ನವದೆಹಲಿ: ಸೆ2: ಸಿಂಗಾಪುರದಲ್ಲಿ ಹದಿಮೂರು ಮಂದಿ ಭಾರತೀಯರಿಗೆ ಮಾರಣಾಂತಿಕ ಝೀಕಾ ವೈರಸ್ ಸೋಂಕು ತಗಲಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.
ಸೊಳ್ಳೆಗಳಿಂದ ಹರಡುವ ಈ ಕಾಯಿಲೆ ಮೊದಲು ಅಲ್ಲಿನ ಕಟ್ಟಡ ನಿಮರ್ಾಣ ಕಾಮರ್ಿಕರಲ್ಲಿ ಕಾಣಿಸಿಕೊಂಡಿತ್ತು. ಕಟ್ಟಡ ನಿಮರ್ಾಣ ತಾಣದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 12 ಮಂದಿಗೆ ಮೊದಲು ಝೀಕಾ ವೈರಸ್ ಸೋಂಕು ತಗುಲಿತ್ತು. ಇದನ್ನು ಅನುಸರಿಸಿ ಈಗ ಹದಿಮೂರು ಭಾರತೀಯರಿಗೂ ಝೀಕಾ ವೈರಸ್ ಸೋಂಕು ತಗಲಿರುವದು ಪತ್ತೆಯಾಗಿದೆ.
ಸಿಂಗಾಪುರದಲ್ಲಿನ ನಮ್ಮ ದೂತಾವಾಸದ ಪ್ರಕಾರ ಸಿಂಗಾಪುರದಲ್ಲಿ ನೆಲೆಸಿರುವ ಹದಿಮೂರು ಭಾರತೀಯರಿಗೆ ಮಾರಣಾಂತಿಕ ಝೀಕಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಝೀಕಾ ವೈರಸ್ ಸೋಂಕು ಗಭರ್ಿಣಿ ಮಹಿಳೆಯರಲ್ಲಿ ಬಹುಬೇಗ ಕಾಣಿಸಿಕೊಳ್ಳುತ್ತದೆ. ಈ ವೈರಸ್ ತಗಲುವ ಗಭರ್ಿಣಿಯರಿಗೆ ಹುಟ್ಟುವ ಶಿಶುಗಳಿಗೆ ಮೈಕ್ರೋಸೆಫಾಲಿ ಎಂಬ ಜನ್ಮದತ್ತ ನೂನ್ಯತೆಯ ಕಾಯಿಲೆ ಬರುತ್ತದೆ. ಇದರಿಂದಾಗಿ ಶಿಶುಗಳು ತಮ್ಮ ದೇಹದ ಗಾತ್ರಕ್ಕೆ ವ್ಯತಿರಿಕ್ತವಾಗಿ ಸಣ್ಣ ಗಾತ್ರದ ತಲೆಯನ್ನು ಹೊಂದಿರುತ್ತವೆ. ಮಾತ್ರವಲ್ಲದೆ ಮುಂದೆ ಶಿಶುಗಳ ಬೆಳವಣಿಗೆಯನ್ನು ಈ ಕಾಯಿಲೆ ತೀವ್ರವಾಗಿ ಕುಂಠಿತಗೊಳಿಸುತ್ತದೆ ಎಂಬುದಾಗಿ ವಿಶ್ವಸಂಸ್ಥೆಯ ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.
Discussion about this post