ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಸರ್ಕಾರ ದ್ವೇಷದ ರಾಜಕಾರಣ ಮಾಡಿ ಹಿಂದೂ ನಾಯಕ ಶರಣ್ ಪಂಪ್‍ವೆಲ್ ಅವರನ್ನು ಗುರಿಯಾಗಿಸಿ ದಾಖಲಿಸಿದ ಪ್ರಕರಣ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ #VHP and Bajarangadal ಶಿವಮೊಗ್ಗ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ #Governer ಮನವಿ ಸಲ್ಲಿಸಲಾಯಿತು.
ಮಂಗಳೂರಿನ ಕಂಕನಾಡಿ ಬಳಿ ಅನುಮತಿ ಪಡೆಯದೇ ರಸ್ತೆಯಲ್ಲೇ ನಮಾಜ್ ಮಾಡಿದ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿದ್ದು, ಅದನ್ನು ರದ್ದುಪಡಿಸಬೇಕು. ಆ ಪ್ರಕರಣದಲ್ಲಿ ಸುಮೊಟೊ ಕೇಸ್ ದಾಖಲಿಸಿದ ಪೊಲೀಸ್ ಅಧಿಕಾರಿಯ ಅಮಾನತನ್ನು ರದ್ದುಪಡಿಸಬೇಕೆಂದು ವಿ.ಹೆಚ್.ಪಿ. ಆಗ್ರಹಿಸಿದೆ.
ಕಳೆದ ವಾರ ಕಂಕನಾಡಿ ಬಳಿ ಮಸೀದಿ ಎದುರು ರಸ್ತೆಯಲ್ಲಿ ಕೆಲವರು ಅನುಮತಿ ರಹಿತವಾಗಿ ನಮಾಜ್ ಮಾಡಿದ್ದರು. ಇದನ್ನು ಗಮನಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಕಾಂಗ್ರೆಸ್ ಪಕ್ಷದ ಹಾಗೂ ಮುಸ್ಲಿಂ ಸಂಘಟನೆಯ ಒತ್ತಡದಿಂದ ಆ ಪ್ರಕರಣವನ್ನು ಬಿ ರಿಪೋರ್ಟ್ ಹಾಕಿ ಪೊಲೀಸರು ಹಿಂದೆ ಸರಿದಿದ್ದರು. ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವ ಸ್ಥಳೀಯ ಪೊಲೀಸರು ನ್ಯಾಯಯುತವಾಗಿ ವರ್ತಿಸಿದ್ದರೂ ಆ ಪೊಲೀಸ್ ಅಧಿಕಾರಿಯನ್ನು ಕಡ್ಡಾಯವಾಗಿ ರಜೆ ಮೇಲೆ ಕಳಿಸಲಾಗಿತ್ತು. ಆದರೆ, ಮಂಗಳೂರಿನ ಜೆರೋನಾ ಶಾಲೆ ಎದುರು ಅನುಮತಿ ಇಲ್ಲದೇ ಜೈಶ್ರೀರಾಮ್ ಹೇಳಿದ್ದಕ್ಕೆ ಕೆಲವು ತಿಂಗಳಹಿಂದೆ ದಾಖಲಾಗಿದ್ದ ಪ್ರಕರಣವನ್ನು ಪೊಲೀಸರು ಇದುವರೆಗೆ ಯಾಕೆ ಬಿ ರಿಪೋರ್ಟ್ ಹಾಕಿಲ್ಲ ಎಂದು ಪ್ರಶ್ನಿಸಿದರು.
Also read: ಪಾಕಿಸ್ಥಾನ ಶಾಕಿಂಗ್ ಸ್ಟೇಟ್ಮೆಂಟ್ | ಪಿಒಕೆ ಭಾರತಕ್ಕೆ ಮರಳಿ ಸಿಗುವ ದಿನ ಹತ್ತಿರವಾಯ್ತಾ?
ಕಾನೂನು ಉಲ್ಲಂಘಿಸಿರುವವರಿಗೆ ತಡೆಯಲು ಹೋದ ಪೊಲೀಸರ ಆತ್ಮಸ್ಥೈರ್ಯವನ್ನು ಸರ್ಕಾರ ತಾರತಮ್ಯ ಮತ್ತು ದ್ವೇಷದ ರಾಜಕಾರಣದಿಂದ ಕುಗ್ಗಿಸುತ್ತಿದೆ. ಹಿಂದೂಗಳ ದಮನ ನೀತಿ ಮುಂದುವರೆಸಿದ್ದು, ಶರಣ್ ಪಂಪ್‍ವೆಲ್ ಅವರ ಮೇಲೆ ಹಾಕಿದ ಪ್ರಕರಣ ಹಿಂದೆ ಪಡೆಯಬೇಕೆಂದು ವಿ.ಹೆಚ್.ಪಿ. ಮನವಿ ಮಾಡಿದೆ.
ಈ ಸಂದರ್ಭದಲ್ಲಿ ವಿ.ಹೆಚ್.ಪಿ. ಜಿಲ್ಲಾಧ್ಯಕ್ಷ ವಾಸುದೇವ್, ಬಜರಂಗದಳ ವಿಭಾಗ ಸಂಯೋಜಕ ರಾಜೇಶ್ ಗೌಡ, ಜಿಲ್ಲಾ ಸಂಯೋಜಕ ಅಂಕುಶ್, ಸುರೇಶ್ ಬಾಬು, ಅರವಿಂದ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post