ನವದೆಹಲಿ, ಸೆ.23: ಭಾರತೀಯ ಸೇನೆಗೆ ಹಾಗೂ ರಕ್ಷಣಾ ವ್ಯವಸ್ಥೆಗೆ ಹೆಚ್ಚಿನ ಬಲ ನೀಡುವ ರಾಫಲ್ ಜೆಟ್ ಯುದ್ಧ ವಿಮಾನಗಳನ್ನು ಖರೀದಿಸಲು ಫ್ರಾನ್ಸ್‌ನೊಂದಿಗಿನ ಒಪ್ಪಂದಕ್ಕೆ ಭಾರತ ಇಂದು ಸಹಿ ಹಾಕಿದೆ.
ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರೊಂದಿಗೆ ನವದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಮಾತುಕತೆಯ ನಂತರ ಖರೀದಿ ಒಪ್ಪಂದಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹಿ ಹಾಕಿದರು.
ಭಾರತ ಫ್ರಾನ್ಸ್‌ನಿಂದ ಒಟ್ಟು 36 ರಾಫೆಲ್ ಯುದ್ಧ ವಿಮಾನಗಳನ್ನು ಖರೀದಿಸಲು ನಿರ್ಧರಿಸಿದ್ದು, ಇದರ ಒಟ್ಟು ವ್ಯಾವಹಾರಿಕ ಮೊತ್ತ 7.8 ಬಿಲಿಯನ್(780 ಕೋಟಿ) ರೂ.ಗಳಾಗಿದೆ.
ಇಂದು ಸಹಿ ಹಾಕಲಾದ ಒಪ್ಪಂದದ ಪ್ರಕಾರ, ಒಪ್ಪಂದದ ಪ್ರಕಾರ ಭಾರತ ಫ್ರಾನ್ಸ್‌ಗೆ ಶೆಲ್ಪ್ ಡಸ್ಸಾಲ್ಟ್ ರಫೇಲ್ ಅವಳಿ ಎಂಜಿನ್ ಯುದ್ಧ ವಿಮಾನಗಳಿಗಾಗಿ ಅಂದಾಜು 58 ಸಾವಿರ ರೂ.ಗಳನ್ನು ಪಾವತಿ ಮಾಡಲಿದೆ. ಈ ಮೊತ್ತದ ಶೇ. 15ರಷ್ಟು ಹಣವನ್ನು ಮುಂಗಡವಾಗಿ ಪಾವತಿ ಮಾಡಲಿದೆ.
ಒಪ್ಪಂದ ಪ್ರಕಾರ ಭಾರತವು ಮೆಟೆಯೊರ್ ಕ್ಷಿಪಣಿ ಸೇರಿದಂತೆ ಬಿಡಿಭಾಗಗಳು ಹಾಗೂ ಶಸ್ತ್ರಾಸ್ತ್ರಗಳನ್ನೂ ಪಡೆಯಲಿದೆ. ಈ ಯುದ್ಧ ವಿಮಾನಗಳು ವಿಶ್ವದಲ್ಲೆ ಅತ್ಯಾಧುನಿಕ ಎಂದು ಖ್ಯಾತಿ ಪಡೆದಿವೆ.















