ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯಾದ್ಯಂತ ಇಂದು ಸಂಜೆ ವೇಳೆಗೆ ಗುಡುಗು, ಗಾಳಿ ಸಹಿತ ಸುರಿದ ಭಾರೀ ಮಳೆ ತಂಪನೆರೆದಿದ್ದರೂ, ಬಹಳಷ್ಟು ಅನಾಹುತ ಸೃಷ್ಠಿಸುವ ಜೊತೆಯಲ್ಲಿ ವ್ಯಕ್ತಿಯೊಬ್ಬರನ್ನು ಬಲಿ ಪಡೆದಿದೆ.
ಶಿವಮೊಗ್ಗ, ಭದ್ರಾವತಿ, ತೀರ್ಥಹಳ್ಳಿ, ಸಾಗರ ಸೇರಿ ಹಲವು ತಾಲೂಕುಗಳಲ್ಲಿ ಭಾರೀ ಮಳೆಯಾಗಿದೆ.
ಶಿವಮೊಗ್ಗ #Shivamogga ತಾಲೂಕಿನಲ್ಲಿ ಸಾಧಾರಣ ಮಳೆಯಾಗಿದ್ದರೆ, ಭದ್ರಾವತಿಯಲ್ಲಿ #Bhadravathi ಗುಡುಗು, ಗಾಳಿ ಸಹಿತ ಸಂಜೆ ಭಾರೀ ಮಳೆ ಸುರಿದಿದೆ.
ಇನ್ನು, ಸಾಗರ ಪಟ್ಟಣ ಸೇರಿ ತಾಲೂಕಿನಾದ್ಯಂತ ಜೋರು ಮಳೆಯಾಗಿದ್ದು, ಕೆಲವು ಗ್ರಾಮಗಳಲ್ಲಿ ಮರಗಳು ಧರೆಗುರುಳಿವೆ.
ಆಯನೂರು, ಕುಂಸಿ ಪ್ರದೇಶಗಳಲ್ಲೂ ಸಹ ಉತ್ತಮ ಮಳೆಯಾಗಿದ್ದು, ವರುಣನ ಅಬ್ಬರಕ್ಕೆ ಹಲವು ಮರಗಳು ಧರೆ ಉರುಳಿದ್ದು, ವಿದ್ಯುತ್ ತಂತಿ ಸಹ ತುಂಡಾಗಿ ಬಿದ್ದಿದೆ. ಪರಿಣಾಮವಾಗಿ ಹಲವು ಕಡೆ ವಿದ್ಯುತ್ ವ್ಯತ್ಯಯವುಂಟಾಗಿತ್ತು.
ಆಗುಂಬೆ ಘಾಟಿಯ 3ನೇ ತಿರುವಿನಲ್ಲಿ ಮರ ಬಿದ್ದು ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮರ ತೆರವು ಕಾರ್ಯಾಚರಣೆ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post