ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಿಪ್ಪಗಿರಿಯ ತಪೋಮೂರ್ತಿ’ ಶ್ರೀ ವಿಜಯದಾಸರ ಆರಾಧನೆಯ ಅಂಗವಾಗಿ ಇಂದು ಸಂಜೆ ಮಲ್ಲೇಶ್ವರಂ ಸುಧೀಂದ್ರನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಜಯದಾಸರ ವಿರಚಿತ ಕೃತಿಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸುಧೀಂದ್ರನಗರದ ಈಜುಕೊಳ ಬಡಾವಣೆ 6ನೇ ಅಡ್ಡರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.
ರೂಪಾ ಪ್ರಭಂಜನ ಮತ್ತು ರಮ್ಯಾ ಸುಧೀರ್ ಇವರಿಂದ ವಿಜಯರಾಯರ ಭಜಿಸೋ ಎಂಬ ಶೀರ್ಷಿಕೆಯಲ್ಲಿ ಶ್ರೀ ವಿಜಯದಾಸರು ರಚಿಸಿದ ಕೃತಿಗಳನ್ನೂ ಮತ್ತು ಇತರ ಹರಿದಾಸರುಗಳು ವಿಜಯದಾಸರನ್ನು ಕುರಿತು ರಚಿಸಿರುವ ಕೃತಿಗಳನ್ನೂ ಹಾಡಲಿದ್ದಾರೆ.
Also read: ನ.13 | ರೌಂಡ್ ಟೇಬಲ್ 166, ಸರ್ಜಿ ಫೌಂಡೇಶನ್’ನಿಂದ ವಿಷೇಷಚೇನರ ಕಿಡ್ಸ್ ಫಿಯೆಸ್ಟಾ
ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಅಮಿತ್ ಶರ್ಮಾ ಹಾಗೂ ತಬಲಾ ವಾದನದಲ್ಲಿ ಶ್ರೀ ಶ್ರೀನಿವಾಸ್ ಕಾಖಂಡಕಿ ಸಾಥ್ ನೀಡಲಿದ್ದಾರೆಂದು ಶ್ರೀಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ನರಹರಿ ರಾವ್ ತಿಳಿಸಿದ್ದಾರೆ.
ವಿಜಯದಾಸರ ಆರಾಧನೆ
ವಿಜಯದಾಸರ ಆರಾಧನೆ ನಿಮಿತ್ತ ಇಂದು ಮುಂಜಾನೆಯಿಂದ ಶ್ರೀಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ `ಚಿಪ್ಪಗಿರಿಯ ತಪೋಮೂರ್ತಿ’ ಶ್ರೀ ವಿಜಯದಾಸರ ಆರಾಧನೆಯ ಪ್ರಯುಕ್ತ ಬೆಳಗ್ಗೆ ಫಲಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ವಿಜಯ ವಿಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಡಾ. ವೆಂಕಟನರಸಿAಹಾಚಾರ್ಯರಿಂದ ಶ್ರೀ ವಿಜಯದಾಸರ ಮಹಿಮೆಗಳು. ವಿಷಯವಾಗಿ ಧಾರ್ಮಿಕ ಪ್ರವಚನ ನಡೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post