ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಮೋಡ ಕಟ್ಟಿದ ಕೊಡಲೇ ನನ್ನ ಮನಸ್ಸಿನಲ್ಲಿ ಖುಷಿ ಮಳೆ ಸುರಿಯಲು ಶುರುವಾಗುತ್ತದೆ. ನನಗೆ ಮಳೆಗಾಲ ಎಂದರೆ ಒಂದು ರೀತಿ ಖುಷಿನೂ ಹೌದು. ಇನ್ನೂಂದು ರೀತಿ ಬೇಜಾರು ಹೌದು. ಖುಷಿ ಯಾಕೆಂದರೆ ಮಳೆಯಲ್ಲಿ ನೆನೆಯುವುದು ನೀರಿನಲ್ಲಿ ಆಟ ಆಡುವುದು ಎಲ್ಲವೂ ಸಖತ್ ಮಜಾ ಕೊಡುತ್ತದೆ.
ಟೆರೇಸಿನ ಮೇಲೆ ಹೋಗಿ ನಾನು ಅಕ್ಕ, ತಮ್ಮ ಆಟವಾಡುತ್ತಿದ್ದ ನೆನೆಪುಗಳಿವೆ. ಆದರಲ್ಲೂ ವರ್ಷದ ಮೊದಲ ಮಳೆಯಲ್ಲಿ ನೆನೆಯಬಾರದು ಎಂದು ಅಜ್ಜಿ ಬೈಯುತ್ತಿದ್ದರು, ಆದರೆ ಮೊದಲನೇ ಮಳೆ ಯಾವಾಗಲ್ಲೂ ನನಗೆ ನೆನೆಯುವುದಕ್ಕೆ ತುಂಬಾ ಖುಷಿ ಕೊಡುತ್ತದೆ. ಅಪ್ಪ, ಅಮ್ಮ ಮಾತು ಕೇಳದಯೇ ಓಡಿ ಹೋಗಿ ಮಳೆಯಲ್ಲಿ ನೆನೆದುಕೊಂಡು ಬಂದುಬಿಡುತ್ತದೆ. ಆ ಖುಷಿನೇ ಬೇರೆ ಆ ಮಳೆಯ ಜೊತೆಗಿನ ಸಂಬಂಧವನ್ನು ವರ್ಣಿಸುವುದಕ್ಕೆ ಪದಗಳೆ ಸಾಲದು…!
ಈಗಲೂ ನನ್ನ ಪಾಲಿಗೆ ಮಳೆಗಾಲವೆಂಬುವುದು ಇಡೀ ಜಗತ್ತನ್ನು ಸುಂದರಗೊಳಿಸುವ ಒಂದು ಮಾಯ ಲೋಕ ಅನ್ಸಿಸುತ್ತೆ. ಸುತ್ತಲಿನ ಜಾಗ ಹಸಿರು ಹಸಿರಾಗಿ, ಮಣ್ಣಿನ ವಾಸನೆ ಹರಡಿ ಜಗವೆಲ್ಲ ಸೌಂದರ್ಯಯಿಂದ ನಳನಳಿಸುವ ಹಾಗೆ ಮಾಡುವ ಮಳೆಗಾಲ ನನ್ನ ಪಾಲಿಗೆ ಯವಾಗಲೂ ಖುಷಿಯ ಕಾಲವಾಗಿದೆ…!
ಅಬ್ಬಾ! ಹೊರಗೆ ಹನಿವ ಮಳೆಗೂ ನನ್ನ ಮನಸೊಳಗೆ ಚಿಗುರು ಒಡೆಯುವ ಅದೆಷ್ಟೋ ಆಸೆಗಳು. ಮಳೆಗಾಲವೆಂದರೆ ಧರೆಯ ಮೇಲೆ ಸುರಿವ ಹನಿಗಳ ರೂಪವಷ್ಟೇ ಅಲ್ಲ ಮನದೊಳಗೆ ಮರುಕಳಿಸುವ ನೆನಪುಗಳ ಮೆರವಣಿಗೆಯೂ ಹೌದು.
ನನಗೆ ಮಳೆ ಅಂದ ತಕ್ಷಣ ನೆನಪಾಗುವುದು ಅಲಿಕಲ್ಲು ನನಗೆ ಅದು ತುಂಬಾ ಇಷ್ಟ. ಯಾವಾಗಲೂ ಫ್ರೀಜರ‌್ನಲ್ಲಟ್ಟು ಐಸ್ ಕ್ರೀಂ ತಿನ್ನುತ್ತ ಇರುತ್ತೇವೆ. ಆದರೆ ಅಲಿಕಲ್ಲು ತಿನ್ನುವ ಖುಷಿಯೇ ಬೇರೆ. ಸಣ್ಣವಳಾಗಿದ್ದಾಗಲೂ ಅಲಿಕಲ್ಲು ಮಳೆ ಬಂತು ಎಂದರೆ ಹೊರಗೆ ಓಡುತ್ತಿದ್ದ ಕೈಗೆ ಸಿಕ್ಕಿ ಅಲಿಕಲ್ಲುಗಳನ್ನೆಲ್ಲ ಕೈಯಲ್ಲಿ ಎತ್ತಿಕೊಂಡು ಬಾಯಿಗೆ ತುಂಬಿಕೊಳ್ಳುತ್ತಿದ್ದ ಬಾಯಿಯಲ್ಲಿ ತುಂಬಿ ಮಾತೇ ಆಡಲಾಗದ ಹಾಗೇ ಹಾಗಾಗುತ್ತಿತ್ತು.
ನಾವು ಸಣ್ಣವರಿದ್ದಾಗ ಗುಡುಗು, ಸಿಡಿಲು, ಮಿಂಚಿನಿಂದ ಆರ್ಭಟಿಸುವ ಮಳೆಗೆ ದೊಡ್ಡಮಳೆ, ಸಾಧಾರಣ ಬಂದ ಸಣ್ಣಮಳೆ, ಆ ಕಾಲದಾಗ ಬಂದ ಅವಕಾಳಿ ಮಳೆ ಅಂತಿದ್ರು ನಮ್ಮ ಅಜ್ಜಿ. ಅಂದರೆ ಈಗ ವಾತಾವರಣ ತುಂಬ ಒದಲಾಗಿದೆ. ಮಾರ್ಚ್ ತಿಂಗಳಲ್ಲಿಯೇ ಮಳೆ ಶುರುವಾಗಿಬಿಡುತ್ತದೆ. ಮಳೆಗಾಲದ ಆ ಎಕ್ಸೈಟ್‌ಮೆಂಟ್ ಹೊರಟು ಎಂದು ಸಮ್ಮನಾಗುತ್ತೇನೆ.
ಊರು ಬಂದಲಾದಂತೆ ಮಳೆಯೆ ಸ್ವರೂಪವೂ ಬದಲಾಗುತ್ತದೆ. ಪ್ರತಿ ಮಳೆಯೂ ಹಲವು ನೆನಪುಗಳಿಗೆ ಕಾವು ಕೊಟ್ಟು ಚಿಗುರಿಸುತ್ತದೆ. ಮಳೆಯನ್ನುವುದು ನಮ್ಮನ್ನು ನಾವು ನೋಡಿಕೊಳ್ಳಲು ನಿಸರ್ಗ ಒದಗಿಸುವ ಒಂದು ಅಪೂರ್ವ ಕನ್ನಡಿ. ಈ ಮಳೆ ಕನ್ನಡಿಯಲ್ಲಿ ಕಾಣಿಸಿದ ಕೆಲವು ರುದ್ರರಮಣೀಯ ಬಿಂಬಗಳು ಮನಸ್ಸನ್ನು ಆದ್ರಗೊಳಿಸುವಂತಿವೆ. ಎದೆಯೊಳೆಗೂ ಮಳೆ ಸುರಿಸುವಂತಿದೆ.
ಮಳೆ ಎಂಬುವುದು ಮುಗಿಯದ ಕವಿತೆಯಾಗಿದೆ. ನೋಡುವ ಕಣ್ಣಿಗೆ ಮಳೆ ಎಂಬುವುದು ಕವಿತೆಯಿಂದ ಎಡಬಿಡದೆ ಸುರಿವ ಜಡಿಮಳೆಯಲ್ಲಿ ಎಳೆಕೊಸಿನ ಹಟಮಾರಿತವಿದೆ.
ಮನೆ ಹೇಗಿರೊತ್ತದೋ ಹಾಗೇ ಮಳೆಯ ಭಾವಕೊಡ ಅದನ್ನು ಧ್ಯಾನಿಸಿದಷ್ಟೂ ಅದು ಎದೆಯ ಒಳಗಿಳಿಯುತ್ತದೆ. ಮಳೆ ಬಂದಾಗ ಮನಸ್ಸಿನಲ್ಲಿ ನೂರು ನೂರು ನೆನಪುಗಳ ಸಾಲು ಮರುಕಳಿಸುತ್ತದೆ.
Get in Touch With Us info@kalpa.news Whatsapp: 9481252093
Discussion about this post