ಕಲ್ಪ ಮೀಡಿಯಾ ಹೌಸ್ | ಮುಂಬೈ |
ಪ್ರಧಾನಿ ನರೇಂದ್ರ ಮೋದಿ PMNarendraModi ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ UPCMYogiAdithyanath ಅವರನ್ನು ಆತ್ಮಹತ್ಯಾ ದಾಳಿಯ ಮೂಲಕ ಹತ್ಯೆ ಮಾಡುವುದಾಗಿ ಬೆದರಿಕೆ ಕರೆ ಬಂದಿದ್ದು, ಈ ಕುರಿತಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
ದಾವೂದ್ ಇಬ್ರಾಹಿಂ DaoudIbrahim ತಂಡಕ್ಕೆ ಸೇರಿದ ವ್ಯಕ್ತಿ ಎನ್ನಲಾದ ಓರ್ವ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಕರೆ ಮಾಡಿದ್ದಾನೆ ಎಂದು ವರದಿಯಾಗಿದ್ದು, ಈತನನ್ನು ಇಂದು ಬಂಧಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ,ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮುಂಬೈನ್ ಜೆಜೆ ಆಸ್ಪತ್ರೆಯನ್ನೂ ಸಹ ಆತ್ಮಹತ್ಯಾ ದಾಳಿ ಮೂಲಕ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ.
Also read: ಹಲಾಲ್ ಸರ್ಟಿಫಿಕೇಟ್ ಫುಡ್, ಔಷಧಿ ಸೇರಿ ಹಲವು ವಸ್ತುಗಳ ಬ್ಯಾನ್ ಮಾಡಿದ ಯೋಗಿ ಸರ್ಕಾರ
ಮುಂಬೈ ಪೊಲೀಸರು, ದಾವೂದ್ ಇಬ್ರಾಹಿಂ ಗ್ಯಾಂಗ್ ಹೆಸರಿನಲ್ಲಿ ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ಬೆದರಿಕೆ ಕರೆಗಳನ್ನು ಹಾಕಿದ್ದಕ್ಕಾಗಿ ವ್ಯಕ್ತಿಯನ್ನು ಬಂಧಿಸಲಾಗಿದೆ. ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಸ್ಫೋಟಿಸಲು ಗ್ಯಾಂಗ್ ಹೇಳಿತ್ತು ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ. ಈತನ ವಿರುದ್ಧ ಐಪಿಸಿ 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















