ಕಲ್ಪ ಮೀಡಿಯಾ ಹೌಸ್
ಕಾಬೂಲ್: ತಾಲಿಬಾನ್ ಉಗ್ರರ ಕೈವಶವಾಗಿರುವ ಕಾಬೂಲ್’ನಿಂದ ಹೊರಟ ಅಮೆರಿಕಾ ವಾಯಸೇನೆಯ ವಿಮಾನದ ಟೈರ್ ಹಿಡಿಕೆ ಬಳಿ ಕುಳಿತಿದ್ದ ಇಬ್ಬರು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ತಾಲಿಬಾನ್ ಉಗ್ರರಿಂದ ಅಲ್ಲಿನ ಜನರು ಎಷ್ಟು ಭಯಭೀತರಾಗಿದ್ದಾರೆ ಎಂದರೆ, ದೇಶದ ತೊರೆಯುವುದಕ್ಕಾಗಿ ಎಲ್ಲ ಪ್ರಯತ್ನಗಳನ್ನೂ ಆರಂಭಿಸಿದ್ದಾರೆ. ಅಲ್ಲಿಂದ ಹೊರಟ ಅಮೆರಿಕಾ ವಾಯುಸೇನೆಯ ವಿಮಾನವನ್ನು ಹತ್ತಲು ಸಾವಿರಾರು ಮಂದಿ ಪ್ರಯತ್ನಿಸಿದ್ದಾರೆ. ಅದೇ ವೇಳೆ ವಿಮಾನದ ಟೈರ್ ಬಳಿಯಿದ್ದ ಜಾಗದಲ್ಲಿ ಕುಳಿತು ಅಲ್ಲಿದ್ದ ಹಿಡಿಕೆಯನ್ನು ಹಿಡಿದುಕೊಂಡು ಕೆಲವರು ಕುಳಿತಿದ್ದರು. ಆದರೆ, ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಇಬ್ಬರು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post