Read - < 1 minute
ಮೈಸೂರು: ಸೆ:26; ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಸುಪ್ರಿಂ ಕೋರ್ಟ್ ನಲ್ಲಿ ನಾಳೆ ನ್ಯಾಯ ಸಿಗೋ ನಿರೀಕ್ಷೆಯಿದೆ ಎಂದು
ಸಂಸದೆ ಶೋಭಾ ಕರಂದ್ಲಾಜೆ ಭರವಸೆ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ಸಿಎಂ ಗೆ ನೀಡುವ ಶಿಕ್ಷೆಯನ್ನು ನಾವು ಅನುಭವಿಸುತ್ತೇವೆ.ಇನ್ನು ಸರ್ಕಾರ ಶಾಶ್ವತ ಪರಿಹಾರದ ಬಗ್ಗೆ ಚರ್ಚೆ ಮಾಡಬೇಕು..ಕಾವೇರಿ ನಿರ್ವಹಣಾ ಸಮಿತಿ ರಚನೆ ಬಗ್ಗೆ ಚರ್ಚೆ ಮಾಡಬೇಕು.
ರಾಜ್ಯಕ್ಕೆ ನ್ಯಾಯಾಲಯದಲ್ಲಿ ಪದೇ ಪದೇ ಅನ್ಯಾಯವಾಗುತ್ತಿದೆ. ಸರ್ಕಾ ರ ದ್ವಿಸದಸ್ಯ ಪೀಠ ಬದಲಾವಣೆ ಅಥವಾ ವರ್ಗಾವಣೆ ಬಗ್ಗೆ ಕೇಳಬೇಕಿತ್ತು.
ನ್ಯಾಯಾಲಯ ಹಾಗೂ ಪ್ರಾಧಿಕಾರದಲ್ಲಿ ವಿಚಾರ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಿಂಜರಿಯುತ್ತಿದ್ದಾರೆ.
ಸರ್ಕಾರ ನ್ಯಾಯಾಲಯ ಪ್ರಾಧಿಕಾರಕ್ಕೆ ಹೋಗುವ ಮುನ್ನ ಪ್ರಧಾನಿ ಭೇಟಿ ಮಾಡಬೇಕಿತ್ತು. ರಾಜ್ಯದ ಪರಿಸ್ಥಿತಿ ಬಗ್ಗೆ ಪ್ರಧಾನಿಗೆ ಮಾಹಿತಿಯಿರಬಹುದು ಗೊತ್ತಿಲ್ಲ.ಈ ವಿಚಾರದಲ್ಲಿ ನಾವು ರಾಜಕಾರಣ ಮಾಡೋಲ್ಲ.
ಸಿಎಂಗೆ ಪಿಎಂ ಭೇಟಿ ಮಾಡೋಕೆ ಸಾಧ್ಯವಿಲ್ಲ ಅನ್ನೋದು ಹಾಸ್ಯಾಸ್ಪದ ಎಂದರು.
Discussion about this post