No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Saturday, September 12, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ರಾಜಧಾನಿಯಲ್ಲಿ 4-5 ರಂದು ಸಂಗೀತ ಮಹೋತ್ಸವ | ವಿದುಷಿ ರಂಜಿನಿ ಸಿದ್ಧಾಂತಿ ಸಾರಥ್ಯ

6ನೇ ವರ್ಷದ ನಾದ- ವಾದನ ಸಮಾರಾಧನೆ | ಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್ ಆಯೋಜನೆ

kalpa News by kalpa News
January 3, 2025
in Special Articles
0
ರಾಜಧಾನಿಯಲ್ಲಿ 4-5 ರಂದು ಸಂಗೀತ ಮಹೋತ್ಸವ | ವಿದುಷಿ ರಂಜಿನಿ ಸಿದ್ಧಾಂತಿ ಸಾರಥ್ಯ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ವಿಶೇಷ ಲೇಖನ-ಶಿವಮೊಗ್ಗ ರಾಮು  |

ಯಶವಂತಪುರದ ಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್ ಹಾಗೂ ಭೋಪಾಲ್‌ನ ಸ್ವರಾಲಯ ಸಂಗೀತ ಅಕಾಡೆಮಿ ಸಂಯುಕ್ತ ಆಶ್ರಯದಲ್ಲಿ 6ನೇ ವರ್ಷದ ಸಂಗೀತ ಮಹೋತ್ಸವ ಜ. 4 ಮತ್ತು 5 ರಂದು ಆಯೋಜನೆಗೊಂಡಿದೆ.

ಮಲ್ಲೇಶ್ವರ 6ನೇ ಮುಖ್ಯರಸ್ತೆ 17ನೇ ತಿರುವಿನ ಭೂಮಿಕಾ ಸಭಾಂಗಣದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ದಿಟ್ಟ ಮಹಿಳೆಯ ದೊಡ್ಡ ಸಾಹಸ
ಮೃದಂಗ #Mridangam ವಾದನದಲ್ಲಿ ಮಹಿಳಾ ಕಲಾವಿದರು ಅಪರೂಪ. ಅದರಲ್ಲೂ ಗಾಯನ-ವಾದನ ಸಮನ್ವಯ ಮಾಡಿಕೊಂಡವರು ವಿರಳಾತಿ ವಿರಳ. ಈ ಸ್ಥಾನ ತುಂಬಿದವರಲ್ಲಿ ವಿದುಷಿ ರಂಜಿನಿ ಸಿದ್ಧಾಂತಿ ಅಗ್ರ ಪಂಕ್ತಿಯವರು. ಮೊದಲ ಪಾಠಗಳನ್ನು ಮರಿಯಣ್ಣ ಅವರಲ್ಲಿ ಕಲಿತು, ನಂತರ ವಿದ್ವಾನ್ ರವಿ ಅವರ ಗರಡಿಯಲ್ಲಿ ಪಳಗಿದರು ರಂಜಿನಿ.
ಪಾಠ- ಕಛೇರಿ ಇವರಿಗೆ ಎರಡು ಕಣ್ಣು. ಮತ್ತೂ ನಾನು ಕಲಿಯುತ್ತಲೇ ಇರಬೇಕು ಎಂದು ಹಿರಿಯ ವಿದ್ವಾನ್ ಸುಧೀಂದ್ರ ಅವರಲ್ಲಿ ಶಿಷ್ಯತ್ವ ಮುಂದುವರಿಸಿರುವುದು ರಂಜಿನಿ ಅವರ ಕಲಿಕಾಸಕ್ತಿಗೆ ಕನ್ನಡಿ ಹಿಡಿದಿದೆ. ವಿದುಷಿ ಆಗಿದ್ದರೂ, ಅನೇಕ ದಿಗ್ಗಜರಿಗೆ ಕಛೇರಿ ಗಳಲ್ಲಿ ಮೃದಂಗ ಸಾಥ್ ನೀಡಿ ಖ್ಯಾತ ರಾಗಿದ್ದರೂ ಅಹಂ ತೊರೆದು ಮತ್ತೆ ಮತ್ತೆ ನಾನು ಕಲಿಕಾ ಕಮ್ಮಟದಲ್ಲೇ ಕಲಿಯಬೇಕು ಎಂಬ ಮನೋ ಭಾವದ ಸಾಧಕಿಯಾಗಿದ್ದಾರೆ ಈ ರಂಜಿನಿ ಎಂಬುದೇ ಮಹತ್ವದ ಸಂಗತಿ. ಯಾವತ್ತೂ ಗುರುವೆಂಬುದೇ ಪ್ರತಿಮೆ. ನಾನು ಕೇವಲ ಪ್ರತಿಬಿಂಬ ಎಂಬುದು ಅವರ ಅಂತರಂಗ ಸಂಕಲ್ಪ. ಬಹಿರಂಗದಲ್ಲಿ ಇದು ಬಹುವಿಧ ಕಲಾ ಚಟುವಟಿಕೆಗಳನ್ನು ನಡೆಸಲು ಪ್ರೇರಣೆ ನೀಡುತ್ತ ಇರುವುದು ಮಾದರಿ ಆಗಿದೆ.

Also Read>> ಶಾಕಿಂಗ್! MLC ಡಾ.ಸರ್ಜಿ ಹೆಸರಿನಲ್ಲಿ ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ | ಯಾರಿಗೆಲ್ಲಾ ಹೋಗಿದೆ?

ಕಾರ್ಯಕ್ರಮ ವಿವರ
ಜ. 4ರ ಬೆಳಗ್ಗೆ 9:30ಕ್ಕೆ ಖ್ಯಾತ ಮೃದಂಗ ವಿದ್ವಾಂಸ ಡಾ. ಎನ್.ಜಿ. ರವಿ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿಶ್ವವಿಖ್ಯಾತ ಮೃದಂಗ ವಿದ್ವಾಂಸ ವಿದ್ವಾನ್ ಎಚ್.ಎಸ್. ಸುಧೀಂದ್ರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಬೆಳಗ್ಗೆ 10ಕ್ಕೆ ಸಂಗೀತ ಪ್ರಾತ್ಯಕ್ಷಿಕೆ ಆಯೋಜನೆಗೊಂಡಿದೆ. ಮಾನಸಿಕ ಸ್ಥಿಮಿತದಲ್ಲಿ ಸಂಗೀತದ ಪಾತ್ರ-ಸದ್ಗುರು ಶ್ರೀ ತ್ಯಾಗರಾಜರ ಕೃತಿಗಳ ಸಾರ-ವಿಷಯ ಕುರಿತು ವಿದುಷಿ ಡಾ. ಮೀನಾಕ್ಷಿ ರವಿ ಅವರು ಪ್ರೌಢ ಉಪನ್ಯಾಸದೊಂದಿಗೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ. ನಂತರ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ.

ಕಳೆದ 25 ವರ್ಷಗಳಿಂದ ಮೃದಂಗ ಮತ್ತು ಶಾಸ್ತ್ರೀಯ ಸಂಗೀತ ಪಾಠ ಮಾಡುತ್ತಿರುವ ನಾನು ಕಲಾವಿದರೂ ಆಗಿದ್ದ ನನ್ನ ತಂದೆ, ತಾತ, ಅಜ್ಜಿ ಹೆಸರಿನಲ್ಲಿ ಈವರೆಗೆ 5 ಸಂಗೀತ ಮಹೋತ್ಸವ ಮಾಡಿರುವೆ. ಇದು ನಮಗೆ ಬಹು ದೊಡ್ಡದಾದ ಹಬ್ಬ.ನಮ್ಮ ವಿದ್ಯಾರ್ಥಿಗಳ ಸಹಕಾರ, ವಿದ್ವಾಂಸರ ಸೌಜನ್ಯ, ಹಿರಿಯರ ಆಶೀರ್ವಾದದಿಂದ ನಮ್ಮ 6ನೇ ವರ್ಷದ ಮಹೋತ್ಸವದ ಕಳೆ ಹೆಚ್ಚಿದೆ.
-ವಿದುಷಿ ರಂಜಿನಿ ಸಿದ್ಧಾಂತಿ, ಕಲಾವಿದೆ

ಲಯ ವೈಭವ’ ತನಿ ಆವರ್ತನ
ಮಧ್ಯಾಹ್ನ 12:30ಕ್ಕೆ ‘ಲಯ ವೈಭವ’ ತನಿ ಆವರ್ತನ ಇದೆ. ವಿದ್ವಾನ್ ಡಾ.ಎಂ.ಜಿ. ರವಿ ಮೃದಂಗ, ವಿದ್ವಾನ್ ಗುರು ಪ್ರಸನ್ನ ಅವರು ಖಂಜಿರ ವಾದನದಲ್ಲಿ ರಂಜಿಸಲಿದ್ದಾರೆ. ಮಧ್ಯಾಹ್ನ 2:45 ಕ್ಕೆ ಆಯೋಜನೆಗೊಂಡಿರುವ ಕಾರ್ಯಕ್ರಮದಲ್ಲಿ ವಿದ್ವಾನ್ ಎಂ. ಶೇಷಗಿರಿ ಆಚಾರ್ಯ ಮಾಡಿರುವ ರಚನೆಗಳ ಶಿಬಿರದಲ್ಲಿ ಭಾಗವಹಿಸಿದ್ದ ಕಲಾವಿದರಿಂದ ಕಾರ್ಯಕ್ರಮ ನೆರವೇರಲಿದೆ ಮಧ್ಯಾಹ್ನ 3:20ಕ್ಕೆ ವಿದ್ಯಾರ್ಥಿಗಳಿಂದ ಮೃದಂಗ ವಾದನ ಕಾರ್ಯಕ್ರಮವಿದೆ.

Also Read>> ಇರುವಕ್ಕಿ | ರೈತರ ತೋಟಗಳಿಗೆ ಕೃಷಿ ವಿವಿ ತಜ್ಞರ ಭೇಟಿ | ಏನೆಲ್ಲಾ ಸೂಚನೆ ಕೊಟ್ಟರು?

ವಿದ್ವಾನ್ ಸುಧೀಂದ್ರ ಅವರಿಗೆ ಪ್ರಶಸ್ತಿ
ಜ.4ರ ಸಂಜೆ 4:30ಕ್ಕೆ ಪ್ರಶಸ್ತಿ ಪ್ರದಾನ ನೆರವೇರಲಿದೆ. ಖ್ಯಾತ ಮೃದಂಗ ವಿದ್ವಾನ್ ಎಚ್.ಎಸ್. ಸುಧೀಂದ್ರ ಅವರಿಗೆ ‘ನಾದಲಯ ಸಿದ್ದಾಂತ’ ಪ್ರಶಸ್ತಿ (ಸರೋಜಾ- ಭೀಮಭಟ್ ಸಿದ್ಧಾಂತಿ ಸ್ಮರಣಾರ್ಥ)ಪ್ರದಾನ ನೆರವೇರಲಿದೆ. ಹಿರಿಯ ಗಾಯಕ ವಿದ್ವಾನ್ ಎಸ್. ಶಂಕರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಖ್ಯಾತ ಕೊಳಲು ವಿದ್ವಾಂಸ ಎಸ್.ಎ. ಶಶಿಧರ ಹಾಗೂ ವಿದ್ವಾನ್ ಡಾ.ಎನ್.ಜಿ. ರವಿ ಭಾಗವಹಿಸಲಿದ್ದಾರೆ.

ಕಲಾವತಿ ಅವಧೂತ ಗಾಯನ
ಜ. 4ರ ಸಂಜೆ 6ಕ್ಕೆ ಹಮ್ಮಿಕೊಂಡಿರುವ ವಿಶೇಷ ಕಛೇರಿಯಲ್ಲಿ ಹಿರಿಯ ಕಲಾವಿದೆ ಕಲಾವತಿ ಅವಧೂತ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡಿ ರಂಜಿಸಲಿದ್ದಾರೆ.Kalahamsa Infotech private limitedವಿವೇಕ ಸದಾಶಿವಂ ಗಾನಸುಧೆ
ಜ.5ರ ಬೆಳಗ್ಗೆ 9:15ಕ್ಕೆ ಮೃದಂಗ ವಿದ್ವಾಂಸ ಎಚ್.ಎಲ್. ಗೋಪಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 9:30 ರಿಂದ 10.30 ರವರೆಗೆ ವಿದ್ಯಾರ್ಥಿಗಳಿಂದ ಕಾರ್ಯಕ್ರಮವಿದೆ. 10:45 ಕ್ಕೆ ಖ್ಯಾತ ಗಾಯಕ ವಿದ್ವಾನ್ ವಿವೇಕ ಸದಾಶಿವಂ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನೆರವೇರಲಿದೆ. ಮೃದಂಗದಲ್ಲಿ ವಿದ್ವಾನ್ ಸುಧೀಂದ್ರ, ಪಿಟೀಲು ವಾದನದಲ್ಲಿ ಮತ್ತೂರು ಆರ್. ಶ್ರೀನಿಧಿ, ಘಟದಲ್ಲಿ ಓಂಕಾರ ರಾವ್ ಸಹಕಾರ ನೀಡಲಿದ್ದಾರೆ ಎಂದು ಕಾರ್ಯಕ್ರಮದ ಮುಖ್ಯ ಆಯೋಜಕಿ, ವಿದುಷಿ ರಂಜಿನಿ ಸಿದ್ಧಾಂತಿ ತಿಳಿಸಿದ್ದಾರೆ.

ಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್
ಬೆಂಗಳೂರಿನಲ್ಲಿ ಸಂಗೀತ ಸಾಮ್ರಾಜ್ಯ ಹೆಸರಿನ ಅಡಿಯಲ್ಲಿ ಸರಣಿ ಸಂಗೀತ ಕಛೇರಿಗಳು ಮತ್ತು ಗಾಯನ ಸಮರ್ಪಣಾ ಶೀರ್ಷಿಕೆ ಅಡಿಯಲ್ಲಿ ಪ್ರತಿ
ವರುಷವೂ ಶಾಸ್ತ್ರೀಯ ಸಂಗೀತ ಸೇವೆಯನ್ನು ಸಂಪನ್ನಗೊಳಿಸಲಾಗುತ್ತಿದೆ. ಹಿರಿಯ ಸಂಗೀತ ವಿದ್ವನ್ಮಣಿಗಳಿಗೆ ಪ್ರಶಸ್ತಿ ಸಹಿತ ಗೌರವಾದರಗಳನ್ನು ನೀಡುವುದು ಟ್ರಸ್ಟ್ ನ ಪ್ರಮುಖ ಧ್ಯೇಯವಾಗಿದೆ. ಕರ್ಣಾಮೃತ ಮತ್ತು ಶ್ರೀ ಪುರಂದರ ಪಂಚರತ್ನ ಕೃತಿ ಎಂಬ ಪುಸ್ತಕ ಮತ್ತು ಸಿ.ಡಿ.ಗಳನ್ನು ಟ್ರಸ್ಟ್ ಈಗಾಗಲೇ ಬಿಡುಗಡೆ ಮಾಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4
Tags: BENGALURUFluteKannada News WebsiteLatest News KannadaMridangamMusic Concertಕೊಳಲುಭೋಪಾಲ್:ಮೃದಂಗಯಶವಂತಪುರಸಂಗೀತ ಮಹೋತ್ಸವಸುಭದ್ರಮ್ಮ ವೆಂಕಟಪ್ಪ ಸಂಗೀತ ವಿದ್ಯಾಲಯ ಟ್ರಸ್ಟ್ಸ್ವರಾಲಯ ಸಂಗೀತ ಅಕಾಡೆಮಿ
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ಶಾಕಿಂಗ್! MLC ಡಾ.ಸರ್ಜಿ ಹೆಸರಿನಲ್ಲಿ ಮೂವರಿಗೆ ವಿಷಯುಕ್ತ ಸ್ವೀಟ್ ಬಾಕ್ಸ್ ರವಾನೆ | ಯಾರಿಗೆಲ್ಲಾ ಹೋಗಿದೆ?

Next Post

ಗಮನಿಸಿ ! ಜ.4ರಂದು ಶಿವಮೊಗ್ಗ ಗ್ರಾಮಾಂತರದ ಈ ಕೆಳಗಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

kalpa News

kalpa News

Next Post
ಗಮನಿಸಿ! ಮೇ 21ರಂದು ಶಿವಮೊಗ್ಗ ನಗರದ ಈ ಭಾಗದಲ್ಲಿ ವಿದ್ಯುತ್ ಇರುವುದಿಲ್ಲ

ಗಮನಿಸಿ ! ಜ.4ರಂದು ಶಿವಮೊಗ್ಗ ಗ್ರಾಮಾಂತರದ ಈ ಕೆಳಗಿನ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL