ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ನಿರ್ಭಯಾ ಹಂತಕರನ್ನು ಈಗಾಗಲೇ ಗಲ್ಲಿಗೇರಿಸಲಾಗಿದ್ದು ಸುಮಾರು 7.5 ವರ್ಷದ ನಂತರ ಆಕೆಯ ಸಾವಿಗೆ ನ್ಯಾಯ ದೊರೆತಿದೆ. ಆದರೆ, ಹಂತಕರನ್ನು ಗಲ್ಲಿಗೇರಿಸುವ ಕೆಲವೇ ಗಂಟೆಗಳ ಮುನ್ನ ತಿಹಾರ್ ಜೈಲಿನಲ್ಲಿ ಹೈಡ್ರಾಮಾ ನಡೆದಿದೆ.
ತಡರಾತ್ರಿ ನ್ಯಾಯಾಲಯಕ್ಕೆ ಅಪರಾಧಿಗಳ ಪರ ವಕೀಲ ಸಲ್ಲಿಸಿದ್ದ ಅರ್ಜಿ ವಜಾಗೊಂಡ ನಂತರ, ಅಕ್ಷಯ್ ಕುಮಾರ್ ಸಿಂಗ್’ನನ್ನು ಭೇಟಿಯಾಗುವಂತೆ ಆತನ ಕುಟುಂಸ್ಥರಿಗೆ ಅವಕಾಶ ಮಾಡಿಕೊಡುವಂತೆ ಅಪರಾಧಿಗಳ ಪರ ವಕೀಲ ಎ.ಪಿ. ಸಿಂಗ್ ಜೈಲು ಅಧಿಕಾರಿಗಳನ್ನು ಕೇಳಿದ್ದಾರೆ.
ಭಾರತ ಸರ್ಕಾರದ ಸಾಲಿಟರ್ ಜನರಲ್ ತುಷಾರ್ ಮೆಹ್ತಾ ಅವರೂ ಸಹಮತ ವ್ಯಕ್ತಪಡಿಸಿ 10 ನಿಮಿಷಗಳ ಕಾಲ ಅಕ್ಷಯ್ ಸಿಂಗ್ ಕುಟುಂಬ ಸದಸ್ಯರಿಗೆ ಆತನನ್ನು ಭೇಟಿ ಮಾಡಲು ಅವಕಾಶ ಮಾಡಿಕೊಡುವಂತೆ ತಿಹಾರ್ ಜೈಲು ಅಧಿಕಾರಿಗಳನ್ನು ವಿನಂತಿಸಿಕೊಂಡಿದ್ದಾರೆ.
ಆದರೆ, ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಯನ್ನು ಕೊನೆಯ ಗಳಿಗೆಯಲ್ಲಿ ಭೇಟಿಯಾಗಲು ಕಾನೂನಿನಲ್ಲಿ ಅವಕಾಶವಿಲ್ಲದ ಕಾರಣ ಭೇಟಿಯನ್ನು ಜೈಲು ಅಧಿಕಾರಿಗಳು ಸಾರಾಸಗಟಾಗಿ ನಿರಾಕರಿಸಿದ್ದಾರೆ. ಈ ಮೂಲಕ ಕೊನೆಯ ಗಳಿಗೆಯವರೆಗೂ ಏನಾದರೊಂದು ಡ್ರಾಮಾ ಮಾಡುವ ಮೂಲಕ ಗಲ್ಲು ಶಿಕ್ಷೆಯಿಂದ ತಪ್ಪಿಸಲು ಅಪರಾಧಿಗಳ ಪರ ವಕೀಲ ಹಾಗೂ ಕುಟುಂಬಸ್ಥರು ಪ್ರಯತ್ನಿಸಿದ್ದಾರೆ.
Get in Touch With Us info@kalpa.news Whatsapp: 9481252093
Discussion about this post