ಕಲ್ಪ ಮೀಡಿಯಾ ಹೌಸ್ | ಥೈವಾನ್ |
ಕೈಹಿಡಿದ ತನ್ನೊಂದಿಗೆ ಸೆಕ್ಸ್ ಮಾಡುವುದಕ್ಕೂ ಕೊನೆಗೆ ಮಾತನಾಡುವುದಕ್ಕೂ ಸಹ ಹಣ ಕೇಳಿದ ಪತ್ನಿಯ ಮನಃಸ್ಥಿತಿಯಿಂದ ನೊಂದ ಪತಿ ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ಆತನಿಗೆ ಡೈವೋರ್ಸ್ ಸಹ ದೊರಕಿರುವ ವಿಚಿತ್ರ ಘಟನೆ ಥೈವಾನ್’ನಲ್ಲಿ ನಡೆದಿದೆ.
ತನ್ನ ಪತ್ನಿ ಬಳಿಯಲ್ಲಿ ತಾನು ಪ್ರತಿ ಬಾರಿ ಮಾತನಾಡಲು ಹಾಗೂ ಸೆಕ್ಸ್ ಮಾಡಲೂ ಸಹ ಇಂತಿಷ್ಟು ಎಂದು ಹಣವನ್ನು ನಿಗದಿ ಮಾಡಿದ್ದಾಳೆ. ಆಕೆಯ ವರ್ತನೆಯಿಂದ ನನಗೆ ಆಘಾತವಾಗಿದ್ದು, ವಿಚ್ಛೇದನ ನೀಡಬೇಕು ಎಂದು ನ್ಯಾಯಾಲಯದ ಮೊರ ಹೋಗಿದ್ದ. ಈತನ ಮನವಿಯನ್ನು ಆಲಿಸಿ, ಸಾಕ್ಷಿಗಳನ್ನು ಪರಿಶೀಲಿಸಿ ಆಕೆಗೆ ಡೈವೋರ್ಸ್ ನೀಡಿದೆ.
Also read: ಹೊಸನಗರ | ಘೋರ ಘಟನೆ | 2 ಮಕ್ಕಳನ್ನು ಬಾವಿಗೆ ತಳ್ಳಿ ತಾಯಿಯೂ ಹಾರಿ ಆತ್ಮಹತ್ಯೆ

ತನ್ನ ಪತಿಯೊಂದಿಗೆ ಲೈಂಗಿಕ ಕ್ರಿಯೆಯನ್ನು ತಿರಸ್ಕರಿಸುತ್ತಿದ್ದಳು. ಇವರಿಬ್ಬರ ನಡುವೆ ನೇರ ಸಂಭಾಷಣೆಗಿಂತ ಸಂದೇಶ ಕಳುಹಿಸುವ ಅಪ್ಲಿಕೇಷನ್’ಗಳಲ್ಲೇ ಹೆಚ್ಚು ಸಂಭಾಷಣೆ ನಡೆಯುತ್ತಿತ್ತು. ನೇರವಾಗಿ ಮಾತನಾಡಲು ಇಂತಿಷ್ಟು ಎಂದು ಹಣವನ್ನೂ ಸಹ ನಿಗದಿ ಮಾಡಿದ್ದಳು ಎಂದು ಪತಿ ಆರೋಪಿಸಿದ್ದನು. ಈತನ ಮನವಿಯಂತೆ ನ್ಯಾಯಾಲಯ ಡೈವೋರ್ಸ್ ನೀಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post