Read - < 1 minute
ಬ್ಯಾಂಕಾಕ್, ಅ.18: ಗಂಡಾಂತರದಲ್ಲಿ ಸಿಲುಕಿದ ಪ್ರಾಣಿಗಳನ್ನು ಮನುಷ್ಯರು ರಕ್ಷಿಸುವುದು ಸಾಮಾನ್ಯ ಸಂಗತಿ. ಆದರೆ, ಅಪಾಯದಲ್ಲಿರುವ ಮಾನವನ ಜೀವ ಉಳಿಸಲು ಪ್ರಾಣಿಗಳೂ ಮುಂದಾಗುವ ವಿರಳ ಪ್ರಕರಣಗಳೂ ಇವೆ. ಪ್ರಾಣಿಯ ನಿಷ್ಕಲ್ಮಶ ಪ್ರೀತಿ ಸಾರುವ ಈ ಸ್ವಾರಸ್ಯಕರ ಘಟನೆ ಥೈಲೆಂಡ್ನಿಂದ ವರದಿಯಾಗಿದೆ.
ಪ್ರವಾಹದಲ್ಲಿ ಸಿಲುಕಿ ಮುಳುಗುತ್ತಿದ್ದ ತಮ್ಮ ಆಪ್ತ ಗೆಳೆಯನ ರಕ್ಷಣೆಗಾಗಿ ಮರಿಯಾನೆಯೊಂದು ನೀರಿಗಿಳಿದ ಅಪರೂಪದ ಸಂಗತಿಯೊಂದು ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿಯಾಗಿದೆ. ಈ ವೀಡಿಯೋವನ್ನು 20 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿ ಗಜ-ಮಾನವನ ಪ್ರೀತಿ ವಿಶ್ವಾಸಕ್ಕೆ ತಲೆದೂಗಿದ್ದಾರೆ.
ಉತ್ತರ ಥೈಲೆಂಡ್ನ ಎಲಿಫೆಂಟ್ ನೇಚರ್ ಪಾರ್ಕ್ ನಲ್ಲಿ ಅನೆಗಳ ತರಬೇತುದಾರ ಡಾರ್ರಿಕ್ ಈಜಾಡಲು ನೀರಿಗೆ ಇಳಿದ. ನೀರಿನ ಪ್ರವಾಹವೂ ಜೋರಾಗಿತ್ತು. ಇದನ್ನು ಖಾಮ್ ಲ್ಹಾ ಎಂಬ ಹೆಣ್ಣು ಮರಿಯಾನೆ ಗಮನಿಸಿತು. ಸ್ವಚ್ಚಂದವಾಗಿ ಈಜಾಡುತ್ತಿದ್ದ ಡಾರ್ರಿಕ್ ನೀರಿನಲ್ಲಿ ಮುಳುಗಿ ಸಾಯುತ್ತಾನೆ ಎಂದು ಭಾಸಿದ ಇದು ಪ್ರವಾಹದ ನೀರನ್ನು ಲೆಕ್ಕಿಸದೇ ಆತನ ಬಳಿ ಧಾವಿಸಿ ಆತನನ್ನು ರಕ್ಷಿಸಲು ಯತ್ನಿಸಿತು. ಈ ವೀಡಿಯೋ ದೃಶ್ಯ ಅ.12ರಂದು ಸೋಯಲ್ ನೆಟ್ ವರ್ಕ್ ನಲ್ಲಿ ಅಪ್ಲೋಡ್ ಆಗಿದೆ. ಈ ದೃಶ್ಯವನ್ನು ಈವರೆಗೆ 2.2 ದಶಲಕ್ಷ ಮಂದಿ ವೀಕ್ಷಿಸಿ ಖಾಮ್ ಲ್ಹಾ ಆನೆ ಪ್ರೀತಿಗೆ ಫಿದಾ ಆಗಿದ್ದಾರೆ.
ಪ್ರಾಣಿಗಳನ್ನು ಪ್ರೀತಿ ವಿಶ್ವಾಸದಿಂದ ಉಪಚರಿಸಿದರೆ ಅವೂ ಸಹ ನಮಗೆ ಅದನ್ನು ಧಾರೆ ಎರೆಯುತ್ತವೆ ಎಂಬುದು ಇದರಿಂದ ಸಾಬೀತಾಗಿದೆ ಎಂಬ ಬರಹವುಳ್ಳ ಈ ವೀಡಿಯೋ ಲೋಕಪ್ರಿಯವಾಗಿದೆ.
Discussion about this post