ಸರ್ಕಾರ ಬರಗಾಲ ಪರಿಹಾರ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಆರಂಭಿಸಿದರೆ ಸ್ಪಲ್ವವಾದರೂ ಜನ ನೆಮ್ಮದಿಯನ್ನು ಕಾಣಬಹುದು. ಕೇಂದ್ರವೂ ಸಹ ರಾಜ್ಯದ ಬರ ಪರಿಸ್ಥಿತಿಗೆ ನೆರವಾಗಬೇಕಿದೆ. ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳನ್ನು ಕಳುಹಿಸಿ ಬರಸಮೀಕ್ಷೆ ಮಾಡಿಸಿ ಹೆಚ್ಚಿನ ಮೊತ್ತದ ಪರಿಹರ ಘೋಷಣೆಗೆ ಮುಂದಾಗಬೇಕಿಕು. ರಾಜ್ಯದ ಸಾಂಸದರು ಕೇಂದ್ರದ ಮೇಲೆ ಒತ್ತಡ ತರುವತ್ತ ಕಾರ್ಯೋನ್ಮುಖರಾಗಬೇಕಿದೆ. ಬರ ಎದುರಾಗಿರುವ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಮ್ಮನದಿಂದ ಕೆಲಸ ಮಾಡಬೇಕು. ಇದನ್ನು ಬಿಟ್ಟು ಕೇಂದ್ರ ರಾಜ್ಯ ಸರ್ಕಾರವನ್ನು, ರಾಜ್ಯ ಕೇಂದ್ರವನ್ನು ದೂಷಿಸುತ್ತ ಕೂಡ್ರುವ ಕೆಲಸವನ್ನು ಮಾಡಬಾರದು.
ರಾಜ್ಯದಲ್ಲಿ ಈ ಬಾರಿ ಮತ್ತೆ ಬರಗಾಲ ಕಾಲಿಟ್ಟಿದೆ. ನಿಗದಿತ ಪ್ರಮಾಣದಲ್ಲಿ ಮಳೆ ಸುರಿಯದೆ ಸೆಪ್ಟೆಂಬರ್‌ನಲ್ಲೇ ಬರಪೀಡಿತ ತಾಲೂಕುಗಳನ್ನು ಘೋಷಿಸುವ ಪರಿಸ್ಥಿತಿ ಬಂದೊದಗಿದೆ.
ಮಳೆ ಇಲ್ಲದೆ ಜಲಾಶಯಗಳು ತುಂಬಿಲ್ಲ. ಇದರಿಂದ ಬೆಳೆಗೆ ನೀರಿಲ್ಲ ಮತ್ತು ಕುಡಿಯಲು ನೀರಿಲ್ಲ. ಬೆಳೆಗೆ ನೀರು ಕೊಟ್ಟರೆ ಕುಡಿಯಲು ನೀರಿರುವುದಿಲ್ಲ. ಹೀಗೆ ಒಂದರ ಮೇಲೊಂದು ಸಮಸ್ಯೆ ಎದುರಾಗಿದೆ. ಕರ್ನಾಟಕ ಸರ್ಕಾರ ಬರಗಾಲಪೀಡಿತ ತಾಲೂಕುಗಳ ಪಟ್ಟಿ ಮಾಡುವಲ್ಲಿ ನಿರತವಾಗಿದೆ.
ರಾಜ್ಯದಲ್ಲ್ ಒಟ್ಟೂ ೭ ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ನಾಟಿಯಾಗಬೇಕಿತ್ತು. ಆದರೆ ಈ ಬಾರಿ ಕೇವಲ ೨,೪೨ ಹೆಕ್ಟೇರ್‌ನಲ್ಲಿ ಮಾತ್ರ ನಾಟಿಯಾಗಿದೆ. ಇದು ಆಘಾತಕರಿ ವಿಚಾರವಾಗಿದೆ. ಮಳೆಯಾಗದೇ ಇರುವುದರಿಂದ ರೈತರು ಭತ್ತ ನಾಟಿಯತ್ತ ತಲೆಹಾಕಲೇ ಇಲ್ಲ. ಈ ವರ್ಷ ಮಳೆಗಾಲ ಉತ್ತಮ ಆರಂಭವನ್ನು ಮಾಡಿ ನಿರೀಕ್ಷೆಯನ್ನು ಹುಟ್ಟಿಸಿತ್ತು. ಇದರಿಂದ ಎಲ್ಲರೂ ಸಂತಸಗೊಂಡಿದ್ದರು. ಆದರೆ ಬರಬರುತ್ತ ಮಳೆ ಕಡಿಮೆಯಾಗತೊಡಗಿತರು. ಆರಂಭದ ಅಂದರೆ ಜೂನ್ ತಿಂಗಳಲ್ಲೇ ಕೊರತೆಯ ಮಳೆ ಕಾಡಿತು. ಮತ್ತೆ ಜುಲೈ, ಆಗಸ್ಟ್‌ನಲ್ಲೂ ಇದೇ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ೨೦೦೨ರಿಂದ ೨೦೦೫ರವರೆಗಿನ ವರ್ಷದಲ್ಲಿ ಮಾತ್ರ ಉತ್ತಮ ಮಳೆಯಾಗಿದೆ. ಇದರ ಹೊರತುಪಡಿಸಿದರೆ ಎಲ್ಲ ವರ್ಷವೂ ಮಳೆ ಖೋತಾ. ಅರೆಬರೆ ಬರಗಾಲ ಬಂದಿತ್ತು. ಆದರೆ ಇದನ್ನು ಎದುರಿಸುವಲ್ಲಿ ಆಯಾಯ ಸರ್ಕಾರಗಳು ಯಶಸ್ಸಿಗಿಂತ ಹೆಚ್ಚು ವಿಫಲತೆಯನ್ನೇ ಕಂಡಿವೆ. ಏಕೆಂದರೆ ಎಷ್ಟೇ ಬರ ಎದುರಾದರೂ ಸರಕಾರಗಳು ಮುನ್ನೆಚ್ಚರಿಕೆ ಕೈಗೊಳ್ಳದಿರುವುದು ಇದಕ್ಕೆ ಕಾರಣ. ಈ ವರ್ಷವೂ ಕಳೆದೆಲ್ಲ ವರ್ಷಗಳಿಗಿಂತ ಮುನ್ನವೇ ಬರ ಕಾಲಿಟ್ಟಿದೆ. ಇದು ರಾಜ್ಯದ ಜನರನ್ನು ಆತಂಕಕ್ಕೆ ನೂಕಿದೆ. ಮುಂದಿನ ಜೀವನ ಹೇಗೆಂಬ ಭಯ ಕಾಡಲಾರಂಭಿಸಿದೆ. ಬೆಳೆಗಳೆಲ್ಲ ಬಹುತೇಕ ನೆಲಕಚ್ಚಿವೆ. ಇನ್ನೊಂದೆಡೆ, ಬೆಳೆವಿಮೆಯೂ ಸರಿಯಾಗಿ ಪಾವತಿಯಾಗದೆ ರೈತ ಕಂಗಾಲಾಗಿದ್ದಾನೆ. ಬೆಳೆದ ಬೆಳೆಗೂ ಉತ್ತಮ ಬೆಲೆ, ಮಾರುಕಟ್ಟೆ ಇಲ್ಲದೆ ಇನ್ನಷ್ಟು ಹೈರಾಣಾಗುವಂತಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲೇ ಈ ಬಾರಿ ಶೇ. ೭೦ರಷ್ಟು ಮಳೆ ಕೊರತೆ ಆಗಿದೆ. ಮಲೆನಾಡಿನ ಜಿಲ್ಲೆಯಲ್ಲಿ ಹೀಗಾದರೆ ಇನ್ನು ಬಯಲುಸೀಮೆ, ಅರೆಬಯಲುಸೀಮೆ ಜಿಲ್ಲೆಗಳ ಪರಿಸ್ಥಿತಿ ಏನಾಗಬಹುದು? ಬಯಲುಸೀಮೆಯ ಜಿಲ್ಲೆಯಲ್ಲಿ ಯಥಾಪ್ರಕರ ಗುಳೆ ಆರಂಭವಾಗಿದೆ. ಮುಂಬಯಿ, ಗೋವಾ ಮತ್ತು ಕರಾವಳಿ ಜಿಲ್ಲೆಗಳತ್ತ ವಲಸೆ ಆರಂಭವಾಗಿದೆ. ಅನ್ನಕ್ಕಾಗಿ ಇವರು ಕುಟುಂಬಸಹಿತ ಊರು ಖಾಲಿ ಮಾಡುತ್ತಿದ್ದಾರೆ. ಇವರನ್ನು ತಡೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಯೋಜನೆಯನನ್ನು ಕೂಡಲೇ ಜಾರಿಗೊಳಿಸುವ ಕೆಲಸವಾಗಬೇಕಿದೆ. ಈ ಯೋಜನೆಯಲ್ಲಿ ದಿನಕ್ಕೆ ೨೦೪ ರೂ. ಗಳ ವೇತನವನ್ನು ಪುರುಷ ಮತ್ತು ಮಹಿಳೆಯರಿಗೆ (ಸಮಾನವಾಗಿ) ನೀಡಲಾಗುತ್ತಿದೆ. ಆದರೆ ಈ ವರ್ಷ ಇನ್ನೂ ಇದು ಆರಂಭವಾಗಿಲ್ಲ.
ಸರ್ಕಾರ ಬರಗಾಲ ಪರಿಹಾರ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಆರಂಭಿಸಿದರೆ ಸ್ಪಲ್ವವಾದರೂ ಜನ ನೆಮ್ಮದಿಯನ್ನು ಕಾಣಬಹುದು. ಕೇಂದ್ರವೂ ಸಹ ರಾಜ್ಯದ ಬರ ಪರಿಸ್ಥಿತಿಗೆ ನೆರವಾಗಬೇಕಿದೆ. ಕೇಂದ್ರ ಸರ್ಕಾರ ತನ್ನ ಅಧಿಕಾರಿಗಳನ್ನು ಕಳುಹಿಸಿ ಬರಸಮೀಕ್ಷೆ ಮಾಡಿಸಿ ಹೆಚ್ಚಿನ ಮೊತ್ತದ ಪರಿಹರ ಘೋಷಣೆಗೆ ಮುಂದಾಗಬೇಕಿಕು. ರಾಜ್ಯದ ಸಾಂಸದರು ಕೇಂದ್ರದ ಮೇಲೆ ಒತ್ತಡ ತರುವತ್ತ ಕಾರ್ಯೋನ್ಮುಖರಾಗಬೇಕಿದೆ. ಬರ ಎದುರಾಗಿರುವ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಮ್ಮನದಿಂದ ಕೆಲಸ ಮಾಡಬೇಕು. ಇದನ್ನು ಬಿಟ್ಟು ಕೇಂದ್ರ ರಾಜ್ಯ ಸರ್ಕಾರವನ್ನು, ರಾಜ್ಯ ಕೇಂದ್ರವನ್ನು ದೂಷಿಸುತ್ತ ಕೂಡ್ರುವ ಕೆಲಸವನ್ನು ಮಾಡಬಾರದು.
ಬರಗಾಲ ತಡೆಯುವ ನಿಟ್ಟಿನಲ್ಲಿ ಶಾಶ್ವತ ಕಾರ್ಯಕ್ರಗಳನ್ನು ಕೈಗೊಳ್ಳುವ ಬಗ್ಗೆ ಯೋಜನೆ ರೂಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಕಳೆದ ವರ್ಷ ರಾಜ್ಯ ಸರ್ಕಾರ ಕೆರೆಗಳ ಹೂಳೆತ್ತುವಿಕೆ, ಮಳೆ ನೀರು ಸಂಗ್ರಹ, ಬಸಿಗಾಲುವೆಯಂತಹ ಕಾರ್ಯಕ್ರಮವನ್ನು ರೂಪಿಸಿತ್ತು. ಒತ್ತುವರಿಯಾಗಿದ್ದ ಅನೇಕ ಕೆರೆಗಳನ್ನು ತೆರವುಗೊಳಿಸಿ ಬೇಲಿ ಹಾಕಿಸಿ, ಅವುಗಳ ಸಂರಕ್ಷಣೆಗೆ ಮುಂದಾಗಿತ್ತು ಈ ವರ್ಷವೂ ಇದನ್ನು ಮುಂದುವರೆಸಿದರೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಜಲಮರುಪೂರಣಕ್ಕೆ ಅನುಕೂಲವಾಗಬಹುದು. ಇದರಿಂದ ಬರಗಾಲವನ್ನು ಎದುರಿಸಲು ಸಹಕಾರಿಯಗಬಹುದು.
ಬರಗಾಲದ ಹಿನ್ನೆಲೆಯಲ್ಲಿ ಸಾಕಷ್ಟು ಕುಡಿಯುವ ನೀರು ಕಾಪಾಡಿಕೊಳ್ಳುವತ್ತ ಸರಕಾರ ಕ್ರಮ ಜರುಗಿಸಬೇಕು. ಕಾವೇರಿ ಜಲಾನಯನ ಪ್ರದೇಶದಲ್ಲಿನ ನೀರಿಗೆ ಜಯಲಲಿತಾ ಗಂಟುಬಿದ್ದಿರುವುದರಿಂದ ಆ ಭಾಗದ ಜಿಲ್ಲೆಯ ಜನರಿಗೆ ಬೇಸಿಗೆಯಲ್ಲಿ ಈ ಬಾರಿ ಕುಡಿಯುವ ನೀರು ಕೊಡುವುದು ಕಷ್ಟವಾದೀತು. ಬೆಂಗಳೂರಿನಂತಹ ಮಹಾನಗರ ನೀರಿಗಾಗಿ ಪರಿತಪಿಸಬೇಕಾದ ಸ್ಥಿತಿ ಎದುರಾಗಲಿದೆ. ಮಲೆನಾಡು ಜಿಲ್ಲೆಗಳಲ್ಲೂ ಜಲಾಶಯಗಳು ಭರ್ತಿಯಾಗಿಲ್ಲ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗಿದ್ದರೂ ಆಲಮಟ್ಟಿ ಜಲಾಶಯ ತುಂಬಿಲ್ಲ. ಇದರಿಂದ ಆ ಭಾಗದ ಕುಡಿಯುವ ನೀರು, ಬೆಳೆಗಳಿಗೆ ಕಂಟಕ ಕಾದಿರುವುದು ನಿಶ್ಚಿತ…
Discussion about this post