ಕಲ್ಪ ಮೀಡಿಯಾ ಹೌಸ್ | ಸಾಗರ |
ದ್ವಿತೀಯ ಪಿಯುಸಿ ಫಲಿತಾಂಶ Second PUC Result ಪ್ರಕಟಗೊಂಡಿದ್ದು, ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರತಿಭಾನ್ವಿಯ ವಿದ್ಯಾರ್ಥಿನಿ ಡಿ.ಎನ್. ಸೃಷ್ಟಿ ಡಿಸ್ಟಿಂಕ್ಷನ್ ಶ್ರೇಣಿ ಗಳಿಸುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಸಾಗರದ ಟಿ.ಡಿ. ನಾಗರಾಜ್-ನಿರ್ಮಲಾ ದಂಪತಿಗಳ ಪುತ್ರಿ ಸೃಷ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ.
ಅರ್ಥಶಾಸ್ತ್ರದಲ್ಲಿ 100ಕ್ಕೆ 100 ಹಾಗೂ ಕಂಪ್ಯೂಟರ್ ಸೈನ್ಸ್’ನಲ್ಲಿ 99 ಅಂಕಗಳನ್ನು ಗಳಿಸಿರುವ ಶೃತಿ ಒಟ್ಟು 600ಕ್ಕೆ 533 ಅಂಕಗಳನ್ನು ಗಳಿಸುವ ಮೂಲಕ ಡಿಸ್ಟಿಂಕ್ಷನ್’ನಲ್ಲಿ ಪಾಸಾಗಿದ್ದಾರೆ.
ಕಾಲೇಜಿನ ಕೀರ್ತಿ ಹೆಚ್ಚಿಸಿದ ಸೃಷ್ಟಿಗೆ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿನಿಯನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
Also read: ಶೇ.97ರಷ್ಟು ಫಲಿತಾಂಶ ದಾಖಲಿಸಿದ ಶಿವಮೊಗ್ಗದ ಪ್ರತಿಷ್ಠಿತ ಮಹೇಶ್ ಪಿಯು ಕಾಲೇಜು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post