ಕಲ್ಪ ಮೀಡಿಯಾ ಹೌಸ್ | ಮೆಕ್ಸಿಕೋ |
ಸಾವನ್ನಪ್ಪಿರುವುದಾಗಿ ಘೋಷಿಸಿದ ಬಳಿಕ ಅಂತ್ಯಕ್ರಿಯೆಯ ವೇಳೆ 3 ವರ್ಷದ ಬಾಲಕಿ ಎಚ್ಚರಗೊಂಡಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. ದುರಾದೃಷ್ಟವಶಾತ್ ಬಾಲಕಿಯನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮಧ್ಯ ಮೆಕ್ಸಿಕೋ ಸ್ಯಾನ್ ಲೂಯಿಸ್ ಪೊಟೋಸಿ ರಾಜ್ಯದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, 3 ವರ್ಷದ ಬಾಲಕಿ ಕ್ಯಾಮಿಲಾ ಕೆಲವು ದಿನಗಳಿಂದ ವಾಂತಿ ಹಾಗೂ ಹೊಟ್ಟೆ ನೋವಿನಿಂದ ಬಳಲುತ್ತಿದ್ದು, ಅವಳನ್ನು ತಾಯಿ ಮೇರಿ ಜೇನ್ ಮೆಂಡೋಜಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಬಾಲಕಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿತ್ತಾದರೂ, ಬಾಲಕಿಯ ಸ್ಥಿತಿ ಮತ್ತೆ ಹದಗೆಟ್ಟಿದ್ದರಿಂದ ಮತ್ತೆ ಅದೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಈ ವೇಳೆ ವೈದ್ಯರು ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Also read: ಶಿವಮೊಗ್ಗದ ಮಹಿಳೆ ಅಮೆರಿಕದಲ್ಲಿ ಸಾವು











Discussion about this post