ನಂಜನಗೂಡು: ಅ:24; ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರತ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ತತ್ವದಡಿ ಕೆಲಸ ನಿರ್ವಹಿಸುತ್ತಿರುವ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ ಎಂದು ಸಚಿವ ಹೆಚ್.ಸಿ.ಮಹದೇವಪ್ಪ ತೀಳಿಸಿದರು.
ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಮಾತನಾಡಿದ ಅವರು, ಶ್ರೀನಿವಾಸ್ಪ್ರಸಾದ್ ರಾಜೀನಾಮೆ ಬಗ್ಗೆ ಟೀಕಿಸದೆ ಅವರು ಕಾರ್ಯಕ್ರಮ ಮತ್ತು ತತ್ವಗಳ ಮೇಲೆ ಚುನಾವಣೆ ನಡೆಯಬೇಕೆ ಹೊರತು ಸ್ವಾರ್ಥದಿಂದ ಕೂಡಿದ ಚುನಾವಣೆಯಾಗಬಾರದು ಎಂದರು.
ಈ ಕ್ಷೇತ್ರದ ಜನರು ಜಾತ್ಯಾತೀತವಾಗಿ ಶಾಸಕರನ್ನು ಆಯ್ಕೆಮಾಡಿದ್ದಾರೆ ನಾನು ಕಾರ್ಬನ್ ಕಾಪಿಯು ಅಲ್ಲ, ರಬ್ಬರ್ ಸ್ಟಾಂಪೂ ಅಲ್ಲ ಹೋರಾಟದ ಮೂಲಕ ಮೇಲೆ ಬಂದವನು ಎಂದರು.
ಮೈಸೂರು-ನಂಜನಗೂಡು, ಮೈಸೂರು -ಟಿ.ನರಸೀಪುರ, ಮೈಸೂರು- ಕೊಳ್ಳೇಗಾಲ ರಸ್ತೆಗಳಷ್ಟೆ ಅಲ್ಲದೆ 705ಕಿ.ಮೀ.ನಷ್ಟು ದೂರದ ಬೀದರ್ನಿಂದ ಚಾಮರಾಜನಗರ ಮಾರ್ಗದ ರಸ್ತೆ ದೇಶದ 2ನೇ ಅತಿದೊಡ್ಡ ರಸ್ತೆ ಯಾದೆ.
ಕೊಳ್ಳೇಗಾಲ, ಹನೂರು, ಮಲೆ ಮಹದೇಶ್ವರ ಬೆಟ್ಟ, ಬೈಪಾಸ್ ರಸ್ತೆಯನ್ನು ನಿಮರ್ಿಸಿದ್ದೇವೆ ಎಂದ ಅವರು ಈ ತಾಲ್ಲೂಕನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲುಸಲು ಸಕರ್ಾರ ಗಮನ ಹರಿಸಿದೆ ಎಂದು ತಿಳಿಸಿದರು.
ತಾ.ಪಂ.ಮಾಜಿ ಅಧ್ಯಕ್ಷ ನಾಗೇಶ್ರಾಜ್ ಮಾತನಾಡಿ, ಮಾಜಿ ಸಚಿವ ವಿ.ಶ್ರೀನಿವಾಸ್ಪ್ರಸಾದ್ ಈ ಕ್ಷೇತ್ರ ಯಾವೊಬ್ಬ ಕಾರ್ಯಕರ್ತರನ್ನು ಕೇಳದೆ. ಏಕ ಪಕ್ಷೀಯವಾಗಿ ತೀಮರ್ಾನ ಕೈಗೊಂಡಿದ್ದಾರೆ, ಕಾಂಗ್ರೇಸ್ ಕಾರ್ಯಕರ್ತರಿಗೆ ಈ ನಿಟ್ಟಿನಲ್ಲಿ ಆತ್ಮಸ್ಥೈರ್ಯತುಂಬಲು ಸಭೆ ನಡೆಸಲಾಗಿದೆ ಎಂದರು.
ಶಾಸಕರಾದ ಸೋಮಶೇಖರ್, ಜಯಣ್ಣ, ಮಾಜಿ ಸಂಸದರಾದ ಸಿದ್ದರಾಜು, ಶಿವಣ್ಣ, ಪುರಸಭಾ ಅಧ್ಯಕ್ಷೆ ಪುಷ್ಪಲತಾ ಕಮಲೇಶ್ ಹೆಚ್.ಸಿ.ಮಹದೇವಪ್ಪನವರ ಪುತ್ರ ಸುನೀಲ್ ಬೋಸ್, ಮಾಜಿ ಶಾಸಕ ಭಾರತಿ ಶಂಕರ್, ಕಾಂಗ್ರೇಸ್ ಮುಖಂಡರಾದ ದೇವನೂರು ಶಿವಮಲ್ಲು, ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಸೇರಿದಂತೆ ನೂರಾರು ಪ್ರಮುಖರು, ಸುಮಾರು 5ಸಾ ವಿರಕ್ಕೂ ಹೆಚ್ಚೂ ಕಾಂಗ್ರೇಸ್ ಕಾರ್ಯಕರ್ತರುಗಳು ಭಾಗವಹಿಸಿದ್ದರು.
Discussion about this post