಲವೇ?
*ಗುಜರಾತಿನಿಂದ ಬಂದ ಜಿಗ್ನೇಶಿ ಬಾಯಿ ಪೇಜಾವರ ಶ್ರೀಗಳ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡುತ್ತಾನೆ ಎಂದರೆ, ಆ ವ್ಯಕ್ತಿಗೆ ಇಲ್ಲಿನವರು ಇನ್ನೆಷ್ಟು ವಿಷಬೀಜ ಬಿತ್ತಿರಲಿಕ್ಕಿಲ್ಲ?
*ಉಡುಪಿ ಮಠಕ್ಕೆ ಸೇರಿದ ಶಾಲೆಗಳಲ್ಲಿ ಎಲ್ಲ ಜಾತಿ-ಧರ್ಮೀಯರಿಗೂ ಅವಕಾಶ ನೀಡುತ್ತಿರುವುದು ಸಮಾನತೆಯಲ್ಲವೇ?
*ದಲಿತರ ಕೇರಿಗೆ ಹೋಗಿ, ಪಾದಪೂಜೆ ಮಾಡಿಸಿಕೊಳ್ಳುವ ಪೇಜಾವರ ಶ್ರೀಗಳು ಅದು ಹೇಗೆ ದಲಿತ ವಿರೋಧಯಾಗುತ್ತಾರೆ?
*ಎಲ್ಲಿಂದರೋ ಬಂದವರು ಮಠಕ್ಕೆ ಮುತ್ತಿಗೆ ಹಾಕುವ ಮುನ್ನ ಕೃಷ್ಣ ಮಠಕ್ಕೆ ಮುತ್ತಿಗೆ ಹಾಕುವ ಮುನ್ನ ಮಠದ ಇತಿಹಾಸವೇನಾದರೂ ನಿಮಗೆ ತಿಳಿದಿದೆಯೇ?
*ಪೇಜಾವರ ಶ್ರೀಗಳು ದಲಿತರ ಅಭಿವೃದ್ಧಿಗೆ ಒತ್ತು ನೀಡಿದ ಕಾರ್ಯಗಳ ಬಗ್ಗೆ ನಿಮಗೆ ತಿಳಿದಿದೆಯೇ?
*ಇಡಿಯ ದೇಶವೇ ಹೆಮ್ಮೆ ಪಡುವಂತಹ ವಯೋವೃದ್ಧ, ಜ್ಞಾನ ವೃದ್ದ ಸನ್ಯಾಸಿಯ ವಿರುದ್ಧವಾಗಿ ನಿಮ್ಮ ಯುದ್ಧ ಎಂದಾದರೆ ನಿಮ್ಮಗಳನ್ನು ಗಂಡಸರು ಎಂದು ಕರೆಯುವುದಾದರೂ ಹೇಗೆ?
*ಈ ವಿಚಾರದ ಕುರಿತಾಗಿ ಅಂದರೆ, ಯಾಕೆ ಸಹಪಂಕ್ತಿ ಭೋಜನ ಬೇಡ ಎನ್ನುವುದನ್ನು ನಾವು ತಿಳಿಸುತ್ತೇವೆ. ಮಾತನಾಡುವ ಬನ್ನಿ ಎಂದು ಪೇಜಾವರರು ಹೇಳಿದ್ದರೂ, ಮಠಕ್ಕೆ ಮುತ್ತಿಗೆ ಹಾಕುತ್ತೇವೆ ಎಂದು ಮಾತನಾಡುತ್ತೀರಾದರೆ ನಿಮ್ಮ ನೀಜತನಕ್ಕೆ ಮಿತಿಯಿಲ್ಲವೇ?
*ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಹಿಂದೂ ಧರ್ಮದ ಮೇಲೆ ನಡೆದಷ್ಟು ದಾಳಿಗಳು ಯಾವುದೇ ಧರ್ಮದ ಮೇಲೆ ನಡೆದಿಲ್ಲ. ಅಷ್ಟು ದಾಳಿಗಳ ನಂತರವೂ ಹಿಂದೂ ಧರ್ಮ ಇನ್ನೂ ಸದೃಢವಾಗಿ ಉಳಿದಿದೆ ಎಂದರೆ ಅದು ಈ ಧರ್ಮದ ಅಂತಃಸತ್ವ. ಇಂತಹ ಧರ್ಮದ ಪೇಜಾವರರ ಮೇಲೆ, ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಿ ಜಯಿಸಿಕೊಳ್ಳುವ ತಾಕತ್ತು ನಿಮಗೆ ಇದೆಯೇ ಎಂಬುದನ್ನು ಪ್ರಶ್ನಿಸಿಕೊಳ್ಳುವ ಮನಸ್ಸಿದೆಯೇ ನಿಮಗೆ?
Discussion about this post