ಉಡುಪಿ. ಸೆ,19: ಎನ್.ಆರ್.ಐ. ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯ 2ನೇ ಆರೋಪಿ ನವನೀತ್ ಶೆಟ್ಟಿಗೆ 2 ದಿನಗಳ ಕಾಲ ಸಿಐಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದರ ಜೊತೆಗೆ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದ 3ನೇ ಆರೋಪಿ ನಿರಂಜನ ಭಟ್ಟನ ಪೊಲೀಸ್ ಕಸ್ಟಡಿಯನ್ನು ಇನ್ನೂ 2 ದಿನ ಮುಂದುವರಿಸಲಾಗಿದೆ.
ಸೋಮವಾರ ಪ್ರಕರಣದ ಎಲ್ಲಾ ಆರೋಪಿಗಳನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅವರಲ್ಲಿ ಮೊದಲ ಆರೋಪಿ ರಾಜೇಶ್ವರಿ, 4ನೇ ಆರೋಪಿ ಶ್ರೀನಿವಾಸ ಭಟ್ಟ, 5ನೇ ಆರೋಪಿ ರಾಘವೇಂದ್ರ ಅವರಿಗೆ ನ್ಯಾಯಾಲಯವು ಅಕ್ಟೋಬರ್ 3ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತು.
ಉಡುಪಿ ಮೂಲದ ದುಬಾಯಿಯಲ್ಲಿ ಕೋಟ್ಯಾಧಿಪತಿ ಉದ್ಯಮಿಯಾಗಿದ್ದ ಭಾಸ್ಕರ ಶೆಟ್ಟಿ ಅವರ ಆಸ್ತಿಗಾಗಿ ಪತ್ನಿ ರಾಜೇಶ್ವರಿ, ಮಗ ನವನೀತ್ ಶೆಟ್ಟಿ ಕೊಲೆ ಮಾಡಿ, ಆಪ್ತ ನಿರಂಜನ ಭಟ್ಟದ ಸಹಾಯದಿಂದ ಶವವನ್ನು ಸುಟ್ಟು ಹಾಕಿದ್ದರು. ಪ್ರಕರಣದ ಸಾಕ್ಷ್ಯಗಳನ್ನು ನಿರಂಜನ ಭಟ್ಟದ ತಂದೆ ಶ್ರೀನಿವಾಸ ಭಟ್ಟ ಮತ್ತು ಕಾರು ಚಾಲಕ ರಾಘವೇಂದ್ರ ನಾಶ ಮಾಡಿದ್ದರು.
ಆರಂಭದಲ್ಲಿ ಪ್ರಕರಣವನ್ನು ಉಡುಪಿ ಪೊಲೀಸರು ತನಿಖೆ ನಡೆಸಿ ಎಲ್ಲಾ ಆರೋಪಿಗಳನ್ನು ಬಂಧಿಸಿದ್ದರು. ನಂತರ ಸಾರ್ವಜನಿಕ ಒತ್ತಾಯದ ಮೇರೆಗೆ ಗೃಹ ಇಲಾಖೆಯು ಪ್ರಕರಣವನ್ನು ಸಿಐಡಿಗೆ ಹಸ್ತಾಂತರಿಸಿದೆ.