ಶಿಕಾರಿಪುರ, ಸೆ.3: ಸೊರಬ ಹಾಗು ಶಿಕಾರಿಪುರ ಎರಡು ನನ್ನಕಣ್ಣುಗಳು ಎಂದು ಹೇಳುವ ಶಾಸಕ ಮಧು ಬಂಗಾರಪ್ಪ ಶಿಕಾರಿಪುರಕ್ಕೆ ನೀಡಿರುವ ಕೊಡುಗೆಯಾದರೂ ಏನು? ಎಂದು ಶಾಸಕ ಬಿ.ವೈ.ರಾಘವೇಂದ್ರ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಇಪ್ಪತ್ತು ದಿನಗಳಿಂದ ನಮ್ಮ ಬಗ್ಗೆಆರೋಪಗಳನ್ನು ಮಾಡುತ್ತಿದ್ದು,ಇಂಥಹ ಹೇಳಿಕೆಗಳಿಂದನಿಮ್ಮಗೌರವ ಹೆಚ್ಚುತ್ತದೆಎಂದು ಭಾವಿಸುವುದುತಪ್ಪು. ಹದ್ದು ಮೀರಿ, ಯೋಗ್ಯತೆ ಮೀರಿ ಮಾತನಾಡುವುದನ್ನು ಬಿಡಬೇಕು ಎಂದು ಕಿವಿಮಾತು ಹೇಳಿದರು.
ಇಂದಿಗೂ ಸೊರಬದ ಕೆಎಸ್‌ಆರ್‌ಟಿಸಿ ಬಸ್‌ಸ್ಟಾಂಡ್‌ಉದ್ಘಾಟನೆಯಾಗಿಲ್ಲ, ಹಿಂದುಳಿದ ತಾಲೂಕು ಆಗಿದ್ದ ಸೊರಬವನ್ನು ಅಭಿವೃದ್ಧಿ ಮಾಡಿದ್ದು ಯಡಿಯೂರಪ್ಪನವರೇ ಹೊರತು ಬಂಗಾರಪ್ಪನವರಲ್ಲ. ರಸ್ತೆ, ಕಾಲೇಜು ಶಿಕ್ಷಣ ಸೇರಿದಂತೆ ಹಲವು ಅಭಿವೃದ್ಧಿ ಮಾಡಿದ್ದು ಅವರು. ನೀವು ಪಾದಯಾತ್ರೆ ಮಾಡಿ ಮೊಸಳೆಕಣ್ಣೀರು ಸುರಿಸಿದಿರಿ, ಬಗರ್ ಹುಕಂರೈತರ ಬಗ್ಗೆಏನಾದರು ಕಾಳಜಿ ಇದ್ದರೆ ಅದು ಯಡಿಯೂರಪ್ಪನವರಿಗೆ ಮಾತ್ರಎಂದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಗುರುಮೂರ್ತಿ, ಕಾಡಾ ಮಾಜಿ ಅಧ್ಯಕ್ಷ ಶೇಖರಪ್ಪ, ರಾಜ್ಯ ಎಸ್‌ಸಿ ಮೋರ್ಛಾ ಉಪಾಧ್ಯಕ್ಷ ರಾಮಾನಾಯ್ಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನವೀರಪ್ಪ,ಮುಖಂಡರಾದ ಭದ್ರಾಪುರ ಹಾಲಪ್ಪ, ಸುಕೇಂದ್ರಪ್ಪ.ಬಿ.ಎಚ್.ನಾಗರಾಜ್, ಚಾರಗಲ್ಲಿ ಪರಶುರಾಮ್, ನಿಂಬೆಗೂಂದಿ ಸಿದ್ದಲಿಂಗಪ್ಪ, ವಸಂತಗೌಡ, ರಹಮತ್ ಅಲಿ ಇನ್ನಿತರರು ಇದ್ದರು.
ನಿಮ್ಮ (ಮಧು ಬಂಗಾರಪ್ಪ) ಕ್ಷೇತ್ರವನ್ನು ನೀವು ನೋಡಿಕೊಳ್ಳಿ. ಬಂಗಾರಪ್ಪನವರ ಬಗ್ಗೆ ನಮಗೆ ಗೌರವವಿದೆ. ರಾಜಕೀಯ ದೊಂಬರಾಟ ನಡೆಸುವುದನ್ನು ಬಿಟ್ಟು ನಿಮ್ಮನ್ನುಆರಿಸಿದ ಕ್ಷೇತ್ರದಅಭಿವೃದ್ಧಿ ಕಡೆ ಗಮನಕೊಡಿ. ಬಳಿಗಾರ್ ಯಡಿಯೂರಪ್ಪ ನವರಿಂದಕಾಡು ನಾಶವಾಯಿತು ಎಂದು ಹೇಳಿದ್ದಾರೆ. ಈ ವಿಚಾರವಾಗಿ ಬಳಿಗಾರ್ ರೈತರ ಕ್ಷಮೆಯಾಚಿಸಬೇಕು.
– ಬಿ.ವೈ. ರಾಘವೇಂದ್ರ
Discussion about this post