ನವದೆಹಲಿ, ಸೆ.17: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆರ್ಥಿಕತೆಯ ಹಾದಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದು, ಭಾರತದ ಆರ್ಥಿಕಾಭಿವೃದ್ಧಿ ಗಟ್ಟಿಗೊಳ್ಳುತ್ತಿದೆ ಎಂದು ವಿಶ್ವದ ಅತ್ಯಂತ ಪ್ರಭಾವೀ ಬ್ಯಾಂಕರ್ ಹಾಗೂ ಜೆಪಿ ಮೋರ್ಗನ್ ಚೇಸ್ ಕಂಪೆನಿ ಸಿಇಒ ಜೇಮೀ ಡಿಮನ್ ಶ್ಲಾಘಿಸಿದ್ದಾರೆ.
ಭಾರತಕ್ಕೆ ಭೇಟಿ ನೀಡಿರುವ ಅವರು ಜಾಗತಿಕ ಸಮಾವೇಶವೊಂದರಲ್ಲಿ ಮೋದಿ ಕುರಿತಂತೆ ಮಾತನಾಡಿದ್ದಾರೆ. ನಾವು ಭಾರತವನ್ನು ಪ್ರೀತಿಸುತ್ತೇವೆ. ನಾವು ೧೯೪೫ರಿಂದಲೂ ಭಾರತದ ಸಂಪರ್ಕದಲ್ಲಿದ್ದೇವೆ. ಈ ಸಮಾವೇಶ ಭಾರತದ ಅಭಿವೃದ್ಧಿಗೆ ಸಾಕ್ಷಿಯಾಗಿದೆ ಎಂದಿರುವ ಅವರು, ಪ್ರಪಂಚದ ಸುಮಾರು ೧೦೦ಕ್ಕೂ ಅಧಿಕ ಕಂಪೆನಿಗಳ ಭಾರತದಲ್ಲಿ ಕಾರ್ಯಾರಂಭ ಮಾಡಲು ಉತ್ಸುಕವಾಗಿವೆ ಎಂದಿದ್ದಾರೆ.
ಭಾರತ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ ವಿಚಾರವನ್ನು ಜಾಗತಿಕ ಮಟ್ಟದ ಪರವಾಗಿ ನಾನು ಭಾರತೀಯರಿಗೆ ತಿಳಿಸಲು ಬಯಸುತ್ತೇನೆ ಎಂದಿರುವ ಜೇಮೀ, ಇಲ್ಲಿನ ಶಿಕ್ಷಣ ಹಾಗೂ ಕಾರ್ಯ ನೀತಿ ಉತ್ತಮವಾಗಿದ್ದು, ಇದರಲ್ಲಿ ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಯ ಹಾದಿ ಅತ್ಯಂತ ಪರಿಣಾಮಕಾರಿಯಾಗಿದೆ. ಭಾರತ ಒಂದು ಶ್ರೇಷ್ಠ ರಾಷ್ಟ್ರ ಎಂದು ಶ್ಲಾಘಿಸಿದ್ದಾರೆ.
ದೇಶದ ಅಭಿವೃದ್ಧಿಯ ದೃಷ್ಠಿಯಿಂದ ಮೋದಿ ಸೃಜಿಸಿರುವ ದಾರಿಗಳು ಉತ್ತಮವಾಗಿವೆ ಎಂದಿರುವ ಅವರು, ಹೊಸ ಸವಾಲುಗಳನ್ನು ಹುಟ್ಟುಹಾಕುವ ಜೊತೆಯಲ್ಲಿ, ರಚನಾತ್ಮಕ ಬದಲಾವಣೆಗಳನ್ನು ಮಾಡುತ್ತಿರುವುದು ಉತ್ತಮವಾದ ನಡೆಯಾಗಿದೆ ಎಂದಿದ್ದಾರೆ.
Discussion about this post