ಕಾವೇರಿಯು ಪುರಾಣಗಳಲ್ಲಿ ವರ್ಣಿಸಲಾದ ಸಪ್ತ ಪುಣ್ಯ ನದಿಗಳಲ್ಲಿ ಒಂದು ಹಾಗೂ ದಕ್ಷಿಣದಲ್ಲಿರುವ ಏಕೈಕ ಮಹಾ ನದಿ. ಬ್ರಹ್ಮನ ಮಗಳಾದ ಲೋಪಾಮುದ್ರೆಯು ಭೂಲೋಕದಲ್ಲಿ ಲೋಕೊದ್ಧಾರಕ್ಕಾಗಿ ವಾಸಿಸುತ್ತಿದ್ದಳು. ಕವೇರನೆಂಬ ಮುನಿಯು ಬ್ರಹ್ಮನನ್ನು ಕುರಿತು ತಪಸ್ಸನ್ನಾಚರಿಸಿ ಬ್ರಹ್ಮನಿಂದ ವರವನ್ನು ಪಡೆದನು. ನದಿಯ ಉಗಮಕ್ಕಾಗಿ ಮುನಿಗಳು ಸೂಕ್ತಜಾಗದ ಅನ್ವೇಷಣೆಯಲ್ಲಿ ಇರುವುದನ್ನು ತಿಳಿದಿದ್ದ ಗಣೇಶ ಇದೇ ಸೂಕ್ತವಾಗಿದೆ ಎಂದೆನಿಸಿ ಕಮಂಡಲವನ್ನು ನೆಲದ ಮೇಲೆ ಇಟ್ಟುಬಿಟ್ಟನು. ಅಲ್ಲಿಯೇ ಹಾರಾಡುತ್ತಿದ್ದ ಕಾಗೆಯೊಂದು ಕಮಂಡಲವನ್ನು ತಾಕುವಂತೆ ಕುಳಿತುಕೊಂಡಿತು. ಅಷ್ಟರಲ್ಲಿ ಹಿಂತಿರುಗಿದ ಅಗಸ್ತ್ಯ ಮುನಿಗಳು ಕಾಗೆಯನ್ನು ನೋಡಿ ಧಾವಂತದಿಂದ ಅದನ್ನು ಓಡಿಸಲು ಪ್ರಯತ್ನಿಸಿದಾಗ ಕಮಂಡಲದ ನೀರು ಚೆಲ್ಲಿತು. ಸಣ್ಣ ಪ್ರಮಾಣದ ಜಲವು ಜಲಧಾರೆಯಾಗಿ ನದಿಯಾಗಿ ಹರಿಯಿತು ಎಂದು ಹೇಳಲಾಗಿದೆ.
ಮಹಾಭಾರತದ ಆದಿ ಪರ್ವದಲ್ಲಿ ಅರ್ಜುನನು ತೀರ್ಥಯಾತ್ರೆಗೆ ಹೋಗಿದ್ದಾಗ, ಈ ನದಿಯಲ್ಲಿ ಸ್ನಾನ ಮಾಡಿದನೆಂಬ ಇತಿಹಾಸವಿದೆ. ರಾಜಸೂಯಯಾಗದ ಸಮಯದಲ್ಲಿ ನಕುಲನು ಇಲ್ಲಿಗೆ ಬಂದಿದ್ದನೆಂದು ನಂಬಲಾಗಿದೆ. ಅಗಸ್ತ್ಯ ಮಹಾಮುನಿಯು ಲೋಪಾ ಮುದ್ರೆಯನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ ಲೋಪಾಮುದ್ರೆ ಮೊದಲು ನಿರಾಕರಿಸುತ್ತಾಳೆ. ನಂತರ ದಾರಿಯಲ್ಲಿ ತೆರಳುತ್ತಿರುವ ವೇಳೆ ಅಗಸ್ತ್ಯ ಮಹಾಮುನಿ ಭೇಟಿಯಾದಾಗ, ಲೋಪಾಮುದ್ರೆಯು ತನ್ನನ್ನು ಎಂದೂ ಕಾಯಿಸಬಾರದು, ಕಾಯಿಸಿದರೆ ನಾನು ಸ್ವತಂತ್ರಳು. ಇದಕ್ಕೆ ಒಪ್ಪುವುದಾದರೆ ಮದುವೆಯಾಗುವುದಾಗಿ ಹೇಳುತ್ತಾಳೆ. ಅದಕ್ಕೆ ಒಪ್ಪಿದ ಅಗಸ್ತ್ಯ ಲೋಪಾ ಮುದ್ರೆಯನ್ನು ಮದುವೆಯಾಗುತ್ತಾನೆ. ಒಂದು ದಿನ ಅಗಸ್ತ್ಯ ತನ್ನ ಶಿಷ್ಯಂದಿರಿಗೆ ಪಾಠ ಮಾಡುತ್ತಾ ತಲ್ಲೀನನಾಗಿ ಸಮಯವನ್ನು ಮರೆತು ಬಿಡುತ್ತಾನೆ. ಆಗ ಲೋಪಾಮುದ್ರೆಯು ಅಲ್ಲಿಂದ ಹೊರಟು ತಲಕಾವೇರಿಗೆ ಬಂದು ಅಂತರ್ಜಲದಲ್ಲಿ ಹಾರಿ ನದಿಯಾಗಿ ಹರಿಯುತ್ತಾಳೆ. ಅವಳು ಕವೇರನೆಂಬ ಮುನಿಯ ಮಗಳಾದುದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂದಿದೆ. ಅಗಸ್ತ್ಯ ಮುನಿಗಳ ಕಮಂಡಲ ಮಗುಚಿ ಬಿದ್ದಾಗ ಅದರ ನೀರು ಹೊರ ಚೆಲ್ಲಿತು ಅದೇ ಕಾವೇರಿ ನದಿಯಾಯಿತು ಎಂಬ ನಂಬಿಕೆಯಿದೆ.
ಇನ್ನು ಪ್ರಸ್ತುತ ವಿಚಾರಕ್ಕೆ ಬರುವುದಾದರೆ, ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಿಂದ ತಮಿಳುನಾಡಿನ ಗಡಿಯವರೆಗೆ ಕಾವೇರಿ ನದಿಯ ಜಲಾನಯನ ಪ್ರದೇಶ ೨೩,೨೩೧ ಚದರ ಕಿಮೀ. ಕೆಆರ್‌ಎಸ್ ಜಲಾಶಯದ ಕೆಳಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದಲ್ಲಿ ಗಣನೀಯ ಪ್ರಮಾಣದ ಬಸಿ ನೀರು ಉತ್ಪತ್ತಿಯಾಗುತ್ತದೆ. ಇದು ಸಹ ಕಾವೇರಿ ನದಿಯೊಂದಿಗೆ ತಮಿಳುನಾಡನ್ನು ಸೇರುತ್ತದೆ. ಈ ಹರಿವಿನ ಮೇಲೂ ಕರ್ನಾಟಕಕ್ಕೆ ಯಾವುದೇ ನಿಯಂತ್ರಣ ಇಲ್ಲದಿರುವುದರಿಂದ, ನ್ಯಾಯ ಮಂಡಳಿಯಿಂದ ನಿಗದಿಯಾದ ಪ್ರಮಾಣಕ್ಕಿಂತಲೂ ಹೆಚ್ಚಿನ ನೀರು ತಮಿಳು ನಾಡಿಗೆ ಬಿಡುಗಡೆಯಾಗುತ್ತಿದೆ. ಆದರೂ ಸಹ ತಮಿಳುನಾಡು ಈ ಅಣೆಕಟ್ಟಿನ ವಿರುದ್ಧ ನ್ಯಾಯಾಲಯಕ್ಕೆ ದೂರು ತೆಗೆದುಕೊಂಡು ಹೋಗುತ್ತಿರುವುದು ಎಷ್ಟು ಸರಿ? ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಮಧ್ಯಪ್ರವೇಶಕ್ಕೆ ನಿರಾಕರಿಸಿರುವುದು ರಾಜ್ಯದ ಜನತೆ ಆಘಾತವಾಗಿದೆ.
ಕರ್ನಾಟಕ ೧೭ ಬಿಜೆಪಿ ಸಾಂಸದರು ಸೇರಿದಂತೆ ರಾಜ್ಯದಿಂದ ಆಯ್ಕೆಯಾದ ಸಾಂಸದರು ಯಾಕೆ ಮಾತನಾಡುತ್ತಿಲ್ಲ.
ಇತ್ತೀಚಿನ ದಿನಗಳಲ್ಲಿ ಮಾಜಿ ಪ್ರಧಾನಿ ದೇವೆಗೌಡ ಚಟುವಟಿಕೆಗಳು ರಾಜ್ಯದ ಜನತೆಯಲ್ಲಿ ಒಂದು ಭರವಸೆ ಗೂಡು ಮನೆ ಮಾಡಿದೆ.ಇಳಿ ವಯಸ್ಸಿನಲ್ಲಿ ಪಕ್ಷಭೇದ ಮರೆತು ಮೆಟ್ಟೂರು ಜಲಾಶಯ, ಕೆಆರ್‌ಎಸ್ ಅಣೆಕಟ್ಟು, ಕಾವೇರಿ ನದಿ ನೀರು ಪ್ರಸ್ತುತ ಪರಿಸ್ಥಿತಿ, ಮುಂತಾದ ವಿಚಾರಗಳ ಬಗ್ಗೆ ಸ್ವಂತ ಖರ್ಚಿನಲ್ಲಿ ಪ್ರವಾಸ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು. ಇವರ ಆಡಳಿತದ ಅವಧಿಯಲ್ಲಿ ನರ್ಮದಾ ನದಿ ನೀರಿನ ಸಮಸ್ಯೆ ಮತ್ತು ಉತ್ತರಾಖಂಡ್ ತ್ರಿರ್ ಅಣೆಕಟ್ಟು ವಿವಾದ ಬಗೆಹರಿಸಿದ್ದು ಇಲ್ಲಿ ಗಮನಾರ್ಹ ಸಂಗತಿ.
ಶ್ರೀ ನಾಲ್ವಾಡಿ ಕೃಷ್ಣರಾಜ ಒಡೆಯರ ಕೆಆರ್‌ಎಸ್ ಅಣೆಕಟ್ಟು ಕಟ್ಟಿಸುವ ಸಮಯದಲ್ಲಿ ತಮಿಳುನಾಡಿನ ಕೊಡುಗೆ ಏನು ಇರಲಿಲ್ಲ.
ನಾಲ್ವಡಿಯರು ತಮ್ಮ ತಾಯಿ ಮತ್ತು ಧರ್ಮ ಪತ್ನಿಯವರಿಗೆ ಸೇರಿದ ೪ ಮೂಟೆ ವಜ್ರಾಭರಣಗಳನ್ನು ಮುಂಬೈ ಚಿನಿವಾರ ಪೇಟೆಯಲ್ಲಿ ಮಾರಿ ಕೆಆರ್‌ಎಸ್ ಅಣೆಕಟ್ಟು ಕಟ್ಟಿಸಿದರು. ಆದರೆ ಅಣೆಕಟ್ಟೆ ನಿರ್ಮಾಣದಲ್ಲಿ ಶೂನ್ಯ ಕೊಡುಗೆ ನೀಡಿರುವ ತಮಿಳುನಾಡು ಇಂದು ಈ ಅಣೆಕಟ್ಟೆಯಲ್ಲಿ ಸಂಗ್ರಹಿಸುವ ನೀರಿನ ಸಿಂಹ ಪಾಲನ್ನು ಕಸಿದುಕೊಳ್ಳುವಲ್ಲಿ ಯಶಸ್ವಿಯಾಗುತ್ತದೆ ಎಂದರೆ ಇದು ನಮ್ಮ ದುರಂತವೇ ಹೌದು.
ಲೇಖಕರು:ಎಸ್ ಮಂಜುನಾಥ ಬೆನಕನಹಳ್ಳಿ
Discussion about this post