ಕಲ್ಪ ಮೀಡಿಯಾ ಹೌಸ್ | ಚಿಕ್ಕಮಗಳೂರು |
ರಜೆಯ ಪ್ರವಾಸಕ್ಕೆಂದು ಬೆಂದಿದ್ದ ಬೆಂಗಳೂರಿನ ಟೆಕ್ಕಿಯೊಬ್ಬರು ಜಲಪಾತದಲ್ಲಿ ಮುಳುಗಿ #Techie died by drown in waterfall ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ಸಮೀಪದ ಹೆಬ್ಬೆಯಲ್ಲಿ ನಡೆದಿದೆ.
ಮೃತ ಟೆಕ್ಕಿಯನ್ನು ಛತ್ತೀಸ್ ಘಡ ಮೂಲದ ಅಮಿತ್ ಕುಮಾರ್(30) ಎಂದು ಗುರುತಿಸಲಾಗಿದೆ.
Also read: ವಕ್ಫ್ ಬೋರ್ಡ್’ನಿಂದ ಲ್ಯಾಂಡ್ ಜಿಹಾದ್ | ಜನರಿಗೆ ದ್ರೋಹ | ಶಾಸಕ ಡಿ.ಎಸ್. ಅರುಣ್ ವಾಗ್ದಾಳಿ
ಮೃತ ಅಮಿತ್ ಸಲಾಂ ಕರೀಂ ಎಂಬ ಸ್ನೇಹಿತನ ಜೊತೆ ಮೂರು ದಿನಗಳ ಹಿಂದೆ ಕಾಫಿನಾಡಿಗೆ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ.
ಮೃತ ವ್ಯಕ್ತಿ ಹಾಗೂ ಸಲಾಂ ಕರೀಂ ಬೆಂಗಳೂರಿನಲ್ಲಿ ಒಂದೇ ರೂಂನಲ್ಲಿದ್ದು, ಬೇರೆ-ಬೇರೆ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ರಜೆಯಿದ್ದ ಕಾರಣ ಸ್ನೇಹಿತರು ಪ್ರವಾಸಕ್ಕೆಂದು ಆಗಮಿಸಿದ್ದರು. ಈ ವೇಳೆ ಜಲಪಾತದ ಬಲಿ ತೆರಳಿದಾಗ ಈ ಘಟನೆ ನಡೆದಿದೆ.
ಘಟನೆ ಸಂಬಂಧಿಸಿದಂತೆ ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post